ಆಡಿಯೋ ಬಾಂಬ್ ಗೆ ಬಿಎಸ್ ವೈ ಪ್ರತಿಕ್ರಿಯೆ : ಇದು ಸತ್ಯವಾದರೆ ರಾಜಕೀಯದಿಂದ ನಿವೃತ್ತಿ

‘ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ನೀವೇ ಮಾಡ್ಬೇಕು ನಾನಲ್ಲ . ನೀವು ಬಿಡುಗಡೆ ಮಾಡಿರೋ ಆಡಿಯೋ ಫೇಕ್ ಆಡಿಯೋ. ಸತ್ಯಕ್ಕೆ ದೂರವಾಗಿದ್ದು. ನಾನು ದೇವದುರ್ಗಕ್ಕೆ ತರಾತುರಿಯಾಗಿ ದೇವಸ್ಥಾನ ಹೋಗಿ ವಾಪಸ್ಸು ಬಂದಿದ್ದೇನೆ. ಕಥೆ ಕಟ್ಟಿದ್ದಾರೆ. ನಿಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. ಗೊಂದಲ ಗೂಡಾಗಿದೆ. ರೆಸಾರ್ಟ್ ನಲ್ಲಿ ಶಾಸಕರನ್ನು ಇಟ್ಕೊಂಡು ಹೊಡೆದಾಡಿಸಿದ್ದಾರೆ. ರೈತರ ಸಾಲ ಮನ್ನ ಮಾಡಿಲ್ಲ. ನಯ ಪೈಸೆ ಹಣ ನೀರಾವರಿಗಾಗಿ ಬಿಡುಗಡೆ ಮಾಡಿಲ್ಲಾ. ಹೆಚ್ಚು ಬರಗಾಲ ಇದೆ. ಬಯಲು ಸೀಮೆಗೆ ಹಣ ಬಿಡುಗಡೆ ಮಾಡಿಲ್ಲ. ಕಾನೂನು ಸುವ್ಯವಸ್ಥೆ ತುಂಬಾ ಹದುಗೆಟ್ಟು ಹೋಗಿದೆ. ಸ್ವಾಭಿಮಾನ ಇದ್ದರೆ ಸಿಎಂ ರಾಜೀನಾಮೆ ಕೊಡಬೇಕು’ ಎಂದು ಯಡಿಯೂರಪ್ಪ ದೂರಿದ್ದಾರೆ.

ಇಂದು ಬಜೆಟ್ ನಲ್ಲಿ ಭಾಗವಹಿಸುತ್ತೇನೆ. ರಾಜ್ಯದ ಸಿಎಂ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದಿದ್ದಾರೆ.

ಸಿಎಂ ಆರೋಪ ಸತ್ಯಕ್ಕೆ ದೂರವಾಗಿದೆ. ಗೌರವದಿಂದ ಕೆಲಸ ಮಾಡಿ. ಫೇಕ್ ಆಡಿಯೋ ಅದು. ನಾವು ಯಾರನ್ನೂ ಭೇಟಿ ಮಾಡಿಲ್ಲ. ಇದೊಂದು ಡೊಂಬರಾಟ ಎಂದು ಹೇಳಲು ಬಯಸುತ್ತೇನೆ. 20ಕ್ಕೂ ಹೆಚ್ಚು ಶಾಸಕರು ಹೀಗೇ ಹೇಳುತ್ತಿದ್ದಾರೆ.

ಸಿಎಂ ಕಣ್ಣೀರಾಕಿಕೊಂಡು ಹೇಳಿದ್ದಾರೆ ತಾವು ಖುಷಿಯಾಗಿಲ್ಲ ಎಂದು, ತಾವೇ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಇದನ್ನೆಲ್ಲಾ ಹೇಳಿದ್ದು ನಾನಲ್ಲ ಸಿಎಂ..? ಇದು ಸತ್ಯವಾದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ ಆಡಿಯೋ ಬಾಂಬಗೆ  ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.