ಒಡಿಶಾ: ತನಿಖೆಗೆ ತೆರಳಿದ್ದ ಸಿಬಿಐ ಅಧಿಕಾರಗಳ ಮೇಲೆ ಗ್ರಾಮಸ್ಥರಿಂದ ಹಲ್ಲೆ!

ಮಕ್ಕಳ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬರ ನಿವಾಸದ ಮೇಲೆ ದಾಳಿಗೆ ತೆಳಳಿದ್ದ ಸಿಬಿಐ ಅಧಿಕಾರಿಗಳ ತಂಡದ ಮೇಲೆ ಗ್ರಾಮದ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಒಡಿಶಾದ ಡೆಂಕನಲ್‌ನಲ್ಲಿ ನಡೆದಿದೆ.

ಮಕ್ಕಳ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ದೇಶದ 14 ರಾಜ್ಯಗಳ 77 ಸ್ಥಳದಲ್ಲಿ ದಾಳಿ ನಡೆಸಿದೆ. ಈ ವೇಳೆ, ಎಂಟು ಅಧಿಕಾರಿಗಳನ್ನೊಳಗೊಂಡ ತಂಡವು ಕಾಲೋನಿ ಸಾಹಿ ಪ್ರದೇಶದ ಸುರೇಂದ್ರ ನಾಯ್ಕ್ ಎಂಬುವವರ ಮನೆಯ ಮೇಲೆ ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಅನಿರೀಕ್ಷಿತ ದಾಳಿ ನಡೆಸಿತ್ತು.

ಅವರ ವಿಚಾರಣೆ ವೇಳೆ ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ, ಒಂದು ಗಂಟೆ ಗದ್ದಲದ ವಾತಾವರಣ ನಿರ್ಮಾಣವಾಗಿದೆ.

ಸಿಬಿಐ ತಂಡದ ಮೇಲೆ ಸ್ಥಳೀಯರು ಹಲ್ಲೆ ನಡೆಸುವ ವೇಳೆಗೆ ಡೆಂಕನಲ್ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿದ್ದಾರೆ.

ಆದರೆ, ದಾಳಿಯ ವರದಿಯನ್ನು ಡೆಂಕನಲ್ ಎಸ್‌ಪಿ ಕೆ.ಶಿವ ಸುಬ್ರಮಣಿ ತಳ್ಳಿಹಾಕಿದ್ದು, ಸ್ಥಳೀಯರು ಸಿಬಿಐ ತಂಡದ ಸುತ್ತಲೂ ಒಟ್ಟುಗೂಡುತ್ತಿದ್ದರು. ದಾಳಿ ನಡೆಸುವ ಮುನ್ನ ಸಿಬಿಐ ನಮಗೆ ಮಾಹಿತಿ ನೀಡಿಲ್ಲ. ಇದೀಗ ಸಿಬಿಐ ತಂಡದ ಸದಸ್ಯರು ಹಾಗೂ ಆರೋಪಿಗಳನ್ನು ಠಾಣೆಗೆ ಕರೆತರಲಾಗಿದೆ. ಆರೋಪದ ತನಿಖೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಶಂಕಿತ ವ್ಯಕ್ತಿ ಸುರೇಂದ್ರ ನಾಯ್ಕ್‌ ಅವರು ವಾಟ್ಸಾಪ್ ಗುಂಪುಗಳಲ್ಲಿ ಇದ್ದರು. ಅವರು ಆ ಗುಂಪುಗಳ ಮೂಲಕ ಸ್ವೀಕರಿಸಿದ ವೀಡಿಯೊಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವ ಮ್ತು ಗುಂಪಿನಲ್ಲಿ ಪ್ರಸಾರ ಮಾಡುವ ಕೆಲಸವನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ.

“ನಿರ್ದಿಷ್ಟ ವೆಬ್‌ಸೈಟ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ನಾನು 21 ಡಾಲರ್‌ ಹಣವನ್ನು ಪಡೆದಿದ್ದೇನೆ. ಸಿಬಿಐ ತಂಡವು ನನ್ನ ಮೊಬೈಲ್ ಅನ್ನು ವಶಪಡಿಸಿಕೊಂಡಿದೆ. ಮಕ್ಕಳ ಅಶ್ಲೀಲ ವಿಡಿಯೋ ಪ್ರಕರಣಗಳಲ್ಲಿರುವ ಇತರ ವ್ಯಕ್ತಿಗಳು ನನಗೆ ತಿಳಿದಿದೆಯೇ ಎಂದು ತಿಳಿಯಲು ಅವರು ಬಯಸಿದ್ದರು” ಎಂದು ನಾಯ್ಕ್‌ ಹೇಳಿದ್ದಾರೆ.

ಇದನ್ನೂ ಓದಿ: ಕೇರಳ: ಮೊಬೈಲ್‌ ಗೇಮ್‌ನಿಂದ ಹಣ ಕಳೆದುಕೊಂಡ ಬಾಲಕ ಆತ್ಮಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights