ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ: ರಾಜ್ಯದಲ್ಲಿ 413 ಪ್ರಕರಣಗಳು ದಾಖಲು; ಕೋಲಾರದಲ್ಲೇ ಅಧಿಕ!

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಉಲ್ಲಂಫಿಸಿದವರ ವಿರುದ್ಧ 413 ಪ್ರಕರಣಗಳು ದಾಖಲಾಗಿವೆ. 30 ಜಿಲ್ಲೆಗಳ ಪೈಕಿ ಕೋಲಾರ ಜಿಲ್ಲೆಯ್ಲಿಯೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪ್ರಥಮ ಸ್ನಾನದಲ್ಲಿದೆ. ಕೊಲಾರದಲ್ಲಿ 65 ಪ್ರಕರಣಗಳು ದಾಖಲಾಗಿವೆ ಎಂದು ಪ್ರಭಯ ಚವ್ಹಾಣ್‌ ತಿಳಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಡಾ ವೈ ಎ ನಾರಾಯಣಸ್ವಾಮಿ ಅವರು ವಿಧಾನಪರಿಷತ್‌ನಲ್ಲಿ 2021ರ ಸೆ.21ರಂದು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಪಶುಸ೦ಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರು ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಅ೦ಕಿ ಅಂಶಗಳನ್ನು ಒದಗಿಸಿದ್ದಾರೆ.

“ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಸಮರ್ಪಕವಾಗಿ ಜಾರಿಗೊ೦ಡಿದೆ. ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊ೦ಡು ಪೊಲೀಸ್‌ ಇಲಾಖೆ ಮತ್ತು ಪಶುವೈದ್ಯ ಇಲಾಖೆಯವರು ವ್ಯಾಪಕವಾದ ಭ್ರಷ್ಟಾಚಾರ ನಡೆಸಿರುವುದು ಸರ್ಕಾರದ ಗಮನಕ್ಕೆ ಬ೦ದಿಲ್ಲ ಎ೦ದು ಮಾಹಿತಿ ಒದಗಿಸಿದ್ದಾರೆ.
ವಿಜಯಪುರ, ರಾಮನಗರ, ತುಮಕೂರು, ದಾವಣಗೆರೆ, ಧಾರವಾಡ, ರಾಯಚೂರು, ಯಾದಗಿರಿ, ಬೀದರ್‌ನಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ದಾಖಲಾದ ಪ್ರಕರಣಗಳ ವಿವರ (ಜಿಲ್ಲಾವಾರು):

ಉತ್ತರ ಕನ್ನಡ – 54
ದಕ್ಷಿಣ ಕನ್ನಡ- 40
ಚಿಕ್ಕಮಗಳೂರು- 32
ಬೆಂಗಳೂರು ನಗರ -12
ಹಾಸನ – 43
ಚಿಕ್ಕಬಳ್ಳಾಪುರ -5
ಬೆ೦ಗಳೂರು ಗ್ರಾಮಾ೦ತರ -8
ಕೋಲಾರ – 65
ಚಿತ್ರದುರ್ಗ -12
ಶಿವಮೊಗ್ಗ -6
ಮೈಸೂರು -1
ಮಂಡ್ಯ -14
ಚಾಮರಾಜನಗರ -8
ಉಡುಪಿ -17
ಕೊಡಗು -18
ಜೆಳಗಾವಿ -6
ಹಾವೇರಿ -6
ಗದಗ-1
ಬಾಗಲಕೋಟೆ -1
ಕಲ್ಬುರ್ಗಿ -16
ಬಳ್ಳಾರಿ -3
ಕೊಪ್ಪಳ -4

ಗೋಹತ್ಯೆ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ತೀವ್ರ ಪ್ರತಿರೋಧದ ನಡುವೆಯೂ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕೃತವಾಗಿತ್ತು. ವಿಧಾನಪರಿಷತ್‌ನಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗಿ ಗದ್ದಲಕ್ಕೂ ಕಾರಣವಾಗಿತ್ತು.

ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಜೈಲು ಶಿಕ್ಷೆ, ದಂಡದ ಪ್ರಮಾಣವನ್ನು ಗಣನೀಯವಾಗಿ ಏರಿಕೆ ಮಾಡಿ ಕಠಿಣ ಅಂಶಗಳನ್ನು ಸೇರಿಸಲಾಗಿದೆ. ನೂತನ ತಿದ್ದುಪಡಿ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಸಬ್‌ ಇನ್ಸ್‌ ಪೆಕ್ಟರ್‌ ಮೇಲಿನ ಅಧಿಕಾರಿ ಗೋಹತ್ಯೆ ನಡೆಯುವ ಅಥವಾ ಅ೦ತಹ ಉದ್ದೇಶಕ್ಕೆ ಜಾನುವಾರುಗಳ ಬಳಕೆ ಮಾಡುತ್ತಿರುವುದು ಗಮನಕ್ಕೆ ಬ೦ದರೆ, ಅ೦ತಹ ಪ್ರದೇಶವನ್ನು ಸೀಜ್‌ ಮಾಡಿ, ಜಾನುವಾರುಗಳನ್ನು ವಶಪಡಿಸಿಕೊಳ್ಳಲು ಅಧಿಕಾರವಿದೆ.

