ಸಮವಸ್ತ್ರ ಧರಿಸಿ ಕ್ರಿಸ್‌ಮಸ್ ಆಚರಿಸಿದ ಆಂಧ್ರಪ್ರದೇಶದ ಪೊಲೀಸರು : ವಿಡಿಯೋ ವೈರಲ್
ವಿಶಾಖಪಟ್ಟಣಂ: ಕ್ರಿಶ್ಚಿಯನ್ ಧರ್ಮದ ಅತಿದೊಡ್ಡ ಹಬ್ಬ ಕ್ರಿಸ್‌ಮಸ್ ಡಿಸೆಂಬರ್ 25 ರಂದು ಆಚರಿಸಲ್ಪಡುತ್ತಿದ್ದು ಇದಕ್ಕಾಗಿ ಸಿದ್ಧತೆಗಳು ವಿಶ್ವಾದ್ಯಂತ ಪ್ರಾರಂಭವಾಗಿವೆ. ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಕೆಲವು ಆಂಧ್ರಪ್ರದೇಶದ ಪೊಲೀಸರು ಸಾಂಟಾ ಕ್ಲಾಸ್ ಟೋಪಿ ಧರಿಸಿ ಕೇಕ್ ಕತ್ತರಿಸಿ ಕ್ರಿಸ್‌ಮಸ್ ಆಚರಿಸುವುದನ್ನು ಕಾಣಬಹುದು.
ಈ ವಿಡಿಯೋಕ್ಕಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಂಧ್ರಪ್ರದೇಶ ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ. ಕರ್ತವ್ಯದಲ್ಲಿದ್ದು ಪೊಲೀಸರು ಕ್ರಿಸ್‌ಮಸ್ ಹಬ್ಬವನ್ನು ಆಚರಿಸುತ್ತಿದ್ದಾರೆ ಎಂದು ದೂರಿದೆ. ಈ ಪೊಲೀಸರು ಯಾವುದೇ ಹಿಂದೂ ಹಬ್ಬವನ್ನು ಆಚರಿಸುತ್ತಿದ್ದರೆ, ಜಾತ್ಯತೀತ ಜನರು ಭಾರತವನ್ನು ಅಲ್ಲಾಡಿಸಿ ಸಾಕಷ್ಟು ಕೋಲಾಹಲಗಳನ್ನು ಮಾಡಲು ಪ್ರಾರಂಭಿಸುತ್ತಿದ್ದರು. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಆಂಧ್ರಪ್ರದೇಶದ ಉಪ ಉಸ್ತುವಾರಿ ಸುನಿಲ್ ದೇವಧರ್ ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
#Christmas celebrations by on-duty policemen is an insult to their Uniform & Oath.
Had this been a Hindu ritual, Secularists would have started shaming #India.
People of #AndhraPradesh are observing State-sponsored promotion of #Christianity.
All must condemn this overstepping. pic.twitter.com/jDyBIQlrts— Sunil Deodhar (@Sunil_Deodhar) December 12, 2020
ವೀಡಿಯೊವನ್ನು ಪೋಸ್ಟ್ ಮಾಡಿದ ಅವರು, ‘ಕರ್ತವ್ಯದಲ್ಲಿದ್ದಾಗ ಪೊಲೀಸರು ಕ್ರಿಸ್‌ಮಸ್ ಆಚರಣೆಯನ್ನು ನಡೆಸುವುದು ಅವರ ಸಮವಸ್ತ್ರ ಮತ್ತು ಪ್ರಮಾಣವಚನಕ್ಕೆ ಮಾಡಿದ ಅವಮಾನ. ಅದು ಹಿಂದೂ ಹಬ್ಬವಾಗಿದ್ದರೆ ಜಾತ್ಯತೀತವಾದಿಗಳು ಭಾರತವನ್ನು ಅಲುಗಾಡಿಸಲು ಪ್ರಾರಂಭಿಸುತ್ತಿದ್ದರು ಎಂದು ಬರೆದಿದ್ದಾರೆ. ‘ ಆಂಧ್ರಪ್ರದೇಶದ ಜನರು ರಾಜ್ಯ ಪ್ರಾಯೋಜಿತ ಕ್ರಿಶ್ಚಿಯನ್ ಧರ್ಮವನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ. ಇದನ್ನು ಎಲ್ಲರೂ ಖಂಡಿಸಬೇಕು’ ಎಂದಿದ್ದಾರೆ.