ಹಾಲಿನ ಡೈರಿಯಲ್ಲಿ ಹಾಲಿನಿಂದ ಸ್ನಾನ ಮಾಡಿದ ಕೆಲಸಗಾರ : ವೀಡಿಯೊ ವೈರಲ್

ಹಾಲು ತುಂಬಿದ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ಡೈರಿ ಪ್ಲಾಂಟ್ ಕೆಲಸಗಾರನ ವಿಡಿಯೋ ಅಂತರ್ಜಾಲದ ಸಕತ್ ಸದ್ದು ಮಾಡುತ್ತಿದೆ. ಟರ್ಕಿಯ ಈ ಕಿರು ಕ್ಲಿಪ್ ಅನ್ನು ಆರಂಭದಲ್ಲಿ ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಈಗ @nedenttoldu ಎಂಬ ಖಾತೆಯಿಂದ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ವೈರಲ್ ವೀಡಿಯೊ ಏನು ತೋರಿಸುತ್ತದೆ?

ಕ್ಲಿಪ್ನಲ್ಲಿ, ಒಬ್ಬ ವ್ಯಕ್ತಿ ಡೈರಿ ಪ್ಲಾಂಟ್ನಲ್ಲಿ ಎತ್ತರದ ಲೋಹದ ತೊಟ್ಟಿಯೊಳಗೆ ಮಲಗಿದ್ದಾನೆ. ಅವನು ತನ್ನ ಮೇಲೆ ಹಾಲನ್ನು ಸುರಿದುಕೊಂಡು ಸ್ನಾನ ಮಾಡುತ್ತಿದ್ದು ಟಬ್ ಹಾಲಿನಿಂದ ತುಂಬಿದೆ. ಟರ್ಕಿಯ ಸೆಂಟ್ರಲ್ ಅನಾಟೋಲಿಯನ್ ಪ್ರಾಂತ್ಯದ ಕೊನ್ಯಾದಲ್ಲಿ ಡೈರಿ ಪ್ಲಾಂಟ್ ನಲ್ಲಿ ಈ ಘಟನೆ ನಡೆದಿದೆ ಎಂದು ಹುರಿಯೆಟ್ ಡೈಲಿ ನ್ಯೂಸ್ ವರದಿ ಮಾಡಿದೆ.

ವೀಡಿಯೊವನ್ನು ಇಲ್ಲಿ ನೋಡಿ:

ಕೆಲಸಗಾರನ ಹೆಸರು ಏನು?

ಹಾಲು ತುಂಬಿದ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ಕಾರ್ಮಿಕನನ್ನು ಎಮ್ರೆ ಸಾಯರ್ ಎಂದು ಗುರುತಿಸಲಾಗಿದೆ. ಉಗುರ್ ತುರ್ಗುಟ್ ತಮ್ಮ ಟಿಕ್ ಟಾಕ್ ಖಾತೆಯಲ್ಲಿನ ತುಣುಕನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಹುರಿಯೆಟ್ ಡೈಲಿ ನ್ಯೂಸ್ ವರದಿ ಮಾಡಿದೆ.

ವ್ಯಕ್ತಿಗಳ ಬಂಧನದ ಬಳಿಕ ಡೈರಿ ಪ್ಲಾಂಟ್ ಅನ್ನು ಸಹ ಮುಚ್ಚಲಾಯಿತು. ಅಧಿಕಾರಿಗಳ ಪ್ರಕಾರ ದಂಡವನ್ನು ಸಹ ನೀಡಲಾಯಿತು.

ಘಟನೆಯ ನಂತರ ಉಗುರ್ ತುರ್ಗುಟ್ ಅವರನ್ನು ವಜಾ ಮಾಡಲಾಗಿದೆ. ಆದರೆ ಎಮ್ರೆ ಸಾಯರ್ ‘ಹಾಲಿನಲ್ಲಿ ಸ್ನಾನ ಮಾಡಲಿಲ್ಲ. ಅದು ನೀರು ಮತ್ತು ಶುಚಿಗೊಳಿಸುವ ವಸ್ತುಗಳ ಮಿಶ್ರಣವಾಗಿದೆ ಎಂದು ಹೇಳಿದರು.

ಅಧಿಕಾರಿಗಳು ಏನು ಹೇಳುತ್ತಾರೆ?

ಘಟನೆಯ ನಂತರ ತನಿಖೆ ಆರಂಭಿಸಲಾಗಿದೆ ಎಂದು ಕೊನ್ಯಾದ ಕೃಷಿ ಮತ್ತು ಅರಣ್ಯ ನಿರ್ದೇಶನಾಲಯದ ಮುಖ್ಯಸ್ಥ ಅಲಿ ಎರ್ಗಿನ್ ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಾವರವನ್ನು ಮುಚ್ಚಲು ಸಹ ನಿರ್ಧರಿಸಿದ್ದು ಕಂಪನಿಯ ವಿರುದ್ಧ ದೂರು ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights