ಮಮ್ಮಿ-ಡ್ಯಾಡಿ ಆಗಲಿರುವ ಅನುಷ್ಕಾ ವಿರಾಟ್ : 2021ಕ್ಕೆ ಇಬ್ಬರಲ್ಲ ಮೂವರು..
ಅಭಿಮಾನಿಗಳಿಗಾಗಿ ಇಂದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದೊಡ್ಡ ಸುದ್ದಿಯನ್ನು ಕೊಟ್ಟಿದ್ದಾರೆ. ಜನವರಿ 2021 ಕ್ಕೆ ತಾವು ಇಬ್ಬರಲ್ಲ ಮೂವರು ಎಂದು ಇನ್ಸ್ಟಾಗ್ರಾಮ್ ನಲ್ಲಿ ಅನುಷ್ಕಾ ಬರೆದುಕೊಂಡಿದ್ದಾರೆ.
ಅನುಷ್ಕಾ ಮತ್ತು ವಿರಾಟ್ ಅವರು ಡಿಸೆಂಬರ್ 11, 2017 ರಂದು ವಿವಾಹವಾದರು. ಸಾಕಷ್ಟು ಅಭಿಮಾನಿ ಬಳಗ ಹೊಂದಿದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಿಹಿ ಸುದ್ದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿದ್ದಾರೆ. ಅನುಷ್ಕಾ ಈಗಾಗಲೇ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಜನವರಿ 2021 ರಲ್ಲಿ ಹೆರಿಗೆಯಾಗುವ ನಿರೀಕ್ಷೆಯಲ್ಲಿದ್ದಾರಂತೆ. ಈ ಸಂದೇಶ ಹಂಚಿಕೊಳ್ಳುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಸೋಷಿಯಲ್ ಮೀಡಿಯಾದಲ್ಲಿ ಹರಿದು ಬಂದಿದೆ.
ಇಬ್ಬರ ಛಾಯಾಚಿತ್ರವನ್ನು ಹಂಚಿಕೊಂಡ ಅನುಷ್ಕಾ, ” ಜನವರಿ 2021 ಕ್ಕೆ ನಾವು ಇಬ್ಬರಲ್ಲ ಮೂವರು” ಎಂದು ಬರೆದುಕೊಂಡಿದ್ದಾರೆ.
https://www.instagram.com/anushkasharma/?utm_source=ig_embed
ವಿರಾಟ್ ಕೊಹ್ಲಿ ಕೂಡ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಅದೇ ಶೀರ್ಷಿಕೆಯೊಂದಿಗೆ ಅದೇ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ.
ಲಾಕ್ಡೌನ್ನಲ್ಲಿ ಅನುಷ್ಕಾ ಮತ್ತು ವಿರಾಟ್ ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ. ಅವರ ಅದೆಷ್ಟೋ ಫೋಟೋಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
https://www.instagram.com/anushkasharma/?utm_source=ig_embed
https://www.instagram.com/anushkasharma/?utm_source=ig_embed
ಇಲ್ಲಿ ಅನುಷ್ಕಾ ವಿರಾಟ್ಗೆ ಕ್ಷೌರ ನೀಡುತ್ತಿರುವುದು ಕಂಡುಬರುತ್ತದೆ.
https://www.instagram.com/anushkasharma/?utm_source=ig_embed
ಕರೀನಾ ಮತ್ತು ಸೈಫ್ ತಮ್ಮ ಎರಡನೇ ಗರ್ಭಧಾರಣೆಯನ್ನು ಕೆಲವು ವಾರಗಳ ಹಿಂದೆ ಘೋಷಿಸಿದರು. ಸದ್ಯ ವಿರಾಟ್ ಮತ್ತು ಅನುಷ್ಕಾ ಅವರ ಮೊದಲ ಮಗು ನಿರೀಕ್ಷೆಯಲ್ಲಿದ್ದಾರೆ.