ವಿಜಯ್ ದೇವೇರಕೊಂಡ ಹುಟ್ಟುಹಬ್ಬಕ್ಕೆ ರಿಲೀಸ್ ಆಗಬೇಕಿದ್ದ ‘ಲೈಗರ್’ ಸಿನಿಮಾ ಟೀಸರ್ ಮುಂದೂಡಿಕೆ!

ಇಂದು ನಟ ವಿಜಯ್ ದೇವೇರಕೊಂಡ ಅವರಿಗೆ 32 ನೇ ಹುಟ್ಟುಹಬ್ಬ. ಅಭಿಮಾನಿಗಳ ನಿರೀಕ್ಷೆಯಂತೆ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ ಟೀಸರ್ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಟೀಸರ್ ಬಿಡುಗಡೆ ಮಾಡುವುದನ್ನು ಮುಂದೂಡಲಾಗಿದೆ.

ವಿಜಯ್ ದೇವೇರಕೊಂಡ ಅವರ ಜನ್ಮದಿನದಂದು ಲೈಗರ್ ಚಿತ್ರದ ಟೀಸರ್ ಅನ್ನು ಉಡುಗೊರೆಯಾಗಿ ನೀಡಲು ಲೈಗರ್ ತಯಾರಕರು ಯೋಜಿಸಿದ್ದರು. ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಂದಾಗಿ, ಟೀಸರ್ ಬಿಡುಗಡೆಯನ್ನು ನಂತರದ ದಿನಾಂಕಕ್ಕೆ ಮುಂದೂಡಲು ಲೈಗರ್ ತಂಡ ನಿರ್ಧರಿಸಿದೆ. ಜೊತೆಗೆ ಎಲ್ಲರೂ ಸುರಕ್ಷಿತವಾಗಿರಲು ತಂಡ ಕೋರಿದೆ. ಹೀಗಾಗಿ ವಿಜಯ್ ದೇವೇರಕೊಂಡ ಅವರ ಅಭಿಮಾನಿಗಳು ಕಾತುರದಿಂದ ಟೀಸರ್ ಬಿಡುಗಡೆಗೆ ಕಾಯುತ್ತಿದ್ದರಾದರೂ ಅವರ ನಿರೀಕ್ಷೆ ಹುಸಿಯಾಗಿದೆ.

ವಿಜಯ್ ದೇವೇರಕೊಂಡ ತಮ್ಮ 32 ನೇ ಹುಟ್ಟುಹಬ್ಬವನ್ನು ಇಂದು ಕುಟುಂಬ ಸದಸ್ಯರೊಂದಿಗೆ ತಮ್ಮ ಮನೆಯಲ್ಲಿ ಆಚರಿಸುತ್ತಿದ್ದಾರೆ.

ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರವನ್ನು ಚಾರ್ಮ್ ಕೌರ್, ಕರಣ್ ಜೋಹರ್ ಮತ್ತು ಸ್ವತಃ ನಿರ್ಮಿಸಲಿದ್ದಾರೆ. ವಿಜಯ್ ಮತ್ತು ಅನನ್ಯಾ ಅವರಲ್ಲದೆ ಈ ಚಿತ್ರದಲ್ಲಿ ರಮ್ಯಾ ಕೃಷ್ಣನ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

https://twitter.com/TheDeverakonda/status/1391266004844498945?ref_src=twsrc%5Etfw%7Ctwcamp%5Etweetembed%7Ctwterm%5E1391266004844498945%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fregional-cinema%2Fstory%2Fon-vijay-deverakonda-s-birthday-liger-teaser-launch-postponed-due-to-covid-19-crisis-1800435-2021-05-09

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights