Cricket : Ind vs NZ -ಕಂಗೆಟ್ಟ ಕೀವಿಸ್ ನಾಯಕ, ವಿಶ್ವಾಸದ ಅಲೆಯಲ್ಲಿ ರೋಹಿತ್ ಶರ್ಮಾ..

ಭಾರತದ ವಿರುದ್ಧ ಸತತ ಎರಡು ಏಕದಿನ ಪಂದ್ಯಗಳ ಸೋಲುಗಳಿಂದ ನ್ಯೂಜಿಲೆಂಡ್ ತಂಡ ಮುಖಭಂಗ ಅನುಭವಿಸಿದೆ.

ಇಲ್ಲಿ ನಡೆದ ಪಂದ್ಯದಲ್ಲಿ ಭಾರತ 90 ರನ್ ಗಳಿಂದ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿತು. ಬಳಿಕ ಮಾತನಾಡಿದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಸತತ ಸೋಲುಗಳು ಬೇಸರ ತಂದಿವೆ ಎಂದಿದ್ದಾರೆ.

ಬ್ಯಾಟ್ಸ್ ಮನ್ಸ್ ದೊಡ್ಡ ಮೊತ್ತ ಹಿಂಬಾಲಿಸುವಲ್ಲಿ ಎಡವಿದ್ದಾರೆ. ಬೌಲರ್ ಗಳು ದುಬಾರಿಯಾದರು. ಆರಂಭದಲ್ಲಿ ವಿಕೆಟ್ ಗಳು ಪಟಪಟನೇ ಬಿದ್ದಿದ್ದರಿಂದ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ವಿಕೆಟ್ ಗಳು ಉಳಿದಿದ್ದಲ್ಲಿ ಪ್ರಯತ್ನ ಮಾಡಬಹುದಿತ್ತು ಎಂದು ತಿಳಿಸಿದ್ದಾರೆ.

ಭಾರತ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಗೆಲುವಿನಲ್ಲಿ ಆರಂಭಿಕ ರೋಹಿತ್ ಶರ್ಮಾ ಅವರು ಕಾಣಿಕೆ ಮಹತ್ವದ್ದಾಗಿದೆ.

ಪಂದ್ಯದ ಬಳಿಕ ಮಾತನಾಡಿದ ರೋಹಿತ್, ಪಿಚ್ ವರ್ತನೆಯ ಬಗ್ಗೆ ಅರಿವು ಇರಲಿಲ್ಲ. ಪಿಚ್ ನಲ್ಲಿ ಸಮಯ ಕಳೆದಂತೆ ವರ್ತನೆ ತಿಳಿಯಿತು. ರನ್ ಹಿಗ್ಗಿಸುವುದು ಒಂದೇ ಗುರಿಯಾಗಿತ್ತು ಎಂದು ತಮ್ಮ ಆಟದ ತಂತ್ರವನ್ನು ವಿವರಿಸಿದರು.

‘ಶಿಖರ್ ಧವನ್ ಹಾಗೂ ನಾನು, ಪರಸ್ಪರರ ಆಟ ಬಲ್ಲೆವು. ಧವನ್ ಜೊತೆ ಇನ್ನಿಂಗ್ಸ್ ಕಟ್ಟುವುದೇ ಒಂದು ಆನಂದ. ಜೊತೆಯಾಟ ತಂಡಕ್ಕೆ ಮಹತ್ವದಾಗಿತ್ತು’ ಎಂದು ರೋಹಿತ್ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.