ಒಂದು ಮತದಿಂದ ಗೆದ್ದರೂ ಅದು ಗೆಲುವೇ: ತೇಜಸ್ವಿಗೆ ನಿತೀಶ್‌ ತಿರುಗೇಟು!

ಬಿಹಾರ ವಿಧಾನಸಭಾ ಚುನಾವಣೆ ಎನ್‌ಡಿಎ ಮೈತ್ರಿಕೂಟವು ಮಹಾಘಟಬಂಧನಕ್ಕಿಂತ 12,270 ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಇಷ್ಟು ಕಡಿಮೆ ಅಂತರದ ಗೆಲುವನ್ನು ಗೆಲುವು ಎಂದು ಪರಿಗಣಿಸಬೇಕೇ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿಧಾನಸಭೆಯಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ನಿತೀಶ್‌ ಕುಮಾರ್, ‘ಒಂದು ಮತದಿಂದ ಗೆದ್ದರೂ ಅದು ಗೆಲುವೇ ಆಗಿರುತ್ತದೆ’ ಎಂದು ಹೇಳಿದ್ದಾರೆ.

‘ಒಂದು ಮತದ ಗೆಲುವು ಅಂತಿಮವಾಗಿ ವಿಜಯವೇ ಆಗಿರಲಿದೆ. ನಮಗೆ 125 (ಸ್ಥಾನಗಳು) ಲಭಿಸಿವೆ. 122 ಹೊಂದಿರುವ ಯಾರಾದರೂ ಸರ್ಕಾರ ರಚಿಸಬಹುದು. ವಿಧಾನಸಭಾ ಚುನಾವಣೆಯಲ್ಲಿ ಏನಾದರೂ ಅಕ್ರಮ ನಡೆದಿದೆ ಎಂದು ಯಾರಾದರೂ ಭಾವಿಸಿದರೆ ಅವರು ನ್ಯಾಯಾಲಯಕ್ಕೆ ಹೋಗಬಹುದು. ನ್ಯಾಯಾಲಯ ಅವರ ವಾದ ಆಲಿಸಿ ತೀರ್ಪು ನೀಡಲಿದೆ’ ಎಂದು ನಿತೀಶ್‌ ಕುಮಾರ್ ಹೇಳಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್, ‘ಎನ್‌ಡಿಎ ಮಹಾಗಠಬಂಧನಕ್ಕಿಂತಲೂ ಕೇವಲ 12,270 ಮತಗಳನ್ನು ಹೆಚ್ಚಾಗಿ ಪಡೆದು, 16 ಸ್ಥಾನಗಳನ್ನು ಅಂತರದಲ್ಲಿ ಗೆಲ್ಲುವ ಮೂಲಕ ವಿಜಯಶಾಲಿ ಎಂದು ಹೇಳಿಕೊಳ್ಳುತ್ತಿದೆ. ಇದನ್ನು ಗೆಲುವು ಎನ್ನಬೇಕೇ’ ಎಂದು ಪ್ರಶ್ನಿಸಿದ್ದರು.


ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಸುವೆಂಡು ರಾಜೀನಾಮೆ; ದೆಹಲಿಗೆ ತೆರಳಿದ TMC ಶಾಸಕ BJP ಸೇರುವ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights