ಮುಂಬೈನಲ್ಲಿ ಭಯೋತ್ಪಾದಕರನ್ನು ಬಂಧಿಸಿದ ವೀಡಿಯೋವೆಂದು ಚಿತ್ರೀಕರಣದ ವೀಡಿಯೋ ವೈರಲ್!

ಮುಂಬೈ ಪೊಲೀಸರು ಪುರುಷರ ಗುಂಪನ್ನು ಹಗಲು ಹೊತ್ತಿನಲ್ಲಿ ಬಂಧಿಸುತ್ತಿದ್ದಾರೆ ಎಂದು ಹೇಳಿಕೊಳ್ಳುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೋ ದಕ್ಷಿಣ ಮುಂಬೈನ ಪೈಡೋನಿ ಪ್ರದೇಶದಲ್ಲಿ ಕಟ್ಟಡವೊಂದರಲ್ಲಿ ಅಡಗಿರುವ ಕೆಲವು ಭಯೋತ್ಪಾದಕರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ನಿಮಿಷ 27 ಸೆಕೆಂಡುಗಳ ವಿಡಿಯೋ ಮೂರು ಪೊಲೀಸ್ ಜೀಪ್‌ಗಳು ಹಳೆಯ ಕಟ್ಟಡದ ಮುಂದೆ ಬರುವುದರೊಂದಿಗೆ ಪ್ರಾರಂಭವಾಗುತ್ತದೆ. ಹಲವಾರು ಪೊಲೀಸರು ತಮ್ಮ ಜೀಪಿನಿಂದ ಹೊರಬಂದು ನಂತರ ಕಟ್ಟಡದ ಒಳಗಿನಿಂದ ಪುರುಷರ ಗುಂಪನ್ನು ಬಲವಂತವಾಗಿ ಹೊರಗೆ ಎಳೆಯುವುದನ್ನು ಕಾಣಬಹುದು. ನಂತರ ಜೀಪ್‌ಗಳು ಕ್ರಮಿಸುತ್ತವೆ.

ಅಂತಹ ಒಂದು ವೀಡಿಯೊಗೆ ಹಿಂದಿಯಲ್ಲಿನ ಶೀರ್ಷಿಕೆ “ದಕ್ಷಿಣ ಮುಂಬೈನ ಪೈಡೋನಿ ಪ್ರದೇಶದಿಂದ ಸಿಕ್ಕಿಬಿದ್ದ ಭಯೋತ್ಪಾದಕರು” ಎಂದು ಬರೆಯಲಾಗಿದೆ. ಫೆಬ್ರವರಿ 14 ರಂದು ದಕ್ಷಿಣ ಮುಂಬೈನ ಪೈಡೋನಿ ಪ್ರದೇಶದಲ್ಲಿ ನಡೆದ ವೆಬ್ ಸರಣಿಯ ಚಿತ್ರೀಕರಣದಿಂದ ಈ ವೈರಲ್ ವಿಡಿಯೋ ಬಂದಿದೆ.

ಈ ವಿಷಯದ ಬಗ್ಗೆ ಉತ್ತಮ ಸ್ಪಷ್ಟತೆಗಾಗಿ ಪೈಡೋನಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಹಿರಿಯ ಇನ್ಸ್‌ಪೆಕ್ಟರ್ ಸುಭಾಷ್ ದುಧಗಾಂವ್ಕರ್ ಅವರು, ಈ ವೀಡಿಯೊ 2021 ರ ಫೆಬ್ರವರಿ 14 ರಂದು ಪೈಡೋನಿಯಲ್ಲಿ ನಡೆದ ವೆಬ್ ಸರಣಿ ಚಿತ್ರೀಕರಣದಿಂದ ಬಂದಿದೆ. ಆದರೆ ಇದು ನಿಜವಾದ ಪೊಲೀಸ್ ಕಾರ್ಯಾಚರಣೆಯಲ್ಲ ಎಂದು ದೃಢಪಡಿಸಿದ್ದಾರೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಅಂತಹ ಭಯೋತ್ಪಾದಕ ಬಂಧನ ನಡೆದಿಲ್ಲ ಎಂದು ಹೇಳಿದ್ದಾರೆ.

“ಫೆಬ್ರವರಿ 14 ರಂದು ನಡೆದ ಚಿತ್ರೀಕರಣಕ್ಕೆ ಮುಂಬೈ ಪೊಲೀಸರು ಈಗಾಗಲೇ ಅನುಮತಿ ನೀಡಿದ್ದರು. ನಮಗೆಲ್ಲರಿಗೂ ಇದರ ಬಗ್ಗೆ ಚೆನ್ನಾಗಿ ತಿಳಿದಿತ್ತು. ಇಬ್ರಾಹಿಂ ರಹಮತುಲ್ಲಾ ರಸ್ತೆಯಲ್ಲಿರುವ ಪೊಲೀಸ್ ಠಾಣೆಯ ಸಮೀಪವಿರುವ ಕಟ್ಟಡದಲ್ಲಿ ಇದು ಸಂಭವಿಸಿದೆ. ಭಾನುವಾರದ ಚಿತ್ರೀಕರಣದ ನಂತರ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಳಾಗುತ್ತಿದೆ”ಎಂದು ಪೊಲೀಸ್ ಅಧಿಕಾರಿ ಸುನಿಲ್ ಪಡ್ನೆಕರ್ ಹೇಳಿದರು.

ಅಲ್ಲದೆ, ಮುಂಬೈ ನಗರದಲ್ಲಿ ಭಯೋತ್ಪಾದಕರ ಗುಂಪುಗಳು ಬಂಧನಕ್ಕೊಳಗಾಗುವುದು ಸುದ್ದಿಯಾಗುತ್ತಲೇ ಇರುತ್ತವೆ. ಅಂತಹ ಯಾವುದೇ ಘಟನೆಯ ಕುರಿತು ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ.

ಆದ್ದರಿಂದ ವೈರಲ್ ವೀಡಿಯೊ ದಕ್ಷಿಣ ಮುಂಬೈನ ಪೈಡೋನಿ ಪ್ರದೇಶದಲ್ಲಿ ನಡೆದ ವೆಬ್ ಸರಣಿಯ ಚಿತ್ರೀಕರಣದಿಂದ ಬಂದಿದೆ ಮತ್ತು ಮುಂಬೈ ಪೊಲೀಸರು ಭಯೋತ್ಪಾದಕರನ್ನು ಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights