CRICKET : ಕೊಹ್ಲಿ – ರೋಹಿತ್ ಅದ್ಭುತ ಜೊತೆಯಾಟ : ಭಾರತಕ್ಕೆ 168 ರನ್ ಗೆಲುವು

ಕೋಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 168 ರನ್ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ ನಾಯಕ ವಿರಾಟ್ ಕೊಹ್ಲಿ (131) ಹಾಗೂ ರೋಹಿತ್ ಶರ್ಮಾ (104) ಅಮೋಘ ಶತಕಗಳ ನೆರವಿನಿಂದ 375 ರನ್ ಬೃಹತ್ ಮೊತ್ತ ಕಲೆಹಾಕಿತು. ಮನಿಶ್ ಪಾಂಡೆ 50 ಹಾಗೂ ಧೋನಿ 49 ರನ್ ಗಳಿಸಿ ಅಜೇಯರಾಗುಳಿದರು. ಏಂಜೆಲೋ ಮ್ಯಾಥ್ಯೂಸ್ 2 ವಿಕೆಟ್ ಪಡೆದರು.

Virat Kohli and Rohit Sharma slammed centuries as India scored 375/5 in the fourth ODI against Sri Lanka in Colombo.

ಗುರಿಯನ್ನು ಬೆನ್ನತ್ತಿದ ಲಂಕಾ ತಂಡ, 42.4 ಓವರ್ ಗಳಲ್ಲಿ 207 ರನ್ ಗಳಿಸಿ ಆಲೌಟ್ ಆಯಿತು. ಏಂಜೆಲೋ ಮ್ಯಾಥ್ಯೂಸ್ 70 ಹಾಗೂ ಮಿಲಿಂದ ಸಿರವರ್ದನಾ 39 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸಮನ್ ಗಳ್ಯಾರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಭಾರತದ ಪರ ಜಸ್ಪ್ರೀತ್ ಬುಮ್ರಾಹ್, ಹಾರ್ದಿಕ್ ಪಾಂಡ್ಯ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. 29 ನೇ ಶತಕ ದಾಖಲಿಸಿದ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Comments are closed.