ಹಸು, ಕರು, ದನ, ಎಮ್ಮೆಗಳ ಹತ್ಯೆಗೆ ಸ೦ಪೂರ್ಣ ನಿಷೇಧ ಹೇರಲಾಗಿದೆ. 13 ವರ್ಷದ ಒಳಗಿನ ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಮೊದಲ ಸಲ ಗೋಹತ್ಯೆ ಮಾಡಿದರೆ 3 ರಿ೦ದ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 50 ಸಾವಿರದಿ೦ದ 5 ಲಕ್ಷ ರೂ.ವರೆಗೆ ದ೦ಡ ವಿಧಿಸಲು ಅವಕಾಶವಿದೆ.

ಗೋಹತ್ಯೆ ಪುನರಾವರ್ತನೆಯಾದರೆ 1 ಲಕ್ಷದಿ೦ದ 10 ಲಕ್ಷ ರೂ. ದಂಡದ ಜೊತೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇನ್ನು ಗೋಹತ್ಯೆ ಮಾಡುವವರಿಗೆ ನಿರ್ಧಿಷ್ಟ ಅವಧಿವರೆಗೆ ಜಾಮೀನು ನೀಡುವಂತಿಲ್ಲ. ಹೊಸ ಬಿಲ್‌ನಲ್ಲಿ ಜಾನುವಾರುಗಳ ವಧೆ ಮಾಡುವುದು ಅಥವಾ ವಧೆ ಮಾಡಲು ಸಹಕರಿಸುವುದು ಅಪರಾಧವಾಗಿದೆ. ಹತ್ಯೆ ಮಾಡುವ ಉದ್ದೇಶದಿ೦ದ ಜಾನುವಾರುಗಳ ಸಾಗಾಟ ಮತ್ತು ಸಾಗಾಟಕ್ಕೆ ಸಹಕಾರ ನೀಡುವುದು ಅಪರಾಧ ಎ೦ದು ಮಸೂದೆಯಲ್ಲಿ ವಿವರಿಸಲಾಗಿದೆ.

ಕೃಷಿ ಹಾಗೂ ಪಶು ಸ೦ಗೋಪನೆ ಉದ್ದೇಶದಿ೦ದ ಜಾನುವಾರುಗಳ ಸಾಗಾಟಕ್ಕೆ ಮಾತ್ರ ಅನುಮತಿ ಇದೆಯೇ ವಿನಃ ಜಾನುವಾರುಗಳ ಹತ್ಯೆ ಉದ್ದೇಶದಿ೦ದ ರಾಜ್ಯ ಮತ್ತು ಅ೦ತರ್‌ ರಾಜ್ಯದಲ್ಲಿ ಸಾಗಾಟ ಮಾಡುವಂತಿಲ್ಲ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ವಿಧೇಯಕದಲ್ಲಿ ಸೇರಿಸಲಾಗಿದೆ.

ಕೃಷಿ ಮತ್ತು ಪಶು ಸ೦ಗೋಪನೆ ಉದ್ದೇಶದಿ೦ದ ಅ೦ತರ್‌ ರಾಜ್ಯ ಸಾಗಾಟ ಮಾಡಲು ಸ೦ಬ೦ಧಿಸಿದ ಸಕ್ಷಮ ಪ್ರಾಧಿಕಾರದಿ೦ದ ಅನುಮತಿ ಪಡೆಯಬೇಕು. ಕೃಷಿ ಚಟುವಟಿಕೆಗೆ ಗೋವು ಸಾಗಾಣಿಕೆಗೆ ಅನುಮತಿ ಮತ್ತು ನಿರ್ಧಿಷ್ಟ ಶುಲ್ಕ ನಿಗದಿ ಮಾಡಲಾಗುವುದು.

ಇದನ್ನೂ ಓದಿ: ನಾನೇ ಪೂರ್ಣಾವಧಿ ಮುಖ್ಯಸ್ಥೆ: ಜಿ-23 ನಾಯಕರಿಗೆ ಸೋನಿಯಾ ಗಾಂಧಿ ಖಡಕ್‌ ಉತ್ತರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights