ಕೇಂದ್ರ ಸಚಿವ, ಎಲ್‌ಜೆಪಿ ಸಂಸ್ಥಾಪಕ ರಾಮ್‌ ವಿಲಾಸ್‌ ಪಾಸ್ವಾನ್‌ ನಿಧನ!

ಕೇಂದ್ರ ಸಚಿವ, ಎಲ್‌ಜೆಪಿ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಇಂದು ನಿಧನರಾಗಿದ್ದಾರೆ. 74 ವರ್ಷದ ಪಾಸ್ವಾನ್‌ ಅವರು ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

ಅನಾರೋಗ್ಯದಿಂದ ಕೆಲ ವಾರಗಳ ಹಿಂದೆ ದೆಹಲಿಯ ಪೋರ್ಟೀಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ.

ಲೋಕ್ ಜನಶಕ್ತಿ ಪಾರ