ಬಿಜೆಪಿಗೆ ಹೈದರಾಬಾದ್‌ ಚುನಾವಣೆ ಗೆಲ್ಲುವುದೇ ಮುಖ್ಯ; ಏಕೆ ಮತ್ತು ಹೇಗೆ?

ನಿರ್ಲಕ್ಷಿಸಲು ಯಾವುದೇ ಚುನಾವಣೆಯೂ ತುಂಬಾ ಚಿಕ್ಕದಲ್ಲ. ಬಿಜೆಪಿಯನ್ನು ಮೋದಿ ಮತ್ತು ಅಮಿತ್‌ ಶಾ ಮುನ್ನಡೆಸುತ್ತಿರುವ ಕಾಲದಲ್ಲಿ ಬಿಜೆಪಿಗೆ ಪ್ರಿತಿಯೊಂದು ಚುನಾವಣೆಯೂ ಮುಖ್ಯವಾಗಿದೆ. ಪ್ರತಿ ಚುನಾವಣೆಯೂ ಮಿತ್ರರನ್ನು ಪರೀಕ್ಷಿಸಲು, ಒಗ್ಗೂಡಿಸಿಕೊಳ್ಳಲು ಮತ್ತು ವಿಸ್ತರಿಸಲು ಒಂದುಅವಕಾಶವಾಗಿರುತ್ತದೆ. ಪ್ರತಿ ಚುನಾವಣೆಯಲ್ಲಿಯೂ ಪ್ರಭಾವದ ವಿಸ್ತರಣೆ ಬೆಳೆಯುತ್ತಲೇ ಇರುತ್ತದೆ.

ಆದ್ದರಿಂದ, ಹೈದರಾಬಾದ್‌ನಲ್ಲಿ ನಡೆಯಲಿರುವ ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿಯೂ ಬಿಜೆಪಿ ತನ್ನ ದೊಡ್ಡ ಐಟಿ ಹಬ್‌ನ ಸ್ಟಾರ್‌ಗಳನ್ನೇ ಮೆರವಣಿಗೆ ಮಾಡಿತ್ತಿದೆ. ಡಿ.01 ರಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಗೆ ಮತದಾನ ನಡೆಯಲಿದೆ. ಈ ಚುನಾವಣೆಗೆ ಬಿಜೆಪಿ ತನ್ನ ಸ್ಟಾರ್‌ ಪ್ರಚಾರಕರಾದ ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಪ್ರಕಾಶ್ ಜಾವಡೇಕರ್, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಯುವ ವಿಭಾಗ ಮುಖ್ಯಸ್ಥ ತೇಜಸ್ವಿ ಸೂರ್ಯರನ್ನು ಪ್ರಚಾರಕ್ಕಾಗಿ ಹೈದರಾಬಾದ್‌ ಬೀದಿಗಳಿಗೆ ಇಳಿಸಿದೆ.

ಹೈದರಾಬಾದ್‌ನ ಆಡಳಿತಾರೂಢ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌)ಗೆ ಬಿಜೆಪಿಯ ನಡೆ ಅಚ್ಚರಿಯನ್ನು ಉಂಟು ಮಾಡಿರುತ್ತದೆ. ಬಿಜೆಪಿ ತನ್ನ ಲುಕ್‌ ಸೌತ್‌ (ಬಿಜೆಪಿ ನೋಟ ದಕ್ಷಿಣದೆಡೆಗೆ) ಯೋಜನೆಯು ಬಿಜೆಪಿ ದಕ್ಷಿಣದಲ್ಲಿ ತನ್ನ ಪ್ರಾಬಲ್ಯವನ್ನು ಬೆಳೆಸಿಕೊಳ್ಳಲು ದೈತ್ಯ ಅದ್ಯತೆಯೊಂದಿಗೆ ಸಜ್ಜಾಗಿ ಮುನ್ನುಗ್ಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿದ್ದ ನಟಿ ಖುಷ್ಬೂ ಅವರನ್ನು ಬಿಜೆಪಿಗೆ ತರುವಲ್ಲಿ ಬಿಎಲ್‌ ಸಂತೋಷ್‌ ಸಫಲವಾಗಿದ್ದಾರೆ. ಬಿಜೆಪಿಯಲ್ಲಿ ಕೆಲವೇ ದಿನಗಳಲ್ಲಿ ಬಿಎಲ್‌ ಸಂತೋಷ್‌ ಬ್ಯಾಕ್‌ರೂಮ್‌ ನಾಯಕರಾಗಿ ಹೊರಹೊಮ್ಮಿದ್ದಾರೆ. ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ನಿಯೋಜಿಸಲ್ಪಟ್ಟ ನಂತರ, ಅವರು ಸಂಸ್ಥೆಯ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಹೊಂದಿದ್ದಾರೆ. ಇದು ಅವರ ಸ್ಥಾನಮಾನವನ್ನು ಸ್ಪಷ್ಟವಾಗಿ ಹೆಚ್ಚಿಸಿದೆ. ಅಲ್ಲದೆ, ಅವರ ಮಹತ್ವಾಕಾಂಕ್ಷೆಯು ಅವರ ತವರು ರಾಜ್ಯವಾದ ಕರ್ನಾಟಕದಲ್ಲಿ ಹೆಚ್ಚು ದೊಡ್ಡದಾದ ಮತ್ತು ಸಾರ್ವಜನಿಕವಾಗಿ ತಮ್ಮ ಪ್ರಭಾವ ಮತ್ತು ಪಾತ್ರವನ್ನು ಹೆಚ್ಚಿಕೊಳ್ಳುವುದರ ಎಡೆಗೆ ಕೇಂದ್ರೀಕರಿಸಿದೆ ಎಂದು ವರದಿಯಾಗಿದೆ. ಹೇಗಾದರೂ, ಅವರು ಸಹಿಸಿಕೊಳ್ಳಬೇಕಾದ ದೊಡ್ಡ ಬೆಂಬಲ ಬಲವನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ಪ್ರತಿಸ್ಪರ್ಧಿ ಆಕಾಂಕ್ಷೆಗಳೊಂದಿಗೆ ಅವರು ಕರ್ನಾಟಕದಲ್ಲಿ ಸೆಣಸಾಡಬೇಕಿದೆ.

030kt0kk

ತಮಿಳುನಾಡಿನಲ್ಲಿ ಮಿತ್ರ ಎಐಎಡಿಎಂಕೆ ಅವರೊಂದಿಗಿನ ಕೆಲವು ಭಿನ್ನಾಭಿಪ್ರಾಯಗಳನ್ನು ಪರೀಕ್ಷಿಸಲು ಅಮಿತ್‌ ಷಾ ಅವರ ಚೆನ್ನೈ ಪ್ರವಾಸದಲ್ಲಿ ಮೈತ್ರಿ ಪಕ್ಷಗಳ ಚುನಾವಣಾ ಸ್ಥಾನ ಪಾಲುದಾರಿಕೆಯನ್ನು ಎರಡೂ ಕಡೆಯವರು ಸಮರ್ಥವಾಗಿ ಘೋಷಿಸಿದರು. ಸುಮಾರು 70,000 ಕೋಟಿ ರೂಗಳ ಹೊಸ ಯೋಜನೆಗಳಿಗೆ ಈ ಮೈತ್ರಿ ಸಹಾಯ ಮಾಡಿದೆ. ಮುಂದಿನ ವರ್ಷ ತಮಿಳುನಾಡು ಚುನಾವಣೆ ನಡೆಯಲಿದೆ. ಅಲ್ಲದೆ, ಕೆಲವೇ ತಿಂಗಳುಗಳಲ್ಲಿ ಬಂಗಾಳದಲ್ಲಿ ನಡೆಯಲಿರುವ ಅತ್ಯಂತ ಮಹತ್ವದ ಚುನಾವಣೆಯು ಬಿಜೆಪಿಗೆ ಪರೀಕ್ಷೆಯಾಗಿದೆ. ಈ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ದೊಡ್ಡ ಪ್ರಯತ್ನವನ್ನು ಮಾಡುತ್ತಿದೆ.

ಇದನ್ನೂ ಓದಿ: BJP ಆಡಳಿತ ನಡೆಸಲು ವಿಫಲವಾದರೂ ಚುನಾವಣೆಗಳನ್ನು ಗೆಲ್ಲುತ್ತದೆ! ಹೇಗೆ ಗೊತ್ತೇ?

ಮತರಾರರನ್ನು ಭಾವನಾತ್ಮಕವಾಗಿ ಸೆಳೆಯುತ್ತಿರುವ ಬಿಜೆಪಿ ಹೈದರಾಬಾದ್‌ನ ಪಾಲಿಕೆ ಚುನಾವಣಾ ಪ್ರಚಾರದಲ್ಲಿಯೂ ಜಿನ್ನಾ, ಬಿರಿಯಾನಿ, ಪಾಕಿಸ್ತಾನ, ಸರ್ಜಿಕಲ್ ಸ್ಟ್ರೈಕ್ ಪದಗಳನ್ನು ಬಳಸಿಕೊಂಡಿದೆ. ಹೈದರಾಬಾದ್‌ನಲ್ಲಿ ಮುಸ್ಲಿಮರು 30 ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ಸುಮಾರು 300 ಸ್ಥಾನಗಳಲ್ಲಿ 100 ಸ್ಥಾನಗಳನ್ನು ಮುಸ್ಲಿಮರು ನಿರ್ಧರಿಸುತ್ತಾರೆ. ಇಲ್ಲಿ ಚುನಾವಣೆಗಾಗಿ ಕೋಮುವಾದೀಕರಣಕ್ಕೂ ಬಿಜೆಪಿ ಸಿದ್ದವಾಗಿದೆ. ಆದರೆ, ಮಮತಾ ಬ್ಯಾನರ್ಜಿಯ ಪ್ರಾಬಲ್ಯವಿರುವ ಪಶ್ಚಿಮ ಬಂಗಾಳಕ್ಕೆ ಈ ಕಾರ್ಯತಂತ್ರವನ್ನು ಹೇಗೆ ಜಾರಿಗೊಳಿಸುವುದು ಎಂಬುದು ಬಿಜೆಪಿಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯ ಕೋಮುವಾದೀಕರಣದ ಪ್ರಯತ್ನಗಳು ಮತ್ತಷ್ಟು ಹೆಚ್ಚುತ್ತವೆ.

ಹೈದರಾಬಾದ್‌ನಲ್ಲಿ ಹಿಂದೂ ಮತವನ್ನು ಕ್ರೂಢೀಕರಿಸಲು ಬಿಜೆಪಿಗರು ತಮ್ಮ ಭಾಷಣಗಳಲ್ಲಿ ಎಐಐಎಂಐಎಂನ ಮುಖ್ಯಸ್ಥ ಅಸದುದ್ದೀನ್ ಒವೈಸಿ ಅವರನ್ನು ಗುರಿಯಾಗಿರಿಸಿಕೊಂಡಿದ್ದಾರೆ. ಓವೈಸಿ ಅವರ ಪಕ್ಷವು ಬಿಹಾರದಲ್ಲಿ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ತಮ್ಮ ಮಹತ್ವವನ್ನು ಸಾಬೀತುಪಡಿಸಿದೆ.

qklrcrgo

ಬಿಹಾರದಲ್ಲಿ 5 ಸ್ಥಾನಗಳನ್ನು ಗೆದ್ದ ಬಳಿಕ, ಬಂಗಾಳದಲ್ಲಿಯೂ ಪಕ್ಷವು ಸ್ಪರ್ಧಿಸಲಿದೆ ಎಂದು ಓವೈಸಿ ಘೋಷಿಸಿದ್ದಾರೆ. ಅವರ ಘೋಷಣೆಯ ನಂತರ ಓವೈಸಿಯನ್ನು “ಬಿಜೆಪಿ ಬಿ ಟೀಮ್‌” ಎಂದು ಮಮತಾ ಬ್ಯಾನರ್ಜಿ ಕರೆದಿದ್ದಾರೆ. ಓವೈಸಿ ಅವರ ಪಕ್ಷವು ಬಂಗಾಳದಲ್ಲಿ ಜಾತ್ಯಾತೀತರ ಮತಗಳನ್ನು ವಿಭಜಿಸಲಿದೆ. ಅವರು ಅಮಿತ್‌ ಶಾ ಅವರ ರಹಸ್ಯ ಸೇವಕರಾಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಬಿಜೆಪಿಯವರ ಪಿತೂರಿ ಸಿದ್ದಾಂತಗಳ ಪ್ರಕಾರ, ಮುಸ್ಲೀಂ ಮತದಾರರ ದೃಷ್ಟಿಯಲ್ಲಿ ಓವೈಸಿ ಬಗ್ಗೆ ವಿಶ್ವಾಸಾರ್ಹತೆಯನ್ನು ಹುಟ್ಟಿಸುವುದು. ಅದಕ್ಕಾಗಿ ಅವರು ಇತರ ಪಕ್ಷಗಳನ್ನು ಬಿಟ್ಟು ಓವೈಸಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದನ್ನು “ನೂರಾ ಖುಸ್ತಿ” (ಮ್ಯಾಚ್‌ಫಿಕ್ಸಿಂಗ್‌ ಫೈಟ್‌) ಅಥವಾ ರಾಜಕಾರಣಿಗಳ WWF ಪಂದ್ಯ ಎಂದು ಕರೆಯಲಾಗುತ್ತದೆ. ಈ “ರಹಸ್ಯ ಸ್ಯಾಟಜಿಗಳಲ್ಲಿ” ಷಾ ಉತ್ತಮವಾಗಿದ್ದಾರೆ. ಉದಾ: ಬಿಜೆಪಿಯ ಮಿತ್ರ ನಿತೀಶ್ ಕುಮಾರ್‌ಗೆ ಭಾರೀ ಹಿನ್ನೆಡೆಯು ಬಿಹಾರದ ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿಯ ಸಹಭಾಗಿತ್ವವು ನಿತೀಶ್‌ ಅವರನ್ನು ಒಂದು ರೀತಿಯ ಅವ್ಯವಸ್ಥೆಗೆ ದೂಡಿತು ಎಂಬುದು ಖಾತ್ರಿಯಾಗಿದೆ.

ಆದರೆ, ಬಿಜೆಪಿಯೊಂದಿಗಿನ ಸಂಬಂಧದ ಎಲ್ಲಾ ಆರೋಪಗಳನ್ನು ಒವೈಸಿ ನಿರಾಕರಿಸಿದ್ದಾರೆ.

ಬಿಜೆಪಿ ಈಗ ಭಾರತೀಯ ರಾಜಕಾರಣದ ಪ್ರಧಾನ ದ್ರುವವಾಗಿದೆ ಮತ್ತು ಉತ್ತರ ಭಾರತದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ. ಮತದಾರರ ನೆಲೆಯನ್ನು ವಿಸ್ತರಿಸಲು, ಅದು ದಕ್ಷಿಣ, ಪೂರ್ವ ಮತ್ತು ಈಶಾನ್ಯದತ್ತ ನೋಡಬೇಕು ಎಂದು ಆರ್‌ಎಸ್‌ಎಸ್ ಅಭಿಪ್ರಾಯಪಟ್ಟಿದೆ.

ಕೃಪೆ: ಎನ್‌ಡಿ ಟಿವಿ

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಗ್ರಾಮ ಪಂಚಾಯತಿ ಚುನಾವಣಗೆ ಬಿಜೆಪಿ ತಂತ್ರ: ಸಫಲವಾಗುತ್ತಾ 6:6 ಸ್ಟ್ಯಾಟಜಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights