“ಮನ್ ಕೀ ಆವಾಜ್: ಪ್ರತಿಜ್ಞಾ” ಖ್ಯಾತಿಯ ಅನುಪಮ್ ಶ್ಯಾಮ್ ವಿಧಿವಶ..!

ಕಳೆದ ವಾರ ಕಿಡ್ನಿ ಸೋಂಕಿನಿಂದಾಗಿ ಮುಂಬೈ ನಗರದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಅನುಪಮ್ ಶ್ಯಾಮ್ ಬಹು ಅಂಗಾಂಗ ವೈಫಲ್ಯದಿಂದ ಸೋಮವಾರ ನಿಧನರಾದರು ಎಂದು ಅವರ ಸ್ನೇಹಿತ ನಟ ಯಶಪಾಲ್ ಶರ್ಮಾ ತಿಳಿಸಿದ್ದಾರೆ.

63 ವರ್ಷದ ನಟ ಅನುಪಮ್ ಶ್ಯಾಮ್ ಜನಪ್ರಿಯ ಟಿವಿ ಕಾರ್ಯಕ್ರಮ “ಮನ್ ಕೀ ಆವಾಜ್: ಪ್ರತಿಜ್ಞಾ” ಸೇರಿದಂತೆ “ಸ್ಲಮ್‌ಡಾಗ್ ಮಿಲಿಯನೇರ್” ಮತ್ತು “ಬ್ಯಾಂಡಿಟ್ ಕ್ವೀನ್” ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಶರ್ಮಾ ತನ್ನ ಇಬ್ಬರು ಸಹೋದರರಾದ ಅನುರಾಗ್ ಮತ್ತು ಕಾಂಚನ್ ಮುಂದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

https://twitter.com/ashokepandit/status/1424423098456047618?ref_src=twsrc%5Etfw%7Ctwcamp%5Etweetembed%7Ctwterm%5E1424423098456047618%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Findia-news%2Fveteran-actor-anupam-shyam-dies-at-63-2505882

“40 ನಿಮಿಷಗಳ ಹಿಂದೆ ಅವರ ಸಾವಿನ ಬಗ್ಗೆ ವೈದ್ಯರು ನಮಗೆ ಮಾಹಿತಿ ನೀಡಿದರು. ನಾನು ಆಸ್ಪತ್ರೆಯಲ್ಲಿದ್ದೆ, ಆತನ ಸಹೋದರರಾದ ಅನುರಾಗ್ ಮತ್ತು ಕಾಂಚನ್ ಜೊತೆಗಿದ್ದರು. ಅವರ ದೇಹವನ್ನು ಆಸ್ಪತ್ರೆಯಿಂದ ಹೊಸ ದಿಂಡೋಶ MHADA ಕಾಲೋನಿಯ ಅವರ ನಿವಾಸಕ್ಕೆ ಬೆಳಿಗ್ಗೆ ತರಲಾಗುವುದು.  ಅಂತ್ಯಕ್ರಿಯೆ ದಿನದ ನಂತರ ನಡೆಸಲಾಗುವುದು” ಎಂದು ಸ್ನೇಹಿತ ನಟ ಯಶಪಾಲ್ ಶರ್ಮಾ ತಿಳಿಸಿದ್ದಾರೆ.

ಅನುಪಮ್ ಶ್ಯಾಮ್ ತನ್ನ ಸುಮಾರು ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ “ಸತ್ಯ”, “ದಿಲ್ ಸೇ”, “ಲಗಾನ್”, “ಹಜಾರೊನ್ ಖ್ವೈಶೇನ್ ಐಸಿ” ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದು ಸ್ಟಾರ್ ಪ್ಲಸ್ ನಲ್ಲಿ 2009 ರಲ್ಲಿ ಪ್ರಸಾರವಾಗುವ “ಮನ್ ಕೀ ಆವಾಜ್ ಪ್ರತಿಜ್ಞಾ” ದಲ್ಲಿ ಠಾಕೂರ್ ಸಜ್ಜನ್ ಸಿಂಗ್ ಪಾತ್ರಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಿದ್ದರು. ಅವರು ಇತ್ತೀಚೆಗೆ ತಮ್ಮ ಕಾರ್ಯಕ್ರಮದ “ಮನ್ ಕಿ ಆವಾಜ್: ಪ್ರತಿಜ್ಞಾ” ಸೀಸನ್ ಎರಡರ ಚಿತ್ರೀಕರಣವನ್ನು ಪುನರಾರಂಭಿಸಿದ್ದರು.

ಕಳೆದ ವರ್ಷ, ಶ್ಯಾಮ್ ಡಯಾಲಿಸಿಸ್‌ಗೆ ಒಳಗಾಗಿದ್ದರು. ಡಯಾಲಿಸಿಸ್ ಸಮಯದಲ್ಲಿ ಕುಸಿದು ಬಿದ್ದು ಅವರನ್ನು ಗೋರೆಗಾಂವ್ ಆಸ್ಪತ್ರೆಗೆ ಸೇರಿಸಲಾಗಿತ್ತು. ನಟನ ಕುಟುಂಬ ಅವರ ಚಿಕಿತ್ಸೆಗಾಗಿ ಮನರಂಜನಾ ಉದ್ಯಮದಲ್ಲಿರುವ ಸ್ನೇಹಿತರಿಂದ ಸಹಾಯವನ್ನು ಕೋರಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights