ವಿಹೆಚ್‌ಪಿ, ಆರ್‌ಎಸ್‌ಎಸ್‌, ತಾಲಿಬಾನ್‌ ಒಂದೇ ಮನಸ್ಥಿತಿಯವು: ಬಾಲಿವುಡ್‌ ಸಾಹಿತಿ ಜಾವೇದ್ ಅಖ್ತರ್

ಭಾರತದಲ್ಲಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್), ಬಜರಂಗದಳ ಹಾಗೂ ಆಫ್ಘಾನ್‌ಅನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಒಂದೇ. ಈ ಸಂಘಟನೆಗಳನ್ನು ವಸ್ತುನಿಷ್ಠವಾಗಿ ವೀಕ್ಷಿಸಿದಾಗ ಹೆಸರುಗಳು ಮತ್ತು ಮುಖಛಾಯೆ ಬದಲಾಗಿವೆ. ಆದರೆ ವಿಶ್ವದಾದ್ಯಂತ ಅವರೆಲ್ಲರೂ ಸಮಾನ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಬಾಲಿವುಡ್‌ ಹಿರಿಯ ಬರಹಗಾರ ಜಾವೇದ್ ಅಖ್ತರ್ ಹೇಳಿದ್ದಾರೆ. ಇದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲಿಬಾನಿಗಳಂತೆ ಬಲಪಂಥೀಯ ಸಂಘಟನೆಗಳು ಕೂಡಾ ಯಾವುದೇ ಕಾನೂನು ತಮ್ಮ ಧಾರ್ಮಿಕ ನಂಬಿಕೆಗಿಂತ ಮಿಗಿಲಾಗಿಲ್ಲ ಎಂದು ಭಾವಿಸುತ್ತವೆ ಎಂದು ಅವರು ಹೇಳಿದ್ದರು.

ತಾಲಿಬಾನಿಗಳು ಇಸ್ಲಾಮಿಕ್ ರಾಷ್ಟ್ರವನ್ನು ಬಯಸುವಂತೆ, ಭಾರತೀಯ ಬಲಪಂಥೀಯರು ಹಿಂದೂ ರಾಷ್ಟ್ರವನ್ನು ಬಯಸುತ್ತಾರೆ. ಅವರೆಲ್ಲರೂ ಸಮಾನ ಮನಸ್ಥಿತಿಯನ್ನು ಹೊಂದಿದ್ದಾರೆ. ನಿಸ್ಸಂಶಯವಾಗಿಯೂ ಅವರ ವರ್ತನೆಯು ಹೇಯವಾಗಿದೆ ಎಂದು ಅವರು ಹೇಳಿದ್ದಾರೆ.

ಜಾವೇದ್ ಅಖ್ತರ್ ಅವರ ಹೇಳಿಕೆಗೆ ಆಡಳಿತರೂಢ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ಶಾಸಕ ರಾಮ್ ಕದಂ. “ಸಂಘಪರಿವಾರದೊಂದಿಗೆ ಸಂಪರ್ಕವಿರುವವರೇ ದೇಶವನ್ನು ಆಳುತ್ತಿದ್ದಾರೆ. ಒಂದು ವೇಳೆ ತಾಲಿಬಾನ್‌ ಸಿದ್ಧಾಂತ ಇಲ್ಲಿ ಅಸ್ತಿತ್ವದಲ್ಲಿರುತ್ತಿದ್ದರೆ ಅವರಿಗೆ ಅಂತಹಾ ಹೇಳಿಕೆಗಳು ನೀಡಲು ಸಾಧ್ಯವೇ? ಈ ಪ್ರಶ್ನೆಗಿರುವ ಉತ್ತರವೇ ಅವರ ಟೀಕೆಗಳು ಎಷ್ಟು ಪೊಳ್ಳಾಗಿದೆ ಎನ್ನುವುದನ್ನು ತೋರಿಸುತ್ತದೆ. ಅವರು ಸಂಘದ ಸದಸ್ಯರಿಗೆ ಕೈಮುಗಿದು ಕ್ಷಮೆಯಾಚಿಸುವವರೆಗೂ, ಅವರ ಯಾವುದೇ ಚಲನಚಿತ್ರವನ್ನು ಭಾರತ ಮಾತೆಯ ಭೂಮಿಯಲ್ಲಿ ಪ್ರದರ್ಶಿಸಲು ನಾವು ಅನುಮತಿಸುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ ಭರ್ಜರಿ ಜಯ; ಎರಡನೇ ಸ್ಥಾನಕ್ಕೆ ಕುಸಿದ ಬಿಜೆಪಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights