Chandrayaan-2 : ತಾಂತ್ರಿಕ ದೋಷದಿಂದ ಮುಂದೂಡಲಾಗಿದ್ದ ಯಾನಕ್ಕೆ July 22ಕ್ಕೆ ಮುಹೂರ್ತ

ತಾಂತ್ರಿಕ ದೋಷದ ಕಾರಣ ಮುಂದೂಡಲಾಗಿದ್ದ ಚಂದ್ರಯಾನ-2 ಸೋಮವಾರ (ಜು. 22) ಮಧ್ಯಹ್ನ ಮತ್ತೊಮ್ಮ ಹಾರಲು ಸಿದ್ಧವಾಗಿದೆ.
ಈ ಬಗ್ಗೆ ತನ್ನ ನೀರ್ಧಾರ ಪ್ರಕಟಿಸಿರುವ ಇಸ್ರೊ ಸೋಮವಾರ ಮಧ್ಯಾಹ್ನ 2.43ಕ್ಕೆ ಚಂದ್ರಯಾನ ರಾಕೆಟ್ ಉಡಾವಣೆಗೊಳ್ಳಲಿದೆ ಎಂದು ಹೇಳಿದೆ.

ಈ ಮಹತ್ವದ ಉಡಾವಣೆಗೆ ಜುಲೈ 15ರ ನಸುಕಿನ 2.51ಕ್ಕೆ ಈ ಮೊದಲು ದಿನಾಂಕ ನಿಗದಿಯಾಗಿತ್ತು. ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಉಡಾವಣೆಯನ್ನು ಇಸ್ರೋ ಕೊನೆಯ ಗಳಿಗೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.

ಇಂದು ಮುಂಜಾನೆ ಚಂದ್ರಯಾನ 2 ಸಂಬಂಧ ಟ್ವೀಟ್ ಮಾಡಿರುವ ಇಸ್ರೋ ಜುಲೈ 22ರ ಸೋಮವಾರ ಮಧ್ಯಾಹ್ನ 2.43ಕ್ಕೆ ಉಡಾವಣೆಯ ಸಮಯ ನಿಗದಿಪಡಿಸಿದೆ.

ಇದು ಭಾರತದ ಎರಡನೇ ಚಂದ್ರಯಾನವಾಗಿದ್ದು ಭಾರೀ ಕುತೂಹಲ ಮೂಡಿಸಿದೆ. ಈ ಬಾರಿ ಚಂದ್ರಯಾನ-2 ಗಗನನೌಕೆ ಈವರೆಗೆ ಯಾರೂ ಪಯಣಿಸದ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ.

3840 ಕೆಜಿ ತೂಕದ ಈ ಗಗನನೌಕೆಯನ್ನು ಹೊತ್ತ gsಟv-mಞ3 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲ ಸುಸೂತ್ರವಾಗಿ ಕೈಗೂಡಿದರೆ ಭಾರತವು ಈ ಸಾಧನೆ ಮಾಡಿರುವ ಅಮೆರಿಕ, ರಷ್ಯ ಮತ್ತು ಚೀನಾ ಸಾಲಿನಲ್ಲಿ ನಿಲ್ಲಲಿದೆ.

ಭಾರತೀಯ ಬಾಹ್ಯಾಕಾಶ ಕೇಂದ್ರ ಇಸ್ರೋದ ಮಹತ್ವಾಕಾಂಕ್ಷೆಯ ಈ ಗಗನನೌಕೆ 3.84 ಲಕ್ಷ ಕಿಲೋಮೀಟರ್ ದೂರ ಸಾಗಬೇಕಿದ್ದು ಇದಕ್ಕಾಗಿ 2 ತಿಂಗಳು ತೆಗೆದುಕೊಳ್ಳಲಿದೆ. ನೌಕೆಯು ಸೆಪ್ಟೆಂಬರ್ ಮೊದಲ ವಾರದಲ್ಲಿ ಚಂದ್ರನ ಮೇಲೆ ಇಳಿಯುವ ನಿರೀಕ್ಷೆ ಇದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.