Cricket : ಮತ್ತೆರಡು ವರ್ಷಕ್ಕೆ ಮತ್ತೆ team India ಕೋಚ್ ಅಗಿ ರವಿ ಶಾಸ್ತ್ರಿ ಮುಂದುವರಿಕೆ…

ನಿರೀಕ್ಷೆಯಂತೆಯೇ ಮಾಜಿ ಆಟಗಾರರವಿ ಶಾಸ್ತ್ರಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ. ಹೊಸ ಕೋಚ್‌ಗಾಗಿ ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರವಿ ಶಾಸ್ತ್ರಿ ಅವರನ್ನೇ ಮುಂದುವರಿಸಲು ವಿಶೇಷ ಸಮಿತಿ ನಿರ್ಧರಿಸಿದೆ.
ಭಾರತೀಯ ಕ್ರಿಕೆಟ್‌ನ ದಂತಕಥೆ ಕಪಿಲ್ ದೇವ್ ನೇತೃತ್ವದ ಮೂವರು ಮಾಜಿ ಆಟಗಾರರ ವಿಶೇಷ ಸಮಿತಿ ರಾಷ್ಟ್ರೀಯ ತಂಡದ ಕೋಚ್‌ ಯಾರೆಂಬುದನ್ನು ನಿರ್ಧರಿಸಿದೆ.

ರವಿ ಶಾಸ್ತ್ರಿ ಅವರು 2021ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ವರೆಗೆ, ಅಂದರೆ ಎರಡು ವರ್ಷಗಳ ಕಾಲ ಭರತೀಯ ಕೋಚ್ ಹೊಣೆಗಾರಿಕೆಯನ್ನು ನಿಭಾಯಿಸಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.

ತಂಡದ ಆಟಗಾರರ ವಿಶ್ವಾಸ ಸಂಪಾದಿಸಿರುವ ರವಿ ಶಾಸ್ತ್ರಿ ಅವರಲ್ಲದೆ ಈ ಸ್ಥಾನಕ್ಕೆ ಅರ್ಜಿ ಹಾಕಿಕೊಂಡಿದ್ದವರ ಪೈಕಿ ಐದು ಮಂದಿಯನ್ನು ಈ ಸಮಿತಿ ಶುಕ್ರವಾರ ಸಂದರ್ಶಿಸಿತು.

ಈ ಪ್ರತಿಷ್ಠಿತ ಹುದ್ದೆಗೇರ ಬಯಸಿ ಶಾಸ್ತ್ರಿ ಅಲ್ಲದೇ ನ್ಯೂಜಿಲೆಂಡ್ ತಂಡದ ಮಾಜಿ ಕೋಚ್ ಮೈಕ್ ಹೆಸ್ಸನ್, ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಶ್ರೀಲಂಕಾದ ಮಾಜಿ ಕೋಚ್ ಟಾಮ್ ಮೂಡಿ, ಭಾರತದ ಮಾಜಿ ಆಟಗಾರರಾದ ಲಾಲ್‌ಚಂದ್ ರಾಜಪೂತ್, ರಾಬಿನ್ ಸಿಂಗ್ ಹಾಗೂ ವಿಂಡೀಸ್ ತಂಡದ ಮಾಜಿ ಆಟಗಾರ ಫಿಲ್ ಸಿಮನ್ಸ್ ರೇಸಿನಲ್ಲಿದ್ದರು.

ಭಾರತ ತಂಡಕ್ಕೆ ಕೋಚ್ ಆಯ್ಕೆ ಮಾಡುವ ಗುರುತರ ಹೊಣೆ ಹೊತ್ತಿರುವ ಸಮಿತಿಯಲ್ಲಿ ಕಪಿಲ್ ದೇವ್ ಅಲ್ಲದೇ ಮಾಜಿ ಆರಂಭಿಕ ಆಟಗಾರ ಅನ್ಷುಮಾನ್ ಗಾಯಕ್ವಾಡ್ ಹಾಗೂ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಇದ್ದರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.