ನಮ್ಮೆಲ್ಲರ ಶತ್ರು ಒಬ್ಬನೇ: ಹೋರಾಟನಿರತ ರೈತ ಹೇಳಿದ್ದು ಏನು ಗೊತ್ತಾ?

ನಮ್ಮೆಲ್ಲರ ಶತ್ರು ಒಬ್ಬನೇ ಎಂಬುದನ್ನು ಅರಿತು ಸಂಘಟನೆ ಕಟ್ಟುವುದು ಇಂದಿನ ಅಗತ್ಯ ಎಂದು ಟಿಕ್ರಿಗಡಿಯಲ್ಲಿ ರೈತ ಹೋರಾಟ ಮುನ್ನಡೆಸುತ್ತಿರುವ ಸುರೀಂದರ್‌ ಸಿಂಘ ಅಭಿಪ್ರಾಯಪಟ್ಟರು.

ಪಂಜಾಬಿನಲ್ಲಿ ಇದುವರೆಗೆ ನಡೆದ ಯಾವುದೇ ಯುದ್ದವು ಅನ್ಯಾಯ, ಹಿಂಸೆಗಳ ವಿರುದ್ಧ ನಡೆದಿದೆಯೇ ಹೊರತು, ಜಾತಿ ಮತಗಳ ವಿರುದ್ಧವಲ್ಲ ಎಂದು ಅವರು ಹೇಳಿದರು.

1980ರ ನಂತರ ಭಾರತದಲ್ಲಿ ಕೃಷಿ ಸಮಸ್ಯೆ ಹೆಚ್ಚಾಯಿತು. ಹಸಿರು ಕ್ರಾಂತಿಯ ಮೂಲಕ ಕಂಡ ಅಭಿವೃದ್ಧಿಯ ಕನಸು ಸಾಯಲಾರಂಭಿಸಿತ್ತು. ವಿವೇಕದ ಕೊರತೆಯೇ ಈ ಹಿನ್ನೆಡೆಗೆ ಕಾರಣ ಎಂಬುದನ್ನು ಅರಿತೆವು.

ಪಂಜಾಬಿನ ವಿವಿಧ ಭಾಗಗಳಲ್ಲಿ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ರೈತರು ಹೋರಾಟ ನಡೆಸಿದ್ದರು. ಅವರೆಲ್ಲರನ್ನೂ ಒಗ್ಗೂಡಿಸಬೇಕಿತ್ತು. ಗುಂಡ, ಪೊಲೀಸ್‌, ರಾಜಕಾರಣಿಯ ಒಕ್ಕೂಟದ ಒಟ್ಟಾಗಿ ನಾವು ಹೋರಾಡಬೇಕು ಎಂಬ ಘೋಷಣೆಯ ಮೂಲಕ ಭಿನ್ನ ವಿಚಾರಧಾರೆಯವರನ್ನು ಒಂದುಗೂಡಿಸಿದೆವು” ಎಂದು ರೈತ ಹೋರಾಟ ಸಂಘಟಿಸಿದ ಬಗೆಯನ್ನು ಸುರೀಂದರ್‌ ಸಿಂಘ್‌ ವಿವರಿಸಿದರು.

ಮೋದಿ ಸರ್ಕಾರ ಬಂದ ಮೇಲೆ ಪಂಜಾಬ್‌ ಮೇಲೆ ಮತ್ತೊಂದು ರೀತಿಯ ದಾಳಿ ನಡೆಯಿತು. ಕಾಶ್ಮೀರದ ಮೇಲೆ ನಡೆದಂತೆ, ಸತ್ಯದ ಮಾತನಾಡಿದ ಗೌರಿ ಲಂಕೇಶರಂತಹವರ ಮೇಲೆ ದಾಳಿ ನಡೆದಂತೆ ಪಂಜಾಬಿನಲ್ಲಿ ಹಲವು ದಾಳಿಗಳು ನಡೆದವು. ಈ ಫ್ಯಾಸಿಸ್ಟ್‌ ದಾಳಿಯನ್ನು ವಿರೋಧಿಸಿ ಚಂಡೀಗಢದಲ್ಲಿ 20000 ಜನಕ್ಕೂ ಹೆಚ್ಚು ಮಂದಿ ಸೇರಿ ಪ್ರತಿಭಟನೆ ನಡೆಸಿದರು.

ಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಒಕ್ಕೂಟವೊಂದು ರಚನೆಯಾಯಿತು” ಎಂದು ಸುರೀಂದರ್‌ ಸಿಂಘ್‌ ವಿವರಿಸಿದರು.


ಇದನ್ನೂ ಓದಿ: ರೈತ ಹೋರಾಟ: ಟಿಕ್ರಿ ಗಡಿಯಲ್ಲಿ ರೈತ ಮಹಿಳೆಯರ ಕೂಗು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights