ವೃತ್ತಿ ಬದುಕಿಗೆ ವಿದಾಯ ಹೇಳಿದ ಡಬ್ಲ್ಯೂಡಬ್ಲ್ಯೂಇ ಸ್ಟಾರ್ ‌ಅಂಡರ್‌ಟೇಕರ್!

ಡಬ್ಲ್ಯೂಡಬ್ಲ್ಯೂಇ ಅಂದರೆ ಹೆಚ್ಚಾಗಿ ನೆನಪಿಗೆ ಬರೋದು ಅಂಡರ್‌ಟೇಕರ್ ಹೆಸರು. ಯಾಕೆಂದ್ರೆ ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ) ಕ್ಷೇತ್ರದಲ್ಲಿ ಅಂಡರ್‌ಟೇಕರ್ ಹೆಸರು ಅಷ್ಟು ಜನಪ್ರಿಯ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರೂ ಅಂಡರ್‌ಟೇಕರ್ ಸೆಣಸಾಟವನ್ನು ಎಂಜಾಯ್ ಮಾಡಿದ್ದಿದೆ. ಕಳೆದ 30 ವರ್ಷಗಳ ಕಾಲ ರಂಜಿಸಿದ್ದ ಅಂಡರ್‌ಟೇಕರ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

ನಿನ್ನೆ( ನವೆಂಬರ್‌ 22) ನಡೆದ WWE ಸರ್ವೈವರ್ ಸೀರೀಸ್‌ನಲ್ಲಿ ಅಂಡರ್‌ಟೇಕರ್ ವಿದಾಯ ಹೇಳಿದ್ದಾರೆ. 55ರ ಹರೆಯದ ಅಂಡರ್‌ಟೇಕರ್ ನಿಜವಾದ ಹೆಸರು ಮಾರ್ಕ್ ವಿಲಿಯಂ ಕ್ಯಾಲವೇ. ಆದರೆ ಅಮೆರಿಕಾದ ಈ ರಸ್ಲಿಂಗ್ ದಂತಕತೆ ಡೆಡ್‌ ಮ್ಯಾನ್, ಅಂಡರ್‌ಟೇಕರ್, ದ ಫಿನಾಮ್ ಎಂಬಿತ್ಯಾದಿ ಹೆಸರುಗಳಿಂದ ರಿಂಗ್‌ನಲ್ಲಿ ಖ್ಯಾತರಾಗಿದ್ದರು.

ಕಳೆದ ಜೂನ್‌ನಲ್ಲಿ ನಡೆದಿದ್ದ ರಸಲ್‌ಮೇನಿಯಾ 36ರಲ್ಲಿ ಅಂಡರ್‌ಟೇಕರ್ ಕಡೇಯ ಪಂದ್ಯ ಆಡಿದ್ದರು. ಆವತ್ತು ಎಜೆ ಸ್ಟೈಲ್ ವಿರುದ್ಧ ಕಾದಾಡಿದ್ದರು. ವಿದಾಯದ ವೇಳೆ ಅಂಡರ್‌ಟೇಕರ್ ಕಾದಾಟಕ್ಕಿಳಿಯಲಿಲ್ಲ. ವಿದಾಯಕ್ಕೆ ವಿಶೇಷ ಮೆರಗು ಅಂಡರ್‌ಟೇಕರ್ ವಿದಾಯದ ವೇಳೆ ಇಡೀ ಸ್ಟೇಡಿಯಂಗೆ ವೀಕ್ಷಕರಿದ್ದಂತೆ ಮೆರಗು ನೀಡಲಾಗಿತ್ತು. ಥಂಡರ್ಡೊಮ್ ಮೂಲಕ ವೀಕ್ಷಕರು ಸ್ಟೇಡಿಯಂನಲ್ಲೇ ಕೂತು ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಟೇಕರ್ ವಿದಾಯದ ವೇಳೆ ಸ್ಟಾರ್‌ ರಸ್ಲರ್‌ಗಳ ಬಳಗವೇ ಸಾಕ್ಷಿಯಾಗಿತ್ತು.

ಸ್ಟಾರ್‌ಗಳು ಭಾಗಿ ಅಂಡರ್‌ಟೇಕರ್ ವಿದಾಯಕೂಟವನ್ನು ಡಬ್ಲ್ಯೂಡಬ್ಲ್ಯೂ ಅಧ್ಯಕ್ಷ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನ್ಸ್ ಮಿಕ್‌ಮೆಹಾನ್ ನಡೆಸಿಕೊಟ್ಟರು. ಬಿಗ್ ಶೋ, ಜೆಬಿಎಲ್, ಜೆಫ್ ಹಾರ್ಡಿ, ಮಿಕ್ ಫೋಲೆ, ದಿ ಗಾಡ್ಫಾದರ್, ದಿ ಗಾಡ್ವಿನ್ಸ್, ಸವಿಯೊ ವೆಗಾ, ರಿಕಿಶಿ, ಕೆವಿನ್ ನ್ಯಾಶ್, ರಿಕ್ ಫ್ಲೇರ್, ಬೂಕರ್ ಟಿ, ಶಾನ್ ಮೈಕೆಲ್ಸ್, ಟ್ರಿಪಲ್ ಎಚ್ ಮತ್ತು ಕೇನ್ ಕಾರ್ಯಕ್ರಮದಲ್ಲಿ ಭಾಗಿಯಾದರು.

ಟೇಕರ್ ಭಾವುಕ ನುಡಿ ‘ನಾನು ಅನೇಕ ವರ್ಷಗಳಿಂದ ಈ ರಿಂಗ್‌ಗೆ ನಿಧಾನಕ್ಕೆ ಬಂದು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಜನರನ್ನು ರೆಸ್ಟ್ ಇನ್ ಪೀಸ್‌ನಲ್ಲಿರುವಂತೆ ಮಾಡಿದ್ದೇನೆ. ಈಗ ನನ್ನ ಸಮಯ ಬಂದಿದೆ. ಅಂಡರ್‌ಟೇಕರ್‌ನನ್ನು ರೆಸ್ಟ್ ಇನ್ ಪೀಸ್‌ನಲ್ಲಿಡಲು ನನ್ನ ಸಮಯ ಬಂದಿದೆ,’ ಎಂದು ವಿದಾಯದ ವೇಳೆ ಅಂಡರ್‌ಟೇಕರ್ ಭಾವುರಾಗಿ ನುಡಿದರು.

ಅತೀಂದ್ರೀಯ ಶಕ್ತಿಯುಳ್ಳ ಕುಸ್ತಿಪಟು ಟೆಕ್ಸಾಸ್ ಮೂಲದ ಮಾರ್ಕ್ ವಿಲಿಯಂ ಅಲಿಯಾಸ್ ಅಂಡರ್ ಟೇಕರ್ 6 ಅಡಿ10 ಇಂಚು ಎತ್ತರ, 136 ಕೆಜಿ ತೂಕುವ ದೈತ್ಯ. ರಿಂಗ್ ನಲ್ಲಿ ಮಾರಣಾಂತಿಕ ಪೆಟ್ಟು ತಿಂದು ಸಾಯುವ ಸ್ಥಿತಿ ತಲುಪಿದರೂ ಎದ್ದು ಬಡಿದಾಡುವ ಅತೀಂದ್ರೀಯ ಶಕ್ತಿಯುಳ್ಳ ಕುಸ್ತಿಪಟುವೀತ ಎಂಬ ಖ್ಯಾತಿ ಟೇಕರ್‌ಗಿದೆ. 1984ರಿಂದಲೇ ಡಬ್ಲ್ಯೂಡಬ್ಲ್ಯೂಇ ವೃತ್ತಿ ಬದುಕಿಗಿಳಿದಿದ್ದ ಅಂಡರ್ ಟೇಕರ್ ಬಹಳಷ್ಟು ಡಬ್ಲ್ಯೂಡಬ್ಲ್ಯೂಇ ವಿಶ್ವ ಚಾಂಪಿಯನ್‌ಷಿಪ್‌ಗಳನ್ನು ಗೆದ್ದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights