ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿಗೆ ಅದ್ಧೂರಿ ಸ್ವಾಗತ : ಮಾಸ್ಕ್, ದೈಹಿತ ಅಂತರ ಮರೆತ ಬೆಂಬಲಿಗರು..!

ಮೀಸೆ ತಿರುವುತ್ತಾ ಬೆಳಗಾವಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಅದ್ಧೂರಿ ಸ್ವಾಗತ ಮಾಡಲಾಗಿದೆ. 9 ತಿಂಗಳು 16 ದಿನಗಳ ಬಳಿಕ ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿಗೆ ಬೃಹತ್ ಸೇಬಿನ ಹಾರ, ಹೂವಿನ ಹಾರ ಹಾಕಿ ಹೆಗಲ ಮೇಲೆ ಹೊತ್ತು ಬೆಂಬಲಿಗರು ಮೆರವಣಿಗೆ ಮಾಡುತ್ತಿದ್ದಾರೆ.

ಈ ವೇಳೆ ಮಾತನಾಡಿದ ವಿನಯ್ ಕುಲಕರ್ಣಿ, ” ಆದಷ್ಟು ಬೇಗ ಪ್ರಕರಣದಿಂದ ನಾನು ನಿರಪರಾಧಿಯಾಗಿ ಹೊರಬರುತ್ತೇನೆ. ಮುಂಬರುವ ದಿನಗಳಲ್ಲಿ ಹೇಗಿರಬೇಂದದು ಕಲಿತಿದ್ದೇನೆ. ನನ್ನ ಮೇಲೆ ಭರವಸೆ ಇಟ್ಟು ಬಿಡುಗಡೆ ಮಾಡಲಾಗಿದೆ. ಬೇಲ್ ಕೊಟ್ಟಿದ್ದಕ್ಕೆ ಸುಪ್ರೀಕೊರ್ಟಗೆ ಅಭಿನಂದಿನೆ ಸಲ್ಲಿಸುತ್ತೇನೆ. ಜೈಲಿನಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ನನ್ನನ್ನು ಬೆಂಬಲಿಸಿದ್ದಕ್ಕೆ ಎಲ್ಲಾ ಬೆಂಬಲಿಗರಿಗೂ ಕೃತಜ್ಞತೆಗಳು. ಇನ್ಮುಂದೆ ನನ್ನ ಕ್ಷೇತ್ರದ ಜನಕ್ಕಾಗಿ ಹೋರಾಡುತ್ತೇನೆ. ಹೋರಾಟ ಮಾಡಿ ಈ ಕೇಸ್ ನಿಂದ ಹೊರಬಹುರುತ್ತೇನೆ” ಎಂದು  ಹೇಳಿದರು.

ವಿನಯ್ ಕುಲಕರ್ಣಿಗೆ  ಐಷಾರಾಮಿ ಕಾರುಗಳ ಮೂಲಕ ಅದ್ದೂರಿ ರೋಡ್ ಶೋ ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ದುರಾದೃಷ್ಠ ಅಂದರೆ ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಇಲ್ಲದೇ ರೋಡ್ ಶೋ ಮಾಡಲಾಗುತ್ತಿದ್ದರೂ ಪೊಲೀಸರು ಪ್ರಶ್ನೆ ಮಾಡುತ್ತಿಲ್ಲ.

ಬೆಳಗಾವಿಯಲ್ಲಿ ವೀಕೆಂಡ್ ರೂಲ್ಸ್ ಬ್ರೇಕ್ ಆದರೂ ಕೂಡ ಮೆರವಣಿಗೆಯನ್ನು ತಡೆಯುವಂತಹ ಕೆಲಸ ಪೊಲೀಸರು ಮಾಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ.

ಇತ್ತ ವಿನಯ್ ಕುಲಕರ್ಣಿ ಕೊರೊನಾ ನಿಯಮಗಳು ಯಾವುದೇ ನನಗೆ ಅನ್ವಯವಾಗುದಿಲ್ಲ ಎಂಬಂತೆ ಮೀಸೆ ತಿರುತ್ತಾ ಮೆರವಣಿಗೆ ಮಾಡಿಸಿಕೊಳ್ಳುತ್ತಿದ್ದಾರೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights