Cricket : ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಅಲ್ಬೀ ಮಾರ್ಕೆಲ್

ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಅಲ್ಬೀ ಮಾರ್ಕೆಲ್ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದು, ತಮ್ಮ ಎರಡು ದಶಕಗಳ ಸುದೀರ್ಘ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

‘ ಕ್ರಿಕೆಟ್ ಮೈದಾನದಲ್ಲಿ ನನ್ನ ಸಮಯ ಮುಗಿದಿದೆ ಎಂದೆನಿಸುತ್ತಿದೆ. ಆದ್ದರಿಂದ ನಾನು ನಿವೃತ್ತಿಯನ್ನು ಘೋಷಿಸಲು ಬಯಸುತ್ತಿದ್ದೇನೆ ‘ ಎಂದು ಅಲ್ಬೀ ಮಾರ್ಕೆಲ್ ತಿಳಿಸಿದ್ದಾರೆ. ಅಲ್ಬೀ ಮಾರ್ಕೆಲ್ ದಕ್ಷಿಣ ಆಫ್ರಿಕಾ ತಂಡದ ಪರವಾಗಿ 1 ಟೆಸ್ಟ್, 58 ಏಕದಿನ ಹಾಗೂ 50 ಟಿ-20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಡೇರ್ ಡೆವಿಲ್ಸ್, ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರವಾಗಿ ಆಡಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.