ಚಂದ್ರಯಾನ 2 ರಾಕೆಟ್ ಯಶಸ್ವಿ ಉಡ್ಡಯನ : ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ

ಚಂದ್ರಯಾನ 2 ರಾಕೆಟ್ ಅನ್ನು ಜಿಎಸ್ ಎಲ್ ವಿ ಎಂಕೆIII-ಎಂ1 ಯಶಸ್ವಿಯಾಗಿ ನಭಕ್ಕೆ ಹೊತ್ತೊಯ್ದಿದ್ದು, ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

ಚಂದ್ರನ ಮೇಲ್ಮೈಯನ್ನು ಅಧ್ಯಯನ ನಡೆಸುವ ಭಾರತದ ಐತಿಹಾಸಿಕ ಸಾಧನೆಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ವಿಜ್ಞಾನಿಗಳ ತಂಡ ತಮ್ಮ ವೈಯಕ್ತಿಕ ಸಮಯ ಬದಿಗಿಟ್ಟು ಚಂದ್ರಯಾನ 2 ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ವಿಜ್ಞಾನಿಗಳ ಶ್ರಮ ದೇಶ ಹೆಮ್ಮೆ ಪಡುವಂತಾದ್ದು ಎಂದು ಚಂದ್ರಯಾನ 2 ಉಡ್ಡಯನದ ಯಶಸ್ವಿ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಚಂದ್ರಯಾನ 2ರ ಮೊದಲ ಹಂತ ಯಶಸ್ವಿಯಾಗಿದ್ದು, ರಾಕೆಟ್ ಭೂಕಕ್ಷೆಯನ್ನು ಸೇರಿದ್ದು, 48 ದಿನಗಳ ಬಳಿಕ ರಾಕೆಟ್ ಚಂದ್ರನ ಅಂಗಳ ಪ್ರವೇಶಿಸಲಿದೆ ಎಂದು ವಿವರಿಸಿದರು.

ಜಿಎಸ್ ಎಲ್ ವಿ ಎಂಕೆIII-ಎಂ1 ರಾಕೆಟ್ ಮೂರು ಹಂತವನ್ನು ಒಳಗೊಂಡಿದ್ದು, ಒಟ್ಟು 43.3 ಮೀಟರ್ ನಷ್ಟು ಎತ್ತರವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೋಡ ಮುಸುಕಿದ ಆಕಾಶದತ್ತ ಮುಖಮಾಡಿದ್ದ “ಬಾಹುಬಲಿ ರಾಕೆಟ್ 2.43ಕ್ಕೆ ನಭಕ್ಕೆ ಚಿಮ್ಮಿತ್ತು. 3850 ಕೆಜಿ ತೂಕದ ಚಂದ್ರಯಾನ 2 ರಾಕೆಟ್ 16 ನಿಮಿಷಗಳಲ್ಲಿ ವ್ಯೂಮನೌಕೆ ಭೂ ಕಕ್ಷೆ ಸೇರಿತ್ತು ಎಂದು ಶಿವನ್ ಮಾಹಿತಿ ನೀಡಿದರು.

ಆಧುನಿಕ ವೈಜ್ಞಾನಿಕ ಸಂಶೋಧನೆಗೆ ಸಹಕಾರಿಯಾಗಲಿರುವ ಚಂದ್ರಯಾನ 2 ಯಶಸ್ವಿ ಉಡ್ಡಯನದಿಂದ ಚಂದ್ರನ ಮೇಲ್ಮೈ ಅಧ್ಯಯನ ನಡೆಸಲಿದೆ. ಬಾಹುಬಲಿ ರಾಕೆಟ್ ಸೆಪ್ಟೆಂಬರ್ 6ರಂದು ಚಂದ್ರನ ಅಂಗಳ ತಲುಪಲಿದೆ ಎಂದು ತಿಳಿಸಿದರು.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Social Media Auto Publish Powered By : XYZScripts.com