ಜನವರಿ 08ಕ್ಕೆ ಯಶ್‌ ಬರ್ತಡೇ: ಅಭಿಮಾನಿಗಳಿಗೆ ರಾಕಿಂಗ್‌ ಸ್ಟಾರ್‌ ಹೇಳಿದ್ದೇನು ಗೊತ್ತೇ?

ಜನವರಿ 8 ರಂದು ರಾಕಿಂಗ್ ಸ್ಟಾರ್‌ ಯಶ್‌ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರು ಕೂಡು ಮನೆಯ ಬಳಿ ಬರಬೇಡಿ ಎಂದು ಅಭಿಮಾನಿಗಳಲ್ಲಿ ಯಶ್‌ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಇನ್ ಸ್ಟಾಗ್ರಾಂ ನಲ್ಲಿ ವಿಡಿಯೋ ಹಂಚಿಕೊಂಡಿರುವ ಯಶ್, ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ಮನೆ ಬಳಿ ಬಾರದೆ ಸಾಮಾಜಿಕ ಜಾಲತಾಣದಲ್ಲಿಯೇ ನನಗೆ ವಿಶ್ ಮಾಡಿ ಎಂದು ಕೇಳಿಕೊಂಡಿದ್ದಾರೆ.

ನೀವು ಅನವಶ್ಯಕವಾಗಿ ಎಲ್ಲರೂ ಒಟ್ಟಿಗೆ ಸೇರುವುದರಿಂದ ಯಾರಿಗಾದ್ರು ತೊಂದರೆ ಆದ್ರೆ ನನಗೆ ತುಂಬಾ ನೋವಾಗುತ್ತದೆ. ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನದಂದು ನಿಮಗಿಂತ ಹೆಚ್ಚು ಖುಷಿಯಲ್ಲಿ ಇರ್ತೀನಿ. ಯಾಕಂದ್ರೆ ನಿಮ್ಮನ್ನೆಲ್ಲಾ ಹತ್ತಿರದಿಂದ ನೋಡಬಹುದು ಎಂದು.

ಆದ್ರೆ ಈ ವರ್ಷ ಕೊರೊನಾ ಇರುವುದರಿಂದ ನೀವು ಎಲ್ಲೆಲ್ಲಿ ಇರ್ತಿರೋ ಅಲ್ಲಿಂದಲೇ ಶುಭಾಶಯ ತಿಳಿಸಿ ಅಂತ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ಮತ್ತೊಂದು ಮಾಹಿತಿ ನೀಡಿದ ಯಶ್, ಜನವರಿ 8ರ 10 ಗಂಟೆ 18 ನಿಮಿಷಕ್ಕೆ ಹೊಂಬಾಳೆ ಯೂಟ್ಯೂಬ್ ನಲ್ಲಿ ಕೆಜಿಎಫ್-2 ಟೀಸರ್ ರಿಲೀಸ್ ಆಗುತ್ತಿದೆ. ಅದನ್ನು ನೋಡಿ ಎಂಜಾಯ್ ಮಾಡಿ ಆಶೀರ್ವದಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ಸಿನಿಮಾರಂಗಕ್ಕೆ 2020ರ ಕರಾಳ ವರ್ಷ; 2021 ತರಲಿದೆಯೇ ಬಾಕ್ಸ್‌ಆಫೀಸ್‌ಗೆ ಹರ್ಷ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights