ನಾವು ಬಿಜೆಪಿಯ ಬಿ-ಟೀಮ್ ಅಲ್ಲ, ಮಹಾತ್ಮ ಗಾಂಧಿಯವರ ಎ-ಟೀಮ್: ಕಮಲ್ ಹಾಸನ್

ನಟ ಕಮಲ್‌ ಹಾಸನ್‌ ಅವರ ಎಂಎನ್‌ಎಂ ಪಕ್ಷವು ಬಿಜೆಪಿಯ ಬಿ-ಟೀಂ ಎಂಬ ಆರೋಪಗಳು ತಮಿಳುನಾಡು ರಾಜಕೀಯ ವಲಯದಲ್ಲಿ  ಕೇಳಿಬರುತ್ತಿವೆ. ಈ ಆರೋಪವನ್ನು ಅಲ್ಲಗಡೆದಿರುವ ಕಮಲ್‌ ಹಾಸನ್‌ ನಾವು ಬಿಜೆಪಿಯ ಬಿ-ಟೀಮ್ ಅಲ್ಲ, ಆದರೆ ಮಹಾತ್ಮ ಗಾಂಧಿ ಅವರ ಎ-ಟೀಮ್‌ ಎಂದು ಅವರು ಹೇಳಿದ್ದಾರೆ.

ಎಐಎಸ್‌ಎಂಕೆ ಜಂಟಿ ಪ್ರಧಾನ ಕಾರ್ಯದರ್ಶಿ ಮತ್ತು ನಟಿ ರಾಧಿಕಾ ಶರತ್‌ಕುಮಾರ್ ಅವರೊಂದಿಗೆ ಮಧುರೈನಲ್ಲಿ ಎಂಎನ್‌ಎಂ ಮತ್ತು ಅದರ ಮೈತ್ರಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ರ್ಯಾಲಿಯಲ್ಲಿ ಕಮಲ್‌ ಹಾಸನ್‌ ಮಾತನಾಡಿದರು.

“ನೊಖಾಲಿ ಗಲಭೆಯ ಸಮಯದಲ್ಲಿ, ಬ್ರಿಟಿಷರು ಸಹ ಮಧ್ಯಪ್ರವೇಶಿಸುವ ಭಯ ಪಡುವಾಗ, ಅರ್ಧ ಉಡುಪಿನ ವ್ಯಕ್ತಿ ಗಾಂಧಿಯವರು ಅಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಿದರು. ಮೈತ್ರಿಕೂಟದ ಅಭ್ಯರ್ಥಿಗಳು ರಾಜಕೀಯ ಪ್ರವೇಶಿಸಿರುವುದು ಹಣ ಸಂಪಾದಿಸುವುದಕ್ಕಾಗಿ ಅಲ್ಲ, ಜನರಿಗೆ ಸೇವೆ ಸಲ್ಲಿಸುವುದಕ್ಕಾಗಿ” ಎಂದು ಹೇಳಿದ ಕಮಲ್, ತಮ್ಮ ಭರವಸೆಗಳನ್ನು ಬಾಂಡ್ ಪೇಪರ್‌ನಲ್ಲಿ ಬರೆದು ಸಹಿ ಮಾಡುವುದಾಗಿ ಹೇಳಿದರು.

“ಎಂಎನ್‌ಎಂ ಮತ್ತು ಮೈತ್ರಿಕೂಟಕ್ಕೆ ಮತಚಲಾಯಿಸಿದರೆ, ಪ್ರತಿಯೊಬ್ಬ ವ್ಯಕ್ತಿಯು ಆಯಾ ಕ್ಷೇತ್ರಗಳಲ್ಲಿನ ಖರ್ಚುಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ತಿಳಿದುಕೊಳ್ಳಬಹುದು” ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮತಕ್ಕಾಗಿ ಹಣದ ಆಮಿಷದ ಕುರಿತು ಮಾತನಾಡಿದ ಕಮಲ್, “ಇದು ಹಣಕ್ಕಾಗಿ ಒಟ್ಟುಗೂಡಿದ ಜನಸಮೂಹವಲ್ಲ (ಅವರ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಸಮೂಹವನ್ನು ಉಲ್ಲೇಖಿಸಿ). ಆದರೆ, ಮತ ನೀಡುವುದಕ್ಕಾಗಿ ಹಣವನ್ನು ಪಡೆದರೆ, ಅವರ ಬಡತನವು ಒಂದು ದಿನದಲ್ಲಿ ಮಾಯವಾಗುವುದಿಲ್ಲ ಎಂದು ನಾನು ಭರವಸೆ ನೀಡಬಲ್ಲೆ. ದ್ರಾವಿಡ ಪಕ್ಷಗಳೆರಡೂ ತಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ನಿರಾಕರಿಸಲಿಲ್ಲ. ಆದರೆ ಪರಸ್ಪರ ದೂಷಿಸಿಕೊಳ್ಳುತ್ತಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: CPI(M) ಹಿರಿಯ ಮುಖಂಡ ಮತ್ತು ಕೇರಳ ಕೈಗಾರಿಕಾ ಸಚಿವ ಜಯರಾಜನ್ ಚುನಾವಣಾ ರಾಜಕೀಯಕ್ಕೆ ಗುಡ್‌ ಬೈ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights