ಜೀ ಎಂಟರ್‌ಟೈನ್‌ಮೆಂಟ್ ಮತ್ತು ಸೋನಿ ಇಂಡಿಯಾ ವಿಲೀನ!

ಜೀ ಎಂಟರ್‌ಟೈನ್‌ಮೆಂಟ್ ಮತ್ತು ಸೋನಿ ಪಿಕ್ಚರ್ಸ್ ಇಂಡಿಯಾಗಳು ವೀಲಿನಗೊಳ್ಳುವುದಕ್ಕೆ ಬುಧವಾರ ತಾತ್ವಿಕ ಅನುಮೋದನೆ ಪಡೆದುಕೊಂಡಿವೆ. ಎರಡೂ ಕಂಪನಿಗಳ ಲೀನಿಯರ್ ನೆಟ್‌ವರ್ಕ್‌ಗಳು, ಡಿಜಿಟಲ್ ಸ್ವತ್ತುಗಳು, ಪ್ರೊಡಕ್ಷನ್‌ ಮತ್ತು ಪ್ರೋಗ್ರಾಂ ಲೈಬ್ರರಿಗಳನ್ನು ವಿಲೀನ ಮಾಡುವುದಕ್ಕೆ ಕಂಪನಿಗಳು ಮುಂದಾಗಿವೆ.

ಮುಂದೆ, ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುನಿತ್ ಗೋಯೆಂಕಾ ವಿಲೀನಗೊಂಡ ಘಟಕವನ್ನು ಮುನ್ನಡೆಸಲಿದ್ದಾರೆ. ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (ಎಸ್‌ಪಿಎನ್ಐ) ಮತ್ತು ಜೀ ವಿಲೀನವು ಎರಡು ಪ್ರಮುಖ ಭಾರತೀಯ ಮಾಧ್ಯಮ ನೆಟ್‌ವರ್ಕ್ ವ್ಯವಹಾರಗಳನ್ನು ಒಟ್ಟುಗೂಡಿಸುತ್ತದೆ. ಚಲನಚಿತ್ರದಿಂದ ಕ್ರೀಡೆಯವರೆಗೆ ಎಲ್ಲಾ ವಿಭಾಗಗಳಿಲ್ಲಿಯೂ ಭಾರತದಾದ್ಯಂತ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಉಭಯ ಕಂಪನಿಗಳು ಹೇಳಿವೆ.

“ಸಂಯೋಜಿತ ಕಂಪನಿಯು ZEEL ಮತ್ತು SPNI ಒಗ್ಗೂಡಿಸುವಿಕೆಯಿಂದ ಎಲ್ಲಾ ಪಾಲುದಾರರಿಗೆ ಪ್ರಯೋಜನವನ್ನು ನಿರೀಕ್ಷಿಸುತ್ತದೆ. SPNI ನ ಷೇರುದಾರರು ವಿಲೀನಗೊಂಡ ಘಟಕದಲ್ಲಿ ಬಹುಪಾಲು ಪಾಲನ್ನು ಹೊಂದಿರುತ್ತಾರೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು SPNI ಹೇಳಿದೆ.

ಇದನ್ನೂ ಓದಿ: ಬಾಯ್ಕಾಟ್ ಅಂಬಾನಿ-ಅದಾನಿ; ಕಾರ್ಪೊರೇಟ್‌ಗಳನ್ನು ಸಮರ್ಥಿಸಿಕೊಳ್ಳುತ್ತಿರುವುದೇಕೆ ಸುವರ್ಣ ನ್ಯೂಸ್‌?

ಎರಡೂ ಕಂಪನಿಗಳ ಸ್ವತ್ತುಗಳನ್ನು ವಿಲೀನಗೊಳಿಸುವ ಈ ವಿಶೇಷವಾದ ಒಪ್ಪಂದವು “ತಂತ್ರಜ್ಞಾನ ಮತ್ತು ವಿಷಯಗಳಾದ್ಯಂತ ಸಂಯೋಜಿತ ಕಂಪನಿಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚಿಸುತ್ತದೆ. ವೇಗವಾಗಿ ಬೆಳೆಯುತ್ತಿರುವ ಕ್ರೀಡಾಕ್ಷೇತ್ರದಲ್ಲಿ ಪ್ರಸಾರ ಹಕ್ಕುಗಳಿಗಾಗಿ ಬಿಡ್ ಮಾಡುವ ಸಾಮರ್ಥ್ಯ ಮತ್ತು ಇತರ ಬೆಳವಣಿಗೆಯ ಅವಕಾಶಗಳನ್ನು ಹೆಚ್ಚಿಸುತ್ತದೆ” ಎಂದು SPNI ಹೇಳಿದೆ.

ಇದಲ್ಲದೆ, ಎಸ್‌ಪಿಎನ್ಐನ ಮೂಲ ಕಂಪನಿಯಾದ ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್, ಎಸ್‌ಪಿಎನ್ಐಗಾಗಿ 1.575 ಬಿಲಿಯನ್ ಡಾಲರ್ ನಗದು ಬ್ಯಾಲೆನ್ಸ್ ಹೊಂದಿರುವಂತೆ ಬಂಡವಾಳವನ್ನು ಹೂಡಿಕೆ ಮಾಡುತ್ತದೆ ಎಂದು ಎಸ್‌ಪಿಎನ್ಐ ಹೇಳಿಕೆಯಲ್ಲಿ ತಿಳಿಸಿದೆ.

ವಿಲೀನಗೊಂಡ ಕಂಪನಿಯಲ್ಲಿ ಜೀ ಎಂಟರ್‌ಟೈನ್‌ಮೆಂಟ್ ಶೇಕಡಾ 47.07 ರಷ್ಟು ಪಾಲನ್ನು ಹೊಂದಿದ್ದರೆ, ಸೋನಿ ಇಂಡಿಯಾ 52.93 ರಷ್ಟು ಬಹುಪಾಲು ಪಾಲನ್ನು ಹೊಂದಿರುತ್ತದೆ. ವಿಲೀನಗೊಂಡ ಸಂಸ್ಥೆಯ ಬಹುಪಾಲು ನಿರ್ದೇಶಕರ ಮಂಡಳಿಯನ್ನು ಸೋನಿ ಗ್ರೂಪ್ ನಾಮನಿರ್ದೇಶನ ಮಾಡುತ್ತದೆ. ಎರಡೂ ಸಂಸ್ಥೆಗಳು 90 ದಿನಗಳ ಅವಧಿಗೆ ಬಂಧಿಸುವ ಪ್ರತ್ಯೇಕತೆಯನ್ನು ಒಪ್ಪಿಕೊಂಡಿವೆ- ಸಮಯದಲ್ಲಿ ನಿರ್ಣಾಯಕ ಒಪ್ಪಂದಗಳನ್ನು ಅಂತಿಮಗೊಳಿಸಲಾಗುತ್ತದೆ. ವಿಲೀನಗೊಂಡ ಘಟಕವು ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪನಿಯಾಗಿರುತ್ತದೆ.

ಇದನ್ನೂ ಓದಿ: ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ‘ಬಳೆ ಜಿಹಾದ್’ ಪಟ್ಟ ಕಟ್ಟಿದ ನ್ಯೂಸ್‌ 18 ಮತ್ತು ಜೀ ನ್ಯೂಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights