ಯಾದಗಿರಿ: ತಾಯಂದಿರ ಮರಣ ಪ್ರಮಾಣ ಏರಿಕೆ; ಶಿಶು ಮರಣ ಪ್ರಮಾಣ ಇಳಿಕೆ

ಯಾದಗಿರಿ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ (ಐಎಂಆರ್) ಕಡಿಮೆಯಾಗಿದೆ. ಆದರೆ, ತಾಯಂದಿರ ಮರಣ ಪ್ರಮಾಣ (ಎಂಎಂಆರ್) ಹೆಚ್ಚಾಗಿದೆ ಎಂದು ಜಿಲ್ಲಾ ಆಂತರಿಕ ದಾಖಲೆಗಳು ಬಹಿರಂಗಪಡಿಸಿವೆ.

ವಿವಿಧ ರಾಜ್ಯಗಳಲ್ಲಿ ಆರೋಗ್ಯ ಸಚಿವಾಲಯವು ಪ್ರತಿ ವರ್ಷ ನಡೆಸುವ ಸಾಮಾನ್ಯ ಪರಿಶೀಲನಾ ಮಿಷನ್ (ಸಿಆರ್‌ಎಂ) , ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ನಡೆದ ತ್ವರಿತ ಮೌಲ್ಯಮಾಪನಕ್ಕಾಗಿ ಸಿದ್ದಪಡಿಸಿದ ದಾಖಲೆಯ ಪ್ರಕಾರ, ಶಿಶು ಮರಣ ಪ್ರಮಾಣವು 2019-2020 ರಲ್ಲಿ 1,000 ಜೀವಂತ ಜನನಗಳಿಗೆ 9.8 ಇತ್ತು. ಇದು 2020-21 ರಲ್ಲಿ 6.5 ಕ್ಕೆ ಇಳಿದಿದ್ದು, 2021-2022 ರಲ್ಲಿ 5 ಕ್ಕೆ ಇಳಿದಿದೆ ಎಂದು ಹೇಳಿದೆ. ಆದರೆ ಮತ್ತೊಂದೆಡೆ, ತಾಯಂದಿರ ಮರಣ ಪ್ರಮಾಣವು 2019-2020 ರಲ್ಲಿ ಒಂದು ಲಕ್ಷ ಜೀವಂತ ಜನನಗಳಿಗೆ 74.51 ಇತ್ತು. ಇದು 2020-2021 ರಲ್ಲಿ 75.30 ಕ್ಕೆ ಏರಿಕೆಯಾಗಿತ್ತು. 2021-2022 ರಲ್ಲಿ 81.67 ಕ್ಕೆ ಏರಿದೆ ಎಂದು ಹೇಳಿದೆ.

ಒಟ್ಟು ಜೀವಂತ ಜನನಗಳಲ್ಲಿ ತಾಯಂದಿರ ಮರಣಗಳ ಸಂಖ್ಯೆಯನ್ನು ಒಂದು ಲಕ್ಷದಿಂದ ಗುಣಿಸಿ MMR ಅನ್ನು ಲೆಕ್ಕಹಾಕಲಾಗುತ್ತದೆ. “ಕಡಿಮೆ ಜನನಗಳು ದಾಖಲಾಗಿರುವುದರಿಂದ ಈ ಬಾರಿ ಅಂಕಿಅಂಶವನ್ನು ಸರಿಯಾಗಿ ಲೆಕ್ಕ ಹಾಕಲಾಗಿಲ್ಲ. ಏಕೆಂದರೆ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಕೋವಿಡ್ ಕರ್ತವ್ಯಗಳಿಗೆ ನಿಯೋಜಿಸಲಾಗಿದೆ. ಇದಲ್ಲದೆ, ನಾವು ಕೊರೊನಾದಿಂದ 200 ಗರ್ಭಿಣಿ ತಾಯಂದಿರನ್ನು ಕಳೆದುಕೊಂಡಿದ್ದೇವೆ. ಆದರೆ, ರಾಜ್ಯದಲ್ಲಿ ಎಂಎಂಆರ್ ಕಡಿಮೆಯಾಗಿದೆ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ (ತಾಯಂದಿರ ಆರೋಗ್ಯ) ಡಾ ರಾಜ್‌ಕುಮಾರ್ ಹೇಳಿದರು.

ಇದನ್ನೂ ಓದಿ: ರೈಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ; ಸಾಮೂಹಿಕ ಅತ್ಯಾಚಾರದ ಶಂಕೆ

ಕೊರೊನಾ ಸಂದರ್ಭದಲ್ಲಿ ಅನೇಕರಿಗೆ ಮನೆಯಲ್ಲಿಯೇ ಹೆರಿಗೆಗೆ ಒಳಪಡುತ್ತಿದ್ದಾರೆ. ಅವು ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ. ಇದರಿಂದಾಗಿ ಈ ವರ್ಷ ಶಿಶು ಮರಣಗಳು ಸರಿಯಾಗಿ ದಾಖಲಾಗಿಲ್ಲ. ಆಸ್ಪತ್ರೆಗಳಲ್ಲಾದ ಶಿಶು ಮರಣಗಳು ಮಾತ್ರ ದಾಖಲಾಗುತ್ತವೆ. “ಒಟ್ಟಾರೆಯಾಗಿ, ಆರೋಗ್ಯ ಕಾರ್ಯಕರ್ತರಿಗೆ ತರಬೇತಿಯನ್ನು ನೀಡಲಾಗಿದ್ದು ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲಾಗಿದೆ. ಹೀಗಾಗಿ, ಕರ್ನಾಟಕದಲ್ಲಿ ಐಎಂಆರ್ ಮತ್ತು ಎಂಎಂಆರ್ ನಿಯಂತ್ರಿಸುವಲ್ಲ ಉತ್ತಮವಾಗಿ ಕಾರ್ಯನಿರ್ವಹಿಸಲಾಗಿದೆ. ತಾಯಿ ಮತ್ತು ಮಕ್ಕಳನ್ನು ಪೋಷಿಸಲು ನಾವು ವಿಶೇಷ ಆರೋಗ್ಯ ವಿಭಾಗಗಳನ್ನು ಹೊಂದಿದ್ದೇವೆ” ಎಂದು ಅವರು ಹೇಳಿದ್ದಾರೆ.

2019-2020 ಮತ್ತು 2020-21ರಲ್ಲಿ ಪ್ರಸವಾನಂತರದ ರಕ್ತಸ್ರಾವ, ಸೆರೆಬ್ರಲ್ ವೆನಸ್ ಸೈನಸ್ ಥ್ರಂಬೋಸಿಸ್, ತೀವ್ರ ರಕ್ತದೊತ್ತಡ ಮತ್ತು ಎಕ್ಲಾಂಪ್ಸಿಯಾದಿಂದ ತಾಯಿಯರ ಸಾವು ಸಂಭವಿಸಿದೆ ಎಂದು ಡಾಕ್ಯುಮೆಂಟ್ ಹೇಳಿದೆ. ಸುಮಾರು 40% ತಾಯಂದಿರ ಮರಣಗಳು 18 ರಿಂದ 25 ರ ವಯೋಮಾನದವರಾಗಿದ್ದಾರೆ, 30% ರಷ್ಟು 31-39 ವಯಸ್ಸಿನವರು ಮತ್ತು 20% ರಷ್ಟು 26-30 ವಯಸ್ಸಿನವರಾಗಿದ್ದಾರೆ. 2019-2020 ಮತ್ತು 2020-21ರಲ್ಲಿ ಶಿಶು ಮರಣಗಳು ಉಸಿರುಕಟ್ಟುವಿಕೆ, ನ್ಯುಮೋನಿಯಾ, ಸೆಪ್ಸಿಸ್, ಅತಿಸಾರ, ಜ್ವರ ಮತ್ತು ಜನನದ ನಂತರ 24 ಗಂಟೆಗಳಲ್ಲಿ ಸಾವು ಸಂಭವಿಸಿವೆ.

ಸಂಖ್ಯೆಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ

IMR ಅನ್ನು ವರ್ಷದ ಶಿಶು ಮರಣಗಳ ಸಂಖ್ಯೆಯನ್ನು ಜೀವಂತ ಜನನಗಳ ಸಂಖ್ಯೆಯಿಂದ ಭಾಗಿಸಿ ನೂರರಿಂದ ಗುಣಿಸಲಾಗುತ್ತದೆ.

MMR ಅನ್ನು ತಾಯಂದಿರ ಮರಣಗಳ ಸಂಖ್ಯೆಯನ್ನು ಜೀವಂತ ಜನನಗಳ ಸಂಖ್ಯೆಯಿಂದ ಭಾಗಿಸಿ ಒಂದು ಲಕ್ಷದಿಂದ ಗುಣಿಸಲಾಗುತ್ತದೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕನ ಬಂಧನ; ಪ್ರಾಂಶುಪಾಲರ ಬಂಧನಕ್ಕೆ ಆಗ್ರಹ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights