Video: ಅಮೆರಿಕಾ ಪ್ರತಿಭಟನಾಕಾರನ ಮೇಲೆ ಪೊಲೀಸರ ಅಮಾನುಷ ಹಲ್ಲೆ! ಪೊಲೀಸ್ ಅಧಿಕಾರಗಳ ಸಸ್ಪೆಂಡ್‌

ಜಾರ್ಜ್ ಫ್ಲಾಯ್ಡ್‌ ಎಂಬ ಕಪ್ಪು ವರ್ಣೀಯನನ್ನು ಪೊಲೀಸರು ಹತ್ಯೆಗೈದಿರುವುದನ್ನು ವಿರೋಧಿಸಿ ಅಮೆರಿಕಾದಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಅಮೆರಿಕನ್ನರ ಪ್ರತಿಭಟನೆಯು 10ನೇ ದಿನದವರೆಗೂ ಮುಂದುವರೆದಿದೆ.

ಈ ನಡುವೆ ಪ್ರತಿಭಟನೆಕಾರರೊಬ್ಬರನ್ನು ಪೊಲೀಸರು ಅಮಾನುಷವಾಗಿ ತಳ್ಳಿ ನೆಲಕ್ಕೆ ಬೀಳಿಸಿದ್ದ ಹಿನ್ನಲೆಯಲ್ಲಿ ಇಬ್ಬರು ಪೊಲೀಸರನ್ನು ವೇತನ ರಹಿತ ಅಮಾನತು ಮಾಡಲಾಗಿದೆ.

ನ್ಯೂರ್ಯಾಕ್‌ನಲ್ಲಿನ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 75 ವರ್ಷದ ವ್ಯಕ್ತಿಯು ಪೋಲೀಸರಿಂದ ನೋಕಲ್ಲಟ್ಟ ವಿಡಿಯೋ ವೈರಲ್‌ ಆಗಿದ್ದು, ವಿಡಿಯೋ ಆಧಾರದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ನ್ಯೂಯಾರ್ಕ್‌ನ ಸ್ಥಳೀಯ ಸಾರ್ವಜನಿಕ ರೇಡಿಯೊ ಸ್ಟೇಷನ್ ಡಬ್ಲ್ಯುಬಿಎಫ್‌ಒ ವರದಿಗಾರ ಸೆರೆಹಿಡಿದ ವಿಡಿಯೋವನ್ನು ಅದರ ವೆಬ್‌ಸೈಟ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಬಿಳಿ ಕೂದಲಿನ ವ್ಯಕ್ತಿ ಪೊಲೀಸರನ್ನು ಸಮೀಪಿಸುತ್ತಿದ್ದಂತೆ, ಒಬ್ಬ ಅಧಿಕಾರಿಯು ಆತನನ್ನು ಲಾಠಿಯಿಂದ ಮತ್ತು ಮತ್ತೊಬ್ಬ ಅಧಿಕಾರಿ ಕೈಯಿಂದ ತಳ್ಳುತ್ತಾನೆ. ತಳ್ಳುವ ರಭಸಕ್ಕೆ ಆಯತಪ್ಪಿ ಕೆಳಗೆ ಬಿದ್ದ ವ್ಯಕ್ತಿಯ ತಲೆ ಒಡೆದು ತಲೆಯಿಂದ ರಕ್ತ ಹರಿದಿರುವ ದೃಶ್ಯ ಸೆರೆಯಾಗಿದೆ.

ಪೋಲಿಸ್ ದೌರ್ಜನ್ಯದ ವಿರುದ್ಧ ಪ್ರತಿಭಟನಾಕಾರರು ಯುಎಸ್ ಹಲವಾರು  ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ, ಮತ್ತೆ ಇಂತಹ ಪ್ರಕರಣ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಪಕ ಖಂಡನೆ ವ್ಯಕ್ತವಾಗುತ್ತಿದೆ.

ಇಬ್ಬರು ವೈದ್ಯರು ಬಂದು ಆಂಬುಲೆನ್ಸ್‌ನಲ್ಲಿ ಆ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದಾರೆ.  ಈಗ ಆತ ಬಫಲೋದ ಎರಿ ಕೌಂಟಿ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಆಯುಕ್ತ ಬೈರನ್ ಲಾಕ್ವುಡ್ ತಿಳಿಸಿರುವುದಾಗಿ ರೇಡಿಯೋ ಕೇಂದ್ರ ವರದಿ ಮಾಡಿದೆ.

ಈ ಪ್ರಕರಣವನ್ನು ತನಿಖೆಗೆ ಆದೇಶಿಸಿರುವುದಾಗಿ ಬೊಫೆಲೋ  ಪೊಲೀಸ್‌ ಆಯುಕ್ತ ಬೈರಸ್ ಲಾಕ್ಟುಡ್ ತಿಳಿಸಿದ್ದಾರೆ.

ಜಾರ್ಜ್ ಪ್ಲಾಯ್ಡ್‌ನನ್ನು ಮೇ 25 ಎಂದು ಹತ್ಯೆ ಮಾಡಲಾಗಿತ್ತು. ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಪ್ಲಾಯ್ಡ್‌ನ ಗುತ್ತಿಗೆಯ ಮೇಲೆ 09 ನಿಮಿಷಗಳ ಕಾಲ ಮೊಣಕಾಲನ್ನು ಹೂರಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಪೊಲೀಸರ ಈ ದೌರ್ಜನ್ಯದ ವಿರುದ್ಧ ಅಮೆರಿಕಾದ ಹಲವಾರು ರಾಜ್ಯಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights