ಪ್ರೇಮಿಗಳ ದಿನ ಪ್ರೀತಿಯ ಹಾಯ್ ಹೇಳಲಿದ್ದಾರೆ ಜ್ಯೂನಿಯರ್ ಚಿರು…!

ಸರ್ಜಾ ಮನೆಯಲ್ಲಿ ಸಂತಸ ಇಮ್ಮಡಿಗೊಳಿಸಿ ಜೂನಿಯರ್ ಚಿರು ಸರ್ಜಾ ಎಂಟ್ರಿಕೊಟ್ಟಾಗಿದೆ. ಕಾಕತಾಳೀಯ ಎನ್ನುವಂತೆ 2020ರ ಅಕ್ಟೋಬರ್ 22ಕ್ಕೆ ಎಂಟ್ರಿಕೊಟ್ಟ ಜ್ಯೂನಿಯರ್ ಚಿರುವನ್ನ ನೋಡಲು ಕರುನಾಡು ಕಾತುರತೆಯಿಂದ ಕಾಯುತ್ತಿದೆ. ಈ ಸಮಯದಲ್ಲಿ ಮೇಘನಾ ರಾಜ್ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಹೌದು… ಇದೇ ಫೆ.14ರಂದು ಪ್ರೇಮಿಗಳ ದಿನ ನ್ಯೂನಿಯರ್ ಚಿರು ಫೋಟೋ ಶೇರ್ ಮಾಡುವುದಾಗಿ ತಿಳಿಸಿದ್ದಾರೆ. ಇವರು ಈ ವಿಚಾರ ಹೇಳುತ್ತಿದ್ದಂತೆ ಅಭಿಮಾನಿಗಳು ಸಂತಸದಿಂದ ಆ ದಿನವನ್ನು ಎದುರು ನೋಡುತ್ತಿದ್ದಾರೆ. ಜೊತೆಗೆ ಮೇಘನಾ ರಾಜ್ ಫೋಸ್ಟ್ ನ್ನು ಹಂಚಿಕೊಂಡಿದ್ದಾರೆ.

ಅಣ್ಣನ ಮಗುವನ್ನು ಹಿಡಿದುಕೊಂಡು ಧ್ರುವ ಸರ್ಜಾ ಸಂಭ್ರಮಿಸಿದ ಕ್ಷಣ ಸದ್ಯ ಎಲ್ಲರಿಗೂ ಸಿಗಲಿದೆ. ಚಿರು ಅಗಲಿಕೆ ಬಳಿಕ ಕುಟುಂಬದಲ್ಲಿ ಹೊಸ ನಂದಾದೀಪ ಬೆಳಗಿದ ನ್ಯೂನಿಯರ್ ಚಿರು ಹುಟ್ಟುತ್ತಲೇ ಅಭಿಮಾನಿಗಳ ಬಳಗವನ್ನು ಹೊಂದಿದ್ದಾನೆ.

ಕಳೆದ ಜೂನ್ 7ರಂದು ಚಿರಂಜೀವಿ ಸರ್ಜಾ ಹಠಾತ್ತಾಗಿ ಹೃದಯಾಘಾತದಿಂದ ನಿಧನ ಹೊಂದಿದ್ದು ಕುಟುಂಬಕ್ಕೆ ದೊಡ್ಡ ಅಘಾತ ನೀಡಿತ್ತು. ಈ ಘಟನೆ ಬಳಿಕ ಚಿರು ಕುಟುಂಬದಲ್ಲಿ ನುಗುವ ಹಬ್ಬ ಸೃಷ್ಟಿಸಿದ್ದು ನ್ಯೂನಿಯರ್ ಚಿರು. ಹೀಗಾಗಿ ಸದ್ಯ ಜ್ಯೂನಿಯರ್ ಚಿರುವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದು ಮೇಘನಾ ರಾಜ್ ಫೋಸ್ಟನ್ನು ಹಂಚಿಕೊಂಡಿದ್ದಾರೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights