ವಿಕಾಸ್‌ ದುಬೆ ಎನ್‌ಕೌಂಟರ್‌ ಪ್ರಕರಣ; ಪೊಲೀಸರಿಗೆ ಕ್ಲೀನ್‌ಚಿಟ್‌ ಕೊಟ್ಟ ತನಿಖಾ ಆಯೋಗ!

2020ರಲ್ಲಿ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆಯನ್ನು ಎನ್‌ಕೌಂಟರ್‌ ಮಾಡಿ ಪೊಲೀಸರು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಆಯೋಗವು ಪೊಲೀಸರಿಗೆ ಕ್ಲೀನ್‌ ಚಿಟ್‌ ನೀಡಿದೆ.

ಎಂಟು ಪೊಲೀಸರನ್ನು ಹತ್ಯೆ ಗೈದಿದ್ದ ಹಾಗೂ 60 ಕ್ರಿಮಿನಲ್‌ ಪ್ರಕರಣಗಳ ಆರೋಪಿಯಾಗಿದ್ದ ವಿಕಾಸ್‌ ದುಬೆ 2020ರ ಜುಲೈನಲ್ಲಿ ಮಧ್ಯಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ. ಆತನನ್ನು ಪತ್ತೆ ಹಚ್ಚಿದ ಪೊಲೀಸರು, ಮಧ್ಯಪ್ರದೇಶದಿಂದ ಉತ್ತರ ಪ್ರದೇಶಕ್ಕೆ ಕರೆತರುತ್ತಿದ್ದರು. ಈ ವೇಳೆ ಆತನನ್ನು ಕರೆತರುತ್ತಿದ್ದ ವಾಹನ ಪಲ್ಟಿ ಹೊಡೆದು, ಆತ ಪೊಲೀಸರ ಬಂದೂಕನ್ನು ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ. ಆಗ ಆತನ ಮೇಲೆ ಗುಂಡು ಹಾರಿಸಿ ಎನ್‌ಕೌಂಟರ್‌ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದರು.

ಆದರೆ, ಆತನ ಹತ್ಯೆಯ ಹಿಂದೆ ರಾಜಕೀಯ ಸಂಚು ಇದೆ. ಅಪರಾಧಿಯ ಅಂತ್ಯವಾಗಿದೆ. ಹಾಗಾದರೆ ಅಪರಾಧಿಗೆ ಬೆಂಬಲ ನೀಡಿದವರು? ಎಂದು ಪ್ರಶ್ನಾರ್ಥಕವಾಗಿ ದುಬೆಗೆ ನರೆವಾಗಿದ್ದವರು ಯಾರು, ಆತನಿಗೆ ರಾಜಕೀಯವಾಗಿ ಬೆಂಬಸಿದ್ದರು ಯಾರು? ಅವರ ಕತೆ ಏನು? ಈ ಎನ್‌ಕೌಂಟರ್‌ ಪ್ರಕರಣವನ್ನು ತನಿಖೆ ನಡೆಸಲಬೇಕು ಎಂದು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದರು.

ಮನವಿಯ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸುವಂತೆ ಜಸ್ಟಿಸ್ ಬಿಎಸ್ ಚೌಹಾಣ್ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ವಿಚಾರಣಾ ಸಮಿತಿಯನ್ನು ಸುಪ್ರೀಂಕೋರ್ಟ್‌ ನೇಮಿಸಿತ್ತು.

ಇದೀಗ ಸಮಿತಿಯು ಪ್ರಕರಣದ ವಿಚಾರಣಾ ವರದಿಯನ್ನು ಉತ್ತರ ಪ್ರದೇಶ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು, ಪೊಲೀಸರ ಎನ್‍ಕೌಂಟರ್ ವಿರುದ್ದವಾಗಿ ಯಾಗುವೇ ಸಾಕ್ಷ್ಯಗಳು ಅಥವಾ ವಸ್ತು ಪುರಾವೆಗಳಿಲ್ಲ. ಆದರೆ, ಎನ್‌ಕೌಂಟರ್‌ಅನ್ನು ಬೆಂಬಲಿಸುವ ಸಾಕಷ್ಟು ಸಾಕ್ಷ್ಯಾ-ಪುರಾವೆಗಳಿಗೆ ಎಂದು ಸಮಿತಿಯು ತನ್ನ ವರದಿಯ್ಲಿ ಹೇಳಿದೆ.

ಇದನ್ನೂ ಓದಿವಿಕಾಸ್‌ ದುಬೆ ಎನ್‌ಕೌಂಟರ್‌: ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights