ಊಟಕ್ಕೆ ಪಾನಿ ಪುರಿ ಖರೀದಿಸಿದ ಪತಿ : ಮನನೊಂದು ಪತ್ನಿ ಆತ್ಮಹತ್ಯೆ!

ಊಟಕ್ಕೆ ಪಾನಿ ಪುರಿ ಖರೀದಿಸಿದ ಪತಿಯೊಂದಿಗೆ ಅಸಮಾಧಾನಗೊಂಡ ಪತ್ನಿ ತನ್ನ ಜೀವವನ್ನೇ ಕೊನೆಗೊಳಿಸಿದ್ದಾಳೆ.

ಪುಣೆಯ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಊಟದ ವಿಚಾರವಾಗಿ ಜಗಳವಾಡಿ ತನ್ನ ಜೀವನವನ್ನು ಕೊನೆಗೊಳಿಸಿದ್ದಾಳೆ. ಶುಕ್ರವಾರ ರಾತ್ರಿ ಮಹಿಳೆ ಊಟವನ್ನು ತಯಾರಿಸಿದ ನಂತರ  ಪತಿ ‘ಪಾನಿ ಪುರಿ’ ತಂದಿದ್ದರಿಂದ ಜಗಳವಾಡಿದ್ದಾಳೆ. ಜಗಳದಿಂದಾಗಿ ದಂಪತಿಗಳಿಬ್ಬರು ಊಟ ಮಾಡದೆ ಮಲಗಿದ್ದಷ್ಟೇ ಮರುದಿನ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಕೆಯನ್ನು ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಆಕೆ ಕೊನೆಯುಸಿರೆಳೆದಿದ್ದಾಳೆ. ಸಂತ್ರಸ್ತೆ ಫೆಬ್ರವರಿ 1, 2019 ರಂದು ಘಹಿನಿನಾಥ್ ಅಂಬಾದಾಸ್ ಸರವಾಡೆ ಅವರನ್ನು ವಿವಾಹವಾದರು. ಅವರಿಗೆ 18 ವರ್ಷದ ಮಗನಿದ್ದಾನೆ.

ಆರಂಭದಲ್ಲಿ ಆರೋಪಿಗಳು ಸೊಲ್ಲಾಪುರದಲ್ಲಿ ವಾಸಿಸುತ್ತಿದ್ದರು. ಪುಣೆಯಲ್ಲಿ ಕೆಲಸ ಪಡೆಯಲು ಬಯಸಿದ್ದ ಪತ್ನಿ ಹಾಗೂ ಪತಿಯ ಮಧ್ಯೆ ನಿರಂತರ ಜಗಳವಾಗುತ್ತಿತ್ತು. ಇದರಿಂದಾಗಿ ಪತಿ ಹಾಗೂ ಪತ್ನಿ ಪುಣೆಗೆ ತೆರಳಿದ್ದರು. ಪುಣೆಗೆ ತೆರಳಿದ ನಂತರವೂ ಇವರಿಬ್ಬರ ನಡುವೆ ಜಗಳ ನಿಂತಿರಲಿಲ್ಲ.

ಶುಕ್ರವಾರ ಪತ್ನಿ ಊಟಕ್ಕಾಗಿ ಜಗಳವಾಡಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಹಿಳೆಯ ತಂದೆ ಪ್ರಕಾಶ್ ಪೈಸೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆಯ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಪೈಸೆ ಪೊಲೀಸರಿಗೆ ತಿಳಿಸಿದ್ದಾರೆ. ಪೈಸೆಯ ಆರೋಪಗಳನ್ನು ಆಧರಿಸಿ ಪೊಲೀಸರು ಆರೋಪಿಯ ವಿರುದ್ಧ ಸೆಕ್ಷನ್ 306 (ಆತ್ಮಹತ್ಯೆಗೆ ಕುಮ್ಮಕ್ಕು), 498 (ಎ) (ಕೌಟುಂಬಿಕ ದೌರ್ಜನ್ಯ), 323 (ಸ್ವಯಂಪ್ರೇರಣೆಯಿಂದ ನೋವನ್ನು ಉಂಟುಮಾಡುವುದು), 504 (ಶಾಂತಿ ಉಲ್ಲಂಘನೆಗೆ ಪ್ರಚೋದಿಸುವ ಉದ್ದೇಶದಿಂದ ಅವಮಾನ) ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights