ಹಾಸಿಗೆಗಳಲ್ಲಿ ಹತ್ತಿಯ ಬದಲು ಬಳಸಿದ ಮುಖವಾಡಗಳ ಬಳಕೆ : ಮಹರಾಷ್ಟ್ರ ಕಾರ್ಖಾನೆ ಮೇಲೆ ಪೊಲೀಸ್ ದಾಳಿ!

ಹಾಸಿಗೆಗಳಲ್ಲಿ ಹತ್ತಿಯ ಬದಲು ಬಳಸಿದ ಮುಖವಾಡಗಳ ತ್ಯಾಜ್ಯ ಬಳಕೆ ಮಾಡಿದ ಘಟನೆ ಮಹಾರಾಷ್ಟ್ರದ ಹಾಸಿಗೆ ತಯಾರಿಸುವ ಕಾರ್ಖಾನೆಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ ಹಾಸಿಗೆ ತಯಾರಿಸುವ ಕಾರ್ಖಾನೆಯಲ್ಲಿ ಹಾಸಿಗೆಗೆ ಹತ್ತಿ ಅಥವಾ ಇತರ ವಸ್ತುಗಳ ಬದಲಿಗೆ ತ್ಯಾಜ್ಯ ಮುಖವಾಡಗಳನ್ನು ಮತ್ತು ಅದರ ಉತ್ಪನ್ನಗಳನ್ನು ತುಂಬಿಸುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾರ್ಖಾನೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾತ್ರವಲ್ಲದೇ ಅವರು ಆವರಣದಲ್ಲಿ ಮುಖವಾಡಗಳ ರಾಶಿಯನ್ನು ಸಹ ವಶಪಡಿಸಿಕೊಂಡರು.

ರಾಜಧಾನಿ ಮುಂಬಯಿಯಿಂದ ಈಶಾನ್ಯಕ್ಕೆ 400 ಕಿಲೋಮೀಟರ್ ದೂರದಲ್ಲಿರುವ ಜಲ್ಗಾಂವ್‌ನ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ (ಎಂಐಡಿಸಿ) ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಹಾರಾಷ್ಟ್ರ ಹಾಸಿಗೆ ಕೇಂದ್ರದಲ್ಲಿ ಈ ದಂಧೆ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿತ್ತು.

hiskt6nk

“ಕುಸುಂಬಾ ಗ್ರಾಮದಲ್ಲಿರುವ ಕಾರ್ಖಾನೆಯ ಆವರಣಕ್ಕೆ ಅಧಿಕಾರಿಗಳು ಭೇಟಿ ನೀಡಿದಾಗ, ಬಳಸಿದ ಮುಖವಾಡಗಳಿಂದ ಹಾಸಿಗೆ ಮಾಡುವುದನ್ನು ಅಧಿಕಾರಿಗಳು ಕಂಡುಕೊಂಡರು” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಗವಾಲಿ ಹೇಳಿದ್ದಾರೆ.

“ಈ ವೇಳೆ ಸ್ಥಳ ಪರಿಶೀಲನೆ ಮಾಡಿ ಕಾರ್ಖಾನೆಯ ಮಾಲೀಕ ಅಮ್ಜದ್ ಅಹ್ಮದ್ ಮನ್ಸೂರಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಈಗ ಇತರರ ದಂಧೆಯಲ್ಲಿ ಭಾಗಿಯಾಗಿರುವುದನ್ನು ತನಿಖೆ ನಡೆಸುತ್ತಿದ್ದಾರೆ” ಎಂದು ಗವಾಲಿ ಹೇಳಿದ್ದಾರೆ. ನಂತರ ಪೊಲೀಸರು ನಿಗದಿತ ಮಾನದಂಡಗಳ ಪ್ರಕಾರ ಆವರಣದ ಸುತ್ತಲೂ ಇರುವ ಬಳಸಿದ ಮುಖವಾಡಗಳ ಹಾಸಿಗೆಗಳಿಗೆ ಮತ್ತು ಮುಖವಾಡಗಳ ರಾಶಿಗೆ ಬೆಂಕಿ ಹಚ್ಚಲಾಗಿದೆ.

ಕೊರೊನಾದಿಂದಾಗಿ ಭಾರತದಲ್ಲಿ ಮುಖವಾಡ ಉತ್ಪಾದನೆಯು ಮಾರ್ಚ್ 2020 ರಲ್ಲಿ ದಿನಕ್ಕೆ 1.5 ಕೋಟಿ ಯುನಿಟ್ ಏರಿದೆ. ಹೀಗಾಗಿ ಸಾಂಕ್ರಾಮಿಕ ರೋಗದಿಂದಾಗಿ ಕೊರೊನಾ ತಡೆಗೆ ಬಳಸುವ ವಸ್ತುಗಳ ತ್ಯಾಜ್ಯವೂ ಹೆಚ್ಚಾಗುತ್ತಿದೆ. ಈಗಾಗಲೇ ಇದು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗೆ ಹೊರೆಯಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ಕೈಗವಸುಗಳು ಮತ್ತು ಮುಖವಾಡಗಳನ್ನು ಒಳಗೊಂಡಂತೆ ಇದು ಜೂನ್ ಮತ್ತು ಸೆಪ್ಟೆಂಬರ್ 2020 ರ ನಡುವೆ ಮಾತ್ರ 18,000 ಟನ್ ಕೋವಿಡ್ -19 ಸಂಬಂಧಿತ ಜೈವಿಕ ವೈದ್ಯಕೀಯ ತ್ಯಾಜ್ಯ ಕಂಡುಬಂದಿದೆ. ಈ ಬೆಳವಣಿಗೆ ಆತಂಕಕ್ಕೆ ಎಡೆ ಮಾಡಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights