ಯುವ ಜೋಡಿಯ ಬೆತ್ತಲೆಗೊಳಿಸಿ ಮೆರವಣಿಗೆ; ಹೀನ ಕೃತ್ಯ ಎಸಗಿದ ಗ್ರಾಮಸ್ಥರ ವಿರುದ್ದ ಪ್ರಕರಣ ದಾಖಲು!

ವಿವಾಹೇತರ ಸಂಬಂಧ ಹೊಂದಿದ ಮಹಿಳೆ ಹಾಗೂ ಪುರುಷನನ್ನು ಬೆತ್ತಲೆಗೊಳಿಸಿ ಸುಮಾರು ಒಂದು ಕಿ.ಮೀ. ನಡೆಸಿರುವರು ಅಮಾನವೀಯ ಘಟನೆ ಜಾರ್ಖಾಂಡ್‌ ರಾಜ್ಯದ ದಮ್ಕಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಈ ಹೀನ ಕೃತ್ಯದಲ್ಲಿ ಭಾಗಿಯಾಗಿದ್ದ ಗ್ರಾಮದ ಸುಮಾರು 50 ರಿಂದ 60 ಜನರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದಮ್ಕಾ ಜಿಲ್ಲೆಯ ಬೆಡ್ತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬೆತ್ತಲುಗೊಳಿಸಿ ಗ್ರಾಮಸ್ಥರು ಒಂದು ಕಿ.ಮೀ. ನಡೆಸಿದ್ದಾರೆ.

“ಇಬ್ಬರೂ (ಮಹಿಳೆ ಹಾಗೂ ಪುರುಷ) ದಿನಗೂಲಿ ಮಾಡುವವರು ಮತ್ತು ಒಂದೇ ಗ್ರಾಮದವರಾಗಿದ್ದಾರೆ. ಮಂಗಳವಾರ ಮಹಿಳೆಯನ್ನು ಭೇಟಿ ಮಾಡಲು ಪ್ರಿಯಕರ ಬಂದಿದ್ದಾಗ ಗ್ರಾಮಸ್ಥರು ಆತನನ್ನು ಹಿಡಿದು ಬೆತ್ತಲುಗೊಳಿಸಿ, ಈ ಹೀನಕೃತ್ಯವನ್ನು ನಡೆಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಕ್ರಮ ಜರುಗಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಗಂಡನು ಪ್ರಕರಣವೊಂದರಲ್ಲಿ ಸಿಲುಕು ಒಂದು ವರ್ಷದಿಂದ ಕಾರಾಗೃಹದಲ್ಲಿದ್ದಾನೆ. ನಗರದಲ್ಲಿ ಕಾರ್ಮಿಕಳಾಗಿ ಜೀವನ ಸಾಗಿಸುತ್ತಿರುವ ಮಹಿಳೆಯು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ : ತಾಯಿಯಿಂದಲೇ 9 ತಿಂಗಳ ಮಗು ಹತ್ಯೆ ದೃಢ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights