80 ಸಾವಿರ ಜೀನುನೊಣಗಳೊಂದಿಗೆ ಬೆಡ್‌ ರೂಂ‌ ಹಂಚಿಕೊಂಡ ದಂಪತಿ..

ಸಹಜವಾಗಿ‌ ಜೇನುನೊಣಗಳು ಸುಮ್ಮನೆ ನಮ್ಮ ಮುಂದೆ ಹಾದು ಹೋದರೆ ಹೆದರಿಕೆಯಾಗುತ್ತದೆ. ಇನ್ನು 80 ಸಾವಿರ ಜೀನುನೊಣಗಳೊಂದಿಗೆ ಬೆಡ್‌ ರೂಂ‌ ಹಂಚಿಕೊಳ್ಳುವುದು ಎಂದರೆ?

ಹೌದು, ಗಾಬರಿಯಾದರೂ ಇದು ನಿಜ. ಸ್ಪೇನ್ ದೇಶದ ಗ್ರನಡಾ ಎನ್ನುವ ಪ್ರದೇಶದಲ್ಲಿ ಕಳೆದ ಎರಡು‌ ವರ್ಷದಿಂದ ದಂಪತಿಗಳು ತಮ್ಮ‌ ಬೆಡ್‌ ರೂಂ‌ನಲ್ಲಿ ಸುಮಾರು 80 ಸಾವಿರ ಜೇನುನೊಣಗಳು‌ ಗೂಡು ಕಟ್ಟಿದ್ದರು, ತೆಗೆಸಲು ಮುಂದಾಗಿಲ್ಲ. ಆದರೆ ಕೆಲ ತಿಂಗಳಿಂದ‌ ಜೇನುಹುಳದ ಸದ್ದು ತಡೆಯಲು ಸಾಧ್ಯವಾಗದಿದ್ದಾಗ ಜೇನು ತೆಗೆಯುವವರನ್ನು ಕರೆಸಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು ಎರಡು ವರ್ಷಗಳಿಂದ ಜೇನುಹುಳಗಳಿದ್ದು, ದಂಪತಿಗಳು ಈ‌ ಬಗ್ಗೆ ಸ್ಥಳೀಯ ಪೊಲೀಸ್, ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರೂ ಪ್ರಯೋಜನವಾಗಿರಲಿಲ್ಲ. ಕಳೆದ ಮೂರು ತಿಂಗಳಿನಿಂದ ತಾಪಮಾನ ಹೆಚ್ಚಾದಂತೆ ಹುಳುಗಳ ಸದ್ದು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇದೀಗ ಜೇನುಹುಳಗಳನ್ನು ತೆಗೆದಿದ್ದು, ಸ್ವತಃ ಈ ಕಾರ್ಯಚರಣೆ ಮಾಡಿದ್ದ ತಜ್ಞರೇ‌ ದಂಗಾಗಿದ್ದಾರೆ. ಇಷ್ಟು ಹುಳಗಳಿದ್ದರೂ ಅವುಗಳೊಂದಿಗೆ ದಂಪತಿಗಳು ಹೇಗಿದ್ದರು ಎನ್ನುವುದೇ ಅಚ್ಚರಿ ಎಂದಿದ್ದಾರೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.