ಹರಿಯಾಣ ಸಿಎಂ ಮನೆ ಮುಂದೆ ರೈತರ ಪ್ರತಿಭಟನೆ : ಜಲ ಫಿರಂಗಿ ಬಳಸಿದ ಪೊಲೀಸರು.!

ಹರಿಯಾಣ ಸಿಎಂ ಮನೆ ಮುಂದೆ ಪ್ರತಿಭಟನಾ ನಿರತ ರೈತರ ಮೇಲೆ ಜಲ ಫಿರಂಗಿ ಬಳಸಿ ಪೊಲೀಸರು ದರ್ಪ ತೋರಿದ್ದಾರೆ.

ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ರೈತರು ಘೋಷಣೆಗಳನ್ನು ಕೂಗುತ್ತಾ ಇಂದು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಜನ ಫಿರಂಗಿ ಬಳಸಿದ್ದಾರೆ. ಶನಿವಾರ ಬೆಳಿಗ್ಗೆ ಹರಿಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರ ಕರ್ನಾಲ್ ನಿವಾಸದ ಹೊರಗೆ ಜಮಾಯಿಸಿದ ರೈತರು ರಾತ್ರಿಯಿಡೀ ಜಾಗರಣೆ ಮಾಡುವ ಉದ್ದೇಶವನ್ನು ಘೋಷಿಸಿದರು.

ಈ ಪ್ರದೇಶದಲ್ಲಿ ರೈತರು ಹಳದಿ ಪೊಲೀಸ್ ಬ್ಯಾರಿಕೇಡ್‌ಗಳ ರಾಶಿಯ ಮೇಲೆ ನಿಂತು ಕೋಪದಿಂದ ಘೋಷಣೆಗಳನ್ನು ಕೂಗುತ್ತಿರುವಾಗ ರೈತರನ್ನು ಚದುರಿಸಲು ಭದ್ರತಾ ಪಡೆಗಳು ಪ್ರಯತ್ನಿಸಿವೆ. ಜಲ ಫಿರಂಗಿಗಳನ್ನು ಬಳಸುತ್ತಿರುವ ವೇಳೆ ಕೆಲವರು ತಪ್ಪಿಸಿಕೊಳ್ಳಲು ತಮ್ಮ ವಾಹನಗಳ ಮೇಲೆ ಏರಲು ಪ್ರಯತ್ನಿಸುತ್ತಾರೆ.

ರಾಜ್ಯದ ಕೆಲವು ಭಾಗಗಳಲ್ಲಿ ಧಾನ್ಯ ಮಾರುಕಟ್ಟೆಗಳಲ್ಲಿ ಮತ್ತು ಹಲವಾರು ಜಿಲ್ಲೆಗಳಲ್ಲಿ ಆಡಳಿತಾರೂಢ ಬಿಜೆಪಿ-ಜನನಾಯಕ್ ಜನತಾ ಪಕ್ಷದ ಮೈತ್ರಿಯ ಶಾಸಕರ ನಿವಾಸಗಳ ಹೊರಗೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ನಿನ್ನೆ ರೈತ ನಾಯಕ ರಾಕೇಶ್ ಟಿಕೈತ್ ಪಂಜಾಬಿನ ಜಿಲ್ಲಾ ಪ್ರಧಾನ ಕಚೇರಿಯನ್ನೂ ಒಳಗೊಂಡಂತೆ ಪ್ರತಿಭಟನೆಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅಕ್ಟೋಬರ್ 11 ರವರೆಗೆ ಪಂಜಾಬ್ ಮತ್ತು ಹರಿಯಾಣದಿಂದ ಖಾರಿಫ್ ಅಥವಾ ಮುಂಗಾರು ಖರೀದಿಯನ್ನು ಕೇಂದ್ರ ಮುಂದೂಡಿದ್ದು, ಸಮಯಕ್ಕೆ ಸರಿಯಾಗಿ ಭತ್ತ ಸಂಗ್ರಹಣೆಯನ್ನು ಆರಂಭಿಸಲು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

ನಿನ್ನೆ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಭಾಗವಹಿಸಿದ ಕಾರ್ಯಕ್ರಮದ ವಿರುದ್ಧ ಪ್ರತಿಭಟನಾಕಾರರು ಮೆರವಣಿಗೆ ನಡೆಸುತ್ತಿದ್ದಂತೆ ಮತ್ತೆ ಘರ್ಷಣೆ ಉಂಟಾಯಿತು. ರಾಜ್ಯದ ರೈತರು ಮತ್ತು ಪೊಲೀಸರು ವಾಗ್ವಾದಕ್ಕಿಳಿದರು. ಅವರನ್ನು ತಡೆಯಲು ಜಲ ಫಿರಂಗಿಗಳನ್ನು ಬಳಸಲಾಯಿತು.

ಚೌಟಾಲಾ ಪ್ರತಿಭಟನಾ ಸ್ಥಳಕ್ಕೆ ತಲುಪಿದಾಗ ಕಪ್ಪು ಬಾವುಟಗಳನ್ನು ತೋರಿಸಲಾಯಿತು. ಇದು ಸತತ ಎರಡನೇ ದಿನ ಹರಿಯಾಣ ರೈತ-ಪೊಲೀಸ್ ಘರ್ಷಣೆಗೆ ಸಾಕ್ಷಿಯಾಯಿತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights