ದೇಶದ ಪ್ರತಿ ಮನೆಯಿಂದಲೂ ಒಬ್ಬರು ದೆಹಲಿಗೆ ಬನ್ನಿ: ಯೋಗೇಂದ್ರ ಯಾದವ್‌ ಕರೆ

ಕೇಂದ್ರ ಸರ್ಕಾರ ಕೃಷಿ ನೀತಿಗಳ ವಿರುದ್ಧ ರೈತರು ಹೋರಾಟ ನಡೆಸುತ್ತಿರುವ ದೆಹಲಿ ಗಡಿಗೆ ದೇಶದ ಪ್ರತಿ ಕುಟುಂಬದ ಒಬ್ಬ ರೈತರನ್ನು ಕಳಸಿಬೇಕು ಎಂದು ರೈತರ ಹೋರಾಟದ ಮುಖಂಡ ಯೋಗೇಂದ್ರ ಯಾದವ್‌ ಕರೆ ಕೊಟ್ಟಿದ್ದಾರೆ.

ರೈತ ಪ್ರತಿಭಟನೆಯ ವಿರುದ್ಧ ಅವಮಾನ ಹಾಗೂ ಅಪಖ್ಯಾತಿ ಹಬ್ಬಿಸಿದರೆ ಪ್ರತಿಭಟನೆ ಒಡೆದುಹೋತ್ತದೆ ಎಂದು ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗೇಂದ್ರ ಯಾದವ್ ಭಾಗಿಸಿದ್ದಾರೆ. ರೈತರು ಯಾವುದೇ ಕಾರಣಕ್ಕೂ ಚಳವಳಿಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ಬಿಕೆಯು ವಕ್ತಾರ ರಾಕೇಶ್ ಟಿಕಾಯತ್ ಅವರ ಕಣ್ಣೀರು ರೈತರ ಮೇಲಿದ್ದ ಎಲ್ಲ ಕಳಂಕವನ್ನು ತೊಳೆದು ಹಾಕಿದೆ ಎಂದು ರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದ್ದಾರೆ.

ನಮ್ಮ ವಿರುದ್ದ ಲುಕ್‌ಔಟ್‌ ನೋಟಿಸ್‌ ನೀಡಿದ್ದಾರೆ. ನಾವು ದೇಶಬಿಟ್ಟು ಪರಾರಿಯಾಗುತ್ತೇವೆ ಎಂದು ಅವರು ತಿಳಿದಿದ್ದಾರೆಯೇ? ದೆಹಲಿ ಪೊಲೀಸರಿಗೆ ನಾವು ಹೇಳುವುದೇನೆಂದರೆ, ನಾವು ಎಲ್ಲಿಗೂ ಹೋಗುವುದಿಲ್ಲ. ನಿಮ್ಮ ಮುಂದೆಯೇ ನಿಂತಿದ್ದೇವೆ. ನೀವು ಲುಕ್‌ಔಟ್‌ ನೋಟಿಸ್‌ ಜಾರಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಗಣರಾಜ್ಯದ ದಿನ ನಡೆದ ಹಿಂಸಾಚಾರದಲ್ಲಿ ರೈತರ ಪಾತ್ರವಿಲ್ಲ. ರೈತರ ವಿರುದ್ಧ ನಡೆಸಿದ ಹುನ್ನಾರದ ಬಳಿಕ ರೈತರ ಹೋರಾಟ ಮತ್ತಷ್ಡಟು ಗಟ್ಟಿಯಾಗಿದೆ. ರೈತರನ್ನು ಬೆಂಬಲಿಸುವ ಪ್ರತಿಯೊಬ್ಬರನ್ನೂ ಸ್ವಾಗತಿಸುತ್ತೇವೆ. ಹೋರಾಟಕ್ಕೆ ದೇಶದ ಪ್ರತಿ ಕುಟುಂಬದಿಂದಲೂ ಒಬ್ಬ ರೈತರು ದೆಹಲಿಗೆ ಬರಬೇಕು ಎಂದು ಮನವಿ ಮಾಡುತ್ತೇವೆ ಎಂದು ಕರೆಕೊಟ್ಟಿದ್ದಾರೆ.

ಇದನ್ನೂ ಓದಿ: BJP ಮಾತಿಗೆ ಮಣಿದ ಹಜಾರೆ; ಅನ್ನದಾತರ ಉಪವಾಸಕ್ಕೆ ನೀಡಿದ್ದ ಬಂಬಲ ಹಿಂಪಡೆದ ಅಣ್ಣಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights