ನಟಿ ಉರ್ಮಿಳಾ ಮಾತೋಂಡ್ಕರ್ “ಸಾಫ್ಟ್‌ ಪೋರ್ನ್ ಸ್ಟಾರ್” ಎಂದ ಕಂಗನಾ; ಸೆಲೆಬ್ರೆಟಿಗಳಿಂದ ವಿರೋಧ

ಬಾಲಿವುಡ್‌ನಲ್ಲಿ “ಡ್ರಗ್ ಮಾಫಿಯಾ” ಇರುವ ಬಗ್ಗೆ ಮತ್ತು ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಮತ್ತೆ ಹೊಸ ವಿವಾದಗಳಿಗೆ ಗುರಿಯಾಗಿದ್ದಾರೆ. ಈ ಬಾರಿ, ಸಹ ನಟಿ ಉರ್ಮಿಳಾ ಮಾತೋಂಡ್ಕರ್ ಅವರ ವಿಚಾರವಾಗಿ ರನೌತ್ ಮಾಡಿರುವ ಕಾಮೆಂಟ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಸೆಲೆಬ್ರೆಟಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಕಂಗನಾ  ಟೀಕೆಗೆ ಗುರಿಯಾಗಿದ್ದಾರೆ.

ದೂರದರ್ಶನ ಸಂದರ್ಶನವೊಂದರಲ್ಲಿ, ಕಂಗನಾ ರನೌತ್ ಅವರು ಉರ್ಮಿಳಾ ಮಾತೋಂಡ್ಕರ್ ಅವರನ್ನು “ಸಾಫ್ಟ್ ಪೋರ್ನ್ ಸ್ಟಾರ್” ಎಂದು ಕರೆದಿದ್ದಾರೆ. ಉರ್ಮಿಳಾ ರಾಜಕೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದರೆ, ಆಕೆಗೆ ಟಿಕೆಟ್‌ ಪಡೆಯುವುದು ತಂಬಾ ಕಷ್ಟವಲ್ಲ. ಉರ್ಮಿಳಾ ಕೂಡ ಸಾಫ್ಟ್ ಪೊರ್ನ್‌ ಸ್ಟಾರ್‌. ಅವರು, ಖಚಿತವಾಗಿಯೂ ತನ್ನ ನಟನೆಯಿಂದ ಹೆಸರು ಪಡೆದಿಲ್ಲ. ಅವರು ಯಾವುದಕ್ಕೆ ಹೆಸರುವಾಸಿಯಾಗಿದ್ದಾರೆ? ಸಾಫ್ಟ್ ಪೋರ್ನ್ ಸರಿಯಾಗಿ ಮಾಡಿದ್ದಕ್ಕಾಗಿ? ಅವರು ಟಿಕೆಟ್ ಪಡೆಯಲು ಸಾಧ್ಯವಾದರೆ, ನಾನು ಯಾಕೆ ಟಿಕೆಟ್ ಪಡೆಯುವುದಿಲ್ಲ?” ಎಂದು ಕಂಗನಾ ಹೇಳಿದ್ದರು.

ಕಂಗನಾ ಅವರ ಹೇಳಿಕೆಯನ್ನು ವಿರೋಧಿಸಿ ಹಲವರು ಟ್ವೀಟ್‌ ಮಾಡಿದ್ದಾರೆ. ಅವರಲ್ಲಿ ಚಲನಚಿತ್ರ ನಿರ್ದೇಶಕಿ ಮತ್ತು ನಿರ್ಮಾಪಕಿ ಅನುಬವ್ ಸಿನ್ಹಾ ಅವರು,  “ಇದುವರೆಗಿನ ಅತ್ಯಂತ ಸುಂದರವಾದ, ಸೊಗಸಾದ, ಎದ್ದುಕಾಣುವ, ಅಭಿವ್ಯಕ್ತಿಶೀಲ ನಟಿಯರಲ್ಲಿ ನೀವು ಒಬ್ಬರು. ನಿಮಗೆ ಪ್ರೀತಿಯನ್ನು ಕಳಿಸುತ್ತಿದ್ದೇನೆ” ಎಂದು ಉರ್ಮಿಲಾ ಮಾತೋಂಡ್ಕರ್ ಅವರಿಗೆ ಮೆಚ್ಚುಗೆಯ ಟ್ವೀಟ್ ಮಾಡಿದ್ದಾರೆ.

“ಆತ್ಮೀಯ  ಉರ್ಮಿಲಾ ಮಾತೊಂಡ್ಕರ್ ಜಿ, ಮಸೂಮ್, ಚಮತ್ಕಾರ್, ರಂಗೀಲಾ, ಜುದೈ, ದೌಡ್, ಸತ್ಯ, ಭೂತ್, ಕೌನ್, ಜಂಗಲ್, ಪ್ಯಾರ್ ಟ್ಯೂನಿ ಕ್ಯಾ ಕಿಯಾ, ತಹಜೀಬ್, ಪಿಂಜಾರ್, ಏಕ್ ಹಸೀನಾ ಥಿ .. ಮುಂತಾದವುಗಳಲ್ಲಿ ನಿಮ್ಮ ನಟನೆ ಚಾಪ್ಸ್ ಮತ್ತು ನೃತ್ಯ ಅದ್ಭುತವಾದದ್ದು! ಲವ್ ಯು” ಎಂದು ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದರು.

ಕಂಗನಾ ಮತ್ತು ಉರ್ಮಿಳಾ ಮಧ್ಯೆ ಮಾತಿ ಸಮರ ನಡೆಯುತ್ತಿದೆ. ಬಾಲಿವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಇದೆ ಎಂಬ ಕಂಗನಾ ಹೇಳಿಕೆಗೆ ಪ್ರತಿಕ್ರಿಸಿದ್ದ ಉರ್ಮಿಳಾ ಮಾತೋಂಡ್ಕರ್, “ಇಡೀ ದೇಶವು ಮಾದಕ ದ್ರವ್ಯಗಳ ಭೀತಿಯನ್ನು ಎದುರಿಸುತ್ತಿದೆ. ಹಿಮಾಚಲವು ಡ್ರಗ್ಸ್‌ ಜಾಲದ ಮೂಲ ಎಂದು ಅವರಿಗೆ (ಕಂಗನಾ) ತಿಳಿದಿದೆಯೇ? ಅವರು ತನ್ನ ರಾಜ್ಯದಿಂದಲೇ ಪ್ರಾರಂಭಿಸಬೇಕು” ಎಂದು ಹೇಳಿದ್ದರು.

ಉರ್ಮಿಳಾ ಮಾತೋಂಡ್ಕರ್ ಬೆಂಬಲಿಸಿ, ಕಂಗನಾ ವಿರುದ್ಧ ಟೀಕೆಗಳು ವ್ಯಕ್ತವಾದ ಬಳಿಕವೂ, ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಟ್ವೀಟ್‌ ಮಾಡಿದ್ದಾರೆ.

https://twitter.com/KanganaTeam/status/1306445511218528257?s=20

ಟ್ವೀಟ್‌ನಲ್ಲಿ, “ಲಿಬರಲ್‌ ಬ್ರಿಗೇಡ್‌ನ ಪ್ರಸಿದ್ಧ ಬರಹಗಾರರೊಬ್ಬರು, ಸನ್ನಿ ಲಿಯೋನ್‌ ಅಂತವರನ್ನು ಜನರು ಇಷ್ಟಪಡುತ್ತಾರೆ. ಆದರೆ, ಅವರು ನಮಗೆ ರೋಲ್‌ ಮಾಡೆಲ್‌ ಅಗಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕಾಗಿ ಹಲ್ಲೆಗೆ ಒಳಗಾದರು.  ಸನ್ನಿ ಅವರನ್ನು ಉದ್ಯಮ ಮತ್ತು ಇಡೀ ಭಾರತವು ಕಲಾವಿದೆಯಾಗಿ ಸ್ವೀಕರಿಸಿದೆ. ಇದ್ದಕ್ಕಿದ್ದಂತೆ ನಕಲಿ ಸ್ತ್ರೀವಾದಿಗಳು ಅಶ್ಲೀಲ ತಾರೆಯೆಂಬ ಅವಹೇಳನಕಾರಿ ಸಂಗತಿಗೆ ಸಮನಾಗಿರುತ್ತಾರೆ” ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ‘ಹಿಮಾಚಲದಲ್ಲಿ ಡ್ರಗ್ಸ್ ವಿರುದ್ಧ ಏಕೆ ಯುದ್ಧ ಮಾಡಬಾರದು?’ ಕಂಗನಾ ಮೇಲೆ ಉರ್ಮಿಳಾ ವಾಗ್ದಾಳಿ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights