ಕೃಷಿ ಕಾನೂನುಗಳನ್ನು ಅಮೆರಿಕಾ ಬೆಂಬಲಿಸಿದೆ ಎಂದು ಭಾರತೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ: ಆದರೆ ಅದು ಸುಳ್ಳು!

“ಭಾರತದ ಹೊಸ ಕೃಷಿ ಕಾನೂನುಗಳನ್ನು ಅಮೆರಿಕಾ ಬೆಂಬಲಿಸಿದೆ” ಎಂದು ಸುದ್ದಿ ಸಂಸ್ಥೆಗಳಾದ ಎಎನ್‌ಐ ಮತ್ತು ಪಿಟಿಐ ವರದಿಗಳನ್ನು ಹಲವಾರು ಇಂಗ್ಲಿಷ್ ಮತ್ತು ಹಿಂದಿ ಸುದ್ದಿ ಮಾಧ್ಯಮಗಳು ಗುರುವಾರ ಪ್ರಕಟಿಸಿವೆ.  “ಅಮೆರಿಕಾವು ಭಾರತೀಯ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಸ್ವಾಗತಿಸುತ್ತದೆ” ಎಂದು ಹೇಳಿರುವುದಾಗಿ ವರದಿಗಳು ಪ್ರಕಟವಾಗಿವೆ. ಆದರೆ, ಈ ಸುದ್ದಿ ಸತ್ಯದಿಂದ ದೂರವಾಗಿದೆ.

ಮಾಧ್ಯಮಗಳು ಅಮೆರಿಕನ್ನರು ಬಿಡುಗಡೆ ಮಾಡಿದ ಹೇಳಿಕೆಯನ್ನು ಓದುವುದರಲ್ಲಿ ತಲೆಕೆಡಿಸಿಕೊಂಡಿದ್ದರೆ ಅಥವಾ ವಿದೇಶಾಂಗ ಇಲಾಖೆಯ ವಕ್ತಾರರನ್ನು ಸಂಪರ್ಕಿಸಿದ್ದರೆ, ಅಮೆರಿಕಾ ಹೇಳಿದ್ದೇನು ಎಂಬುದರ ಸುದ್ದಿಯ ನಿಖರತೆಯನ್ನು ಕಂಡುಕೊಳ್ಳಬಹುದಿತ್ತು.

ಸುದ್ದಿ ವೆಬ್‌ಸೈಟ್ ಸ್ಕ್ರಾಲ್ ವರದಿಯ ಪ್ರಕಾರ, ಯುಎಸ್ ಹೇಳಿಕೆಯು ನಿಜವಾಗಿ ಹೀಗೆ ಹೇಳುತ್ತದೆ: “ಸಾಮಾನ್ಯವಾಗಿ ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಯುನೈಟೆಡ್ ಸ್ಟೇಟ್ಸ್ ಸ್ವಾಗತಿಸುತ್ತದೆ.” ಆದಾಗ್ಯೂ, ಅಮೆರಿಕಾವು “ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ವೈರುದ್ಯಗಳನ್ನು ಚರ್ಚೆಯ ಮೂಲಕ ಪರಿಹರಿಸಲು ಪ್ರೋತ್ಸಾಹಿಸುತ್ತದೆ” ಎಂದು ಹೇಳಿದೆ.

ಅಮೆರಿಕಾದ ಹೇಳಿಯು ಅದು ಕೃಷಿ ಕಾನೂನುಗಳಿಗೆ ಬೆಂಬಲವನ್ನು ನೀಡಿದೆ ಎಂದು ಸ್ಪಷ್ಟವಾಗಿ ಘೋಷಿಸಿಲ್ಲ. ಆದರೆ, ಭಾರತದ ಮಾಧ್ಯಮಗಳು ಅಮೆರಿಕಾದ ಮುಖ್ಯ ಹೇಳಿಕೆಯನ್ನು ಕೈಬಿಟ್ಟು ತಮಗಿಚ್ಚಿಸಿದಂತೆ ಬರೆದುಕೊಂಡಿವೆ.

ಭಾರತೀಯ ಸುದ್ದಿ ಸಂಸ್ಥೆಗಳು ಈ ಹೇಳಿಕೆಯನ್ನು ಹೇಗೆ ವರದಿ ಮಾಡಿವೆ ಎಂಬುದು ಇಲ್ಲಿದೆ:

ರಿಪಬ್ಲಿಕ್‌ ಟಿವಿ:

ಹೆಚ್ಚಿನ ಭಾರತೀಯ ಮಾಧ್ಯಮ ವೇದಿಕೆಗಳು ಹೇಳಿಕೆಯ ಕುರಿತು ಸುದ್ದಿ ಸಂಸ್ಥೆಯ ವರದಿಗಳನ್ನು ರಿ-ರೈಟ್‌ ಮಾಡದೆಯೇ ಪ್ರಕಟಿಸಿವೆ. ರಿಪಬ್ಲಿಕ್ ಟಿವಿಯಲ್ಲಿ ಸುದ್ದಿಯನ್ನು ಹೀಗೆ ಬರೆದಿದೆ.

“ರೈತರ ಪ್ರತಿಭಟನೆಯ ಮಧ್ಯೆ, ಯುನೈಟೆಡ್ ಸ್ಟೇಟ್ಸ್ ಈಗ ಭಾರತವನ್ನು ಬೆಂಬಲಿಸುತ್ತಿದೆ. ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಅಮೆರಿಕಾ ಶ್ಲಾಘಿಸಿದೆ. ಕೃಷಿ ಕ್ಷೇತ್ರವನ್ನು ಸುಧಾರಿಸುವ ಭಾರತೀಯ ಸರ್ಕಾರದ ಕ್ರಮಕ್ಕೆ ನೂತನ ಅಧ್ಯಕ್ಷ ಬೈಡೆನ್ ಅವರ ಆಡಳಿತವು ಬೆಂಬಲ ನೀಡುತ್ತಿದೆ ಎಂದು ರಾಜ್ಯ ಇಲಾಖೆ ಹೇಳಿಕೆ ನೀಡಿದೆ” ಎಂದು ರಿಪಬ್ಲಿಕ್ ಟಿವಿ ಪ್ರಕಟಿಸಿದೆ.

ಎನ್‌ಡಿಟಿವಿ:

ಎನ್‌ಡಿಟಿವಿ ಈ ಹೇಳಿಕೆಯ ಕುರಿತು ಪಿಟಿಐ ವರದಿಯನ್ನು ಪ್ರಕಟಿಸಿದೆ. “ಕೃಷಿ ನೀತಿಗಳು ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುತ್ತವೆ. ಖಾಸಗಿ ಹೂಡಿಕೆ ಮತ್ತು ರೈತರಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಆಕರ್ಷಿಸುವ, ಕೃಷಿ ಕ್ಷೇತ್ರವನ್ನು ಸುಧಾರಿಸುವ ಭಾರತೀಯ ಸರ್ಕಾರದ ಕ್ರಮಕ್ಕೆ ಹೊಸ ಬೈಡೆನ್ ಆಡಳಿತವು ಬೆಂಬಲ ನೀಡುತ್ತಿದೆ” ಎಂದು ಘೋಷಿಸಿದೆ ಎಂದು ಪ್ರಕಟಿಸಿದೆ.

ಬಿಸಿನೆಸ್ ಸ್ಟ್ಯಾಂಡರ್ಡ್:

ಇಂಗ್ಲಿಷ್ ಪತ್ರಿಕೆ ಎಎನ್‌ಐ ಲೇಖನವನ್ನು ಉಲ್ಲೇಖಿಸಿ ಬಿಸಿನೆಸ್‌ ಸ್ಟ್ಯಾಂಡರ್ಡ್‌ ವರದಿ ಮಾಡಿದೆ. ಅದರ ಶೀರ್ಷಿಕೆ, “ಯುಎಸ್ ಭಾರತದ ಹೊಸ ಕೃಷಿ ಕಾನೂನುಗಳನ್ನು ಬೆಂಬಲಿಸುತ್ತದೆ, ಇದು ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುತ್ತದೆ ಎಂದು ಹೇಳುತ್ತದೆ” ಎಂದು ಪ್ರಕಟಿಸಿದೆ.

ದಿ ವೀಕ್‌:

ಪಿಟಿಐನ ವರದಿಯನ್ನು ಪಡೆದು ಪ್ರಕಟಿಸಿದ ವೀಕ್ ವರದಿಯು, “ಖಾಸಗಿ ಹೂಡಿಕೆ ಮತ್ತು ರೈತರಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಆಕರ್ಷಿಸುವ ಕೃಷಿ ಕ್ಷೇತ್ರವನ್ನು ಸುಧಾರಿಸುವ ಭಾರತೀಯ ಸರ್ಕಾರದ ಕ್ರಮವನ್ನು ಬಿಡನ್ ಆಡಳಿತವು ಬೆಂಬಲಿಸುತ್ತದೆ” ಎಂದು ಹೇಳಿದೆ.

ಮಿಂಟ್‌: 

“ಖಾಸಗಿ ಹೂಡಿಕೆ ಮತ್ತು ರೈತರಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಆಕರ್ಷಿಸುವ ಕೃಷಿ ಕ್ಷೇತ್ರವನ್ನು ಸುಧಾರಿಸುವ ಭಾರತ ಸರ್ಕಾರದ ಕ್ರಮವನ್ನು ಯುಎಸ್ ಬೆಂಬಲಿಸುತ್ತದೆ” ಎಂದು ವ್ಯವಹಾರ ಪತ್ರಿಕೆಯಾದ ಮಿಂಟ್‌ ಉಲ್ಲೇಖಿಸಿದೆ.

ಟೈಮ್ಸ್ ನೌ

ಟೈಮ್ಸ್ ನೌ ತನ್ನ ವರದಿಯ ಕ್ರೆಡಿಟ್‌ ಪಿಟಿಐಗೆ ನೀಡಿದೆ. ಅದು “ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುತ್ತದೆ”: ರೈತರ ಪ್ರತಿಭಟನೆಯ ಮಧ್ಯೆ ಯುಎಸ್ ಕೃಷಿ ಕಾನೂನುಗಳನ್ನು ಶ್ಲಾಘಿಸುತ್ತದೆ” ಎಂದು ಟೈಮ್ಸ್‌ ನೌ ಶೀರ್ಷಿಕೆಯಲ್ಲಿ ಪ್ರಕಟಿಸಿದೆ

ಎಕನಾಮಿಕ್ ಟೈಮ್ಸ್

ಟೈಮ್ಸ್ ನೌ ನಂತಹ ಟೈಮ್ಸ್ ಗ್ರೂಪ್‌ನ ಎಕನಾಮಿಕ್ ಟೈಮ್ಸ್‌, ಎಎನ್ಐ ವರದಿಯನ್ನು “ಯುಎಸ್ ಭಾರತದ ಹೊಸ ಕೃಷಿ ಕಾನೂನುಗಳನ್ನು ಬೆಂಬಲಿಸುತ್ತದೆ, ಇದು ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುತ್ತದೆ ಎಂದು ಹೇಳುತ್ತದೆ” ಎಂಬ ಶೀರ್ಷಿಕೆಯೊಂದಿಗೆ ರೀ-ರೈಟ್ ಮಾಡಿ ಪ್ರಕಟಿಸಿದೆ.

ಭಾರತ ಮಾಧ್ಯಮಗಳು ಅಮೆರಿಕಾದ ಹೇಳಿಕೆಯನ್ನು ಅರ್ಧ ಮಾತ್ರ ಅರ್ಥೈಸಿಕೊಂಡು ಕೃಷಿ ಕಾಯ್ದೆಗಳನ್ನು ಅಮೆರಿಕಾ ಬೆಂಬಲಿಸಿದೆ ಎಂದು ಸುದ್ದಿ ಭಿತ್ತರಿಸಿವೆ. ಆದರೆ, ಅಮೆರಿಕಾ, “ಸಾಮಾನ್ಯವಾಗಿ ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಯುನೈಟೆಡ್ ಸ್ಟೇಟ್ಸ್ ಸ್ವಾಗತಿಸುತ್ತದೆ.” ಆದಾಗ್ಯೂ, ಅಮೆರಿಕಾವು “ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ವೈರುದ್ಯಗಳನ್ನು ಚರ್ಚೆಯ ಮೂಲಕ ಪರಿಹರಿಸಲು ಪ್ರೋತ್ಸಾಹಿಸುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: ರೈತರ ಪರೇಡ್‌ನಲ್ಲಿ ಪೊಲೀಸರ ದಾಳಿ; ವಾಸ್ತವವನ್ನು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ತಿರುಚಿದ್ದು ಹೀಗೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights