ವೋಟರ್‌ ಐಡಿಯೇ ನಮ್ಮ ಅಸ್ತ್ರ; ತಮಿಳುನಾಡು ಜನರಿಗೆ ಕಮಲ್‌ ಹಾಸನ್‌ ಕರೆ

ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಆರು ತಿಂಗಳಷ್ಟೇ ಬಾರಿ ಇದೆ. ಹೀಗಾಗಿ ರಾಜ್ಯದಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ತಯಾರಿಗೆ ಸಿದ್ದವಾಗಿವೆ. ಅಂತೆಯೇ, ಬಹುಭಾಷಾ ನಟ, ಮಕ್ಕಳ್‌ ನೀಧಿ ಮಾಯಮ್‌ (ಎಂಎನ್ಎಂ) ಪಕ್ಷದ ಸಂಸ್ಥಾಪಕ ಕಮಲ್‌ ಹಾಸನ್‌ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮತದಾನದ ಬಗ್ಗೆ ಮಾತನಾಡಿರುವ ಕಮಲ್‌ ಹಾಸನ್‌, ವೋಟರ್ ಐಡಿ (ಮತದಾನ ಗುರುತಿನ ಚೀಟಿ) ನಮಗೆ ಅಸ್ತ್ರ ಇದ್ದಂತೆ, ಮತದಾನ ಚಲಾಯಿಸಲು ಅರ್ಹರು ಚುನಾವಣೆಯಲ್ಲಿ ಮತ ಚಲಾಯಿಸಿ, ಐಡಿ ಇಲ್ಲದವರು ವೋಟರ್‌ ಐಡಿಗಾಗಿ ನೊಂದಾಯಿಸಿ ಎಂದು ಹೇಳಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್‌ ಮಾಡಿರುವ ಕಮಲ್‌ ಹಾಸನ್‌, ಮತದಾರರ ಗುರುತಿನ ಚೀಟಿಗಳಿಗೆ ಇನ್ನೂ ದಾಖಲಾಗದೇ ಇರುವ ಎಲ್ಲರೂ ತಪ್ಪದೆ ನೊಂದಾಯಿಸಿಕೊಳ್ಳಿ. ಈ ತಿಂಗಳ ಕೊನೆಯಲ್ಲಿ ಮತ್ತು ಡಿಸೆಂಬರ್‌ನಲ್ಲಿ ಆರಂಭವಾಗುವ ಮತದಾರ ಒಂದಣಿ ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಿ ಎಂದು ಹೇಳಿದ್ದಾರೆ.

2021ರ ಚುನಾವಣೆಗೆ, “ನಾನು ಬದಲಾಗುತ್ತೇನೆ – ಮತ ಚಲಾಯಿಸುತ್ತೇನೆ” ಎಂದು ಘೋಷ ವಾಕ್ಯವನ್ನು ಹೇಳಿ ಎಂದು ಯುವಜನರಿಗೆ ಕಮಲ್ ಹಾಸನ್ ಕರೆ ನೀಡಿದ್ದಾರೆ.  

“ಮತದಾರನಾಗುವುದು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಗೌರವವಾಗಿದೆ. ಮತದಾರರ ಗುರುತಿನ ಚೀಟಿ ಒಂದು ದೊಡ್ಡ ಅಸ್ತ್ರ … ತನ್ನ ಜವಾಬ್ದಾರಿಯನ್ನು ನಿರ್ವಹಿಸದ ಸಮಾಜವು ತನ್ನ ಹಕ್ಕುಗಳನ್ನು ಸ್ವಯಂಚಾಲಿತವಾಗಿ ಕಳೆದುಕೊಳ್ಳುತ್ತದೆ. ಬದಲಾವಣೆಯನ್ನು ಬಯಸುವವರು, ವ್ಯವಸ್ಥೆಯು ಸರಿಯಿಲ್ಲ ಎಂದು ಹೇಳುವವರು, ಎಲ್ಲರೂ ಕಳ್ಳರೇ ಎಂದು ಹೇಳುವವರು… ಮತದಾರರ ಗುರುತನ್ನು ಹೊಂದಿಲ್ಲ. ಗುರುತಿನ ಚೀಟಿ ಮಾಡಿಸಿ, ಹಕ್ಕು ಚಲಾಯಿಸಿ” ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಫೆಬ್ರವರಿ 2018 ರಲ್ಲಿ ಸ್ಥಾಪನೆಯಾದ ಕಮಲ್ ಹಾಸನ್ ಅವರ ಎಂಎನ್‌ಎಂಗೆ ಇದು ಮೊದಲ ರಾಜ್ಯ ಚುನಾವಣೆಯಾಗಿದೆ.

ತಮಿಳುನಾಡಿನಲ್ಲಿ ತಮ್ಮ ಪಕ್ಷವು ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ. ರಾಜ್ಯದ ರಾಜಕೀಯದಲ್ಲಿ ಎಐಎಡಿಎಂಕೆ (ಈಗ ಅಧಿಕಾರದಲ್ಲಿದೆ) ಮತ್ತು ಡಿಎಂಕೆ (ಪ್ರಸ್ತುತ ವಿರೋಧ) ಪಕ್ಷಗಳು ಪ್ರಾಬಲ್ಯ ಹೊಂದಿವೆ.

ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಚೊಚ್ಚಲ ಪಕ್ಷವಾಗಿ ಎಂಎನ್‌ಎಂ ಯಾವುದೇ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಸುಮಾರು 4% ಮತಗಳನ್ನು ಗಳಿಸಿತು.  ಮುಂಬರುವ ಚುನಾವಣೆಯಲ್ಲಿ ತಮ್ಮ ಪ್ರಬಲ್ಯವನ್ನು ಹೆಚ್ಚಿಸಲು ಕಮಲ್ ಹಾಸನ್ ಮುಂದಾಗಿದ್ದಾರೆ. ಈ ತಿಂಗಳ ಕೊನೆಯಲ್ಲಿ ‘ಜೀವನೋಪಾಯ, ಉದ್ಯೋ ಮತ್ತು ಕುಡಿಯುವ ನೀರಿಗೆ’ ಸಂಬಂಧಿಸಿದಂತೆ ತಮ್ಮ ಅಭಿಯಾನವನ್ನು ಪ್ರಾರಂಭಿಸುವ ಸಾಧ್ಯತೆಯಿದೆ.


ಇದನ್ನೂ ಓದಿ: ತಮಿಳುನಾಡಿನಲ್ಲಿ BJP ಬೆಳೆಯಲು ನೆರವಾಗುತಿದ್ಯಾ AIADMK: ಚುನಾವಣಾ ಮೈತ್ರಿ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights