ನನಗೆ ಮತ ನೀಡಿ; 2022ರ ಫುಟ್‌ಬಾಲ್‌ ವಿಶ್ವಕಪ್‌ಗೆ ಟಿಕೆಟ್‌ ಪಡೆಯಿರಿ: ಕೇರಳ ಅಭ್ಯರ್ಥಿ ಆಮಿಷ

ಚುನಾವಣೆಯಲ್ಲಿ ತಮಗೆ ಮತ ಚಲಾಯಿಸಿದರೆ, 2022ರ ಕತಾರ್‌ ಪಿಫಾ ವಿಶ್ವಕಪ್ ವೀಕ್ಷಿಸಲು ಟಿಕೆಟ್‌ ಕೊಡಿಸುತ್ತೇನೆ ಎಂದು ಕೇರಳದ ಕುಂಡೊಟ್ಟಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕಟ್ಟಪ್ಪುರುತಿ ಸುಲೈಮಾನ್‌ ಹಾಜಿ ಆಮಿಷ ವೊಡ್ಡಿದ್ದಾರೆ.

ಕೇರಳದಲ್ಲಿ ಫುಟ್ಬಾಲ್‌ ಜನಪ್ರಿಯ ಕ್ರೀಡೆಯಾಗಿದೆ. ಹಾಗಾಗಿ ಯುವಜನರನ್ನು ಸೆಳೆಯಲು ಮತ್ತು ಅವರು ತಮಗೆ ಮತ ಚಲಾಯಿಸುವಂತೆ ಪ್ರೇರೇಪಿಸಲು ತಮ್ಮ ಕ್ಷೇತ್ರದ ಮತದಾರರಿಗೆ ಆಮಿಷವೊಡಿದ್ದಾರೆ.

ಒಂದು ವೇಳೆ ನಾನು ಗೆದ್ದರೇ, ತಮ್ಮ ಕ್ಷೇತ್ರದಲ್ಲಿ ‘ಶಾಸಕ ಟ್ರೋಫಿ’ ಪಂದ್ಯಾವಳಿಯನ್ನು ನಡೆಸುತ್ತೇನೆ. ಈ ಪಂದ್ಯಾವಳಿಯಲ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ ಆರು ಪಂಚಾಯಿತಿಗಳು ಮತ್ತು ಒಂದು ಪುರಸಭೆಯಲ್ಲಿನ ಫುಟ್ಬಾಲ್ ಕ್ಲಬ್‌ಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ. ವಿಜೇತ 11 ಸದಸ್ಯರ ತಂಡವು 2022 ರ ಫಿಫಾ ವಿಶ್ವಕಪ್‌ನಲ್ಲಿ ಕತಾರ್‌ಗೆ ತೆರಳಲು ಮತ್ತು ಪಂದ್ಯವನ್ನು ವೀಕ್ಷಿಸಲು ಅವಕಾಶವನ್ನು ಪಡೆಯಲಿದೆ’ ಎಂದು ಅವರು ಹೇಳಿದ್ದಾರೆ.

ಪ್ರವಾಸದ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಸುಲೈಮಾನ್‌ ಹಾಜಿ ಹೇಳಿದ್ದಾರೆ. ಅವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ, ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಕ್ಷೇತ್ರದಲ್ಲಿ ಮಿನಿ ಸಿವಿಲ್ ಸ್ಟೇಷನ್ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.

ತರಕಾರಿ ಮಾರುಕಟ್ಟೆ, ಹೈಟೆಕ್ ಆಸ್ಪತ್ರೆಗಳು, ಕ್ಯಾನ್ಸರ್ ಮತ್ತು ಡಯಾಲಿಸಿಸ್ ಕೇಂದ್ರಗಳು, ಕ್ರೀಡಾಂಗಣಗಳು ಮತ್ತು ಮಕ್ಕಳ ಉದ್ಯಾನವನಗಳನ್ನು ನಿರ್ಮಿಸುವುದಾಗಿ ಅವರು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ‘ನಾನು ಕೊಂಡೊಟ್ಟಿಯ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ. ರಸ್ತೆ ಸ್ಥಿತಿ ಮತ್ತು ಕುಡಿಯುವ ನೀರಿನ ಲಭ್ಯತೆಯಂತಹ
ಸಮಸ್ಯೆಗಳನ್ನು ಸಹ ಪರಿಹರಿಸಲಾಗುವುದು ‘ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ‘ಇವಿಎಂ’ ಪತ್ತೆ : ತನಿಖೆಗೆ ಪ್ರಿಯಾಂಕಾ ಗಾಂಧಿ ಆಗ್ರಹ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights