ಸಂಕ್ರಾಂತಿ ಬಳಿಕ ಯಡಿಯೂರಪ್ಪ ಕುರ್ಚಿ ಉರುಳುವುದು ಫಿಕ್ಸ್‌: ಬೇಳೂರು ಗೋಪಾಲಕೃಷ್ಣ

ಯಡಿಯೂರಪ್ಪ ಅವರಿಗೆ ಸಿಗಂದೂರು ದೇವಿಯ ಶಾಪ ತಟ್ಟಿದೆ. ಹಾಗೆಯೇ ಬಿಜೆಪಿಯ ಕೆಲ ಶಾಸಕರ ಶಾಪವೂ ಇದೆ. ಈ ಕಾರಣಕ್ಕೆ ಸಂಕ್ರಾಂತಿ ನಂತರ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇರುವುದಿಲ್ಲ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಸಿಗಂದೂರು ಚೌಡೇಶ್ವರಿ ವಿವಾದದಲ್ಲಿ ಸರಕಾರದ ಹಸ್ತಕ್ಷೇಪದ ಕಾರಣ ಯಡಿಯೂರಪ್ಪ ಅವರಿಗೆ ಶಾಪ ತಟ್ಟುತ್ತದೆ ಎಂದು ನಾನು ಹೇಳಿದ್ದೆ, ಅದೀಗ ನಿಜವಾಗುತ್ತಿದೆ. ಸಿಗಂದೂರು ದೇವಿಯ ಶಾಪದ ಪರಿಣಾಮವಾಗಿಯೇ ಬಿಎಸ್‍ವೈ ವಿರುದ್ಧ ಡಿ-ನೋಫಿಕೇಶನ್ ಪ್ರಕರಣಕ್ಕೆ ಮರುಜೀವ ಬಂದಿದೆ. ಅವರ ಪಕ್ಷದವರೇ ಸಿಎಂ ಪದಚ್ಯುತಿ ಸನ್ನಿಹಿತ ಎಂದು ಹೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಡಿ-ನೋಫಿಕೇಶನ್ ಆರೋಪ ಮತ್ತೆ ಕೇಳಿಬಂದ ಕೂಡಲೇ ಬಿಎಸ್‍ವೈ ರಾಜಿನಾಮೆ ನೀಡಬೇಕಿತ್ತು. ಭ್ರಷ್ಟರನ್ನು ಅಧಿಕಾರದಲ್ಲಿರಲು ಬಿಡುವುದಿಲ್ಲ ಎಂದು ಹೇಳಿದ್ದ ಮೋದಿ ಮತ್ತು ಅಮಿತ್ ಷಾ ಅವರು ಯಡಿಯೂರಪ್ಪರನ್ನು ಕೆಳಗಿಳಿಸಬೇಕು ಎಂದು ಹೇಳಿದ್ದಾರೆ.

ಹೊಸ ವರ್ಷಾಚರಣೆಗೆ ನಿರ್ಬಂಧಕ್ಕೆ ವಿರೋಧ:

ಯುವಜನಾಂಗ ಹೊಸ ವರ್ಷಾಚರಣೆ ಮಾಡುವುದಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದ ಅವರು, ಇದರ ಹಿಂದೆ ಆರ್‍ಎಸ್‍ಎಎಸ್ ಕೈವಾಡವಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ದೆಹಲಿ ಸಮೀಪ ನಡೆದಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಬ್ರಿಟನ್ ರೂಪಾಂತರಿ ವೈರಸ್ ಕೊರೊನಾ ವಿಷಯವನ್ನು ಬಿಜೆಪಿ ಅವರು ಹರಿಯಬಿಡುತ್ತಿದ್ದಾರೆ. ರಾಜ್ಯದಲ್ಲಿಯೂ ಬ್ರಿಟನ್ ವೈರಸ್ ಹೆಸರಿನಲ್ಲಿ ನೈಟ್ ಕಫ್ರ್ಯೂ ವಿಧಿಸುವ ಸಂಬಂಧ ಗೊಂದಲಕರ ನಿರ್ಧಾರ ಕೈಗೊಂಡಿದ್ದನ್ನು ಗಮನಿಸಿದರೆ ಸಿಎಂ ಬಿಎಸ್‍ವೈ ಅವರಿಗೆ ಜ್ಞಾಪಕಶಕ್ತಿ ಕಡಿಮೆಯಾದಂತೆ ಭಾವಿಸಬೇಕಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಸುರಕ್ಷಾ ಟೆಂಡರ್‌: IPS ಅಧಿಕಾರಿ ಡಿ ರೂಪಾ ಮತ್ತು ಹೇಮಂತ್‌ ನಿಂಬಾಳ್ಕರ್‌ ಮಧ್ಯೆ ಜಟಾಪಟಿ! ಕಾರಣವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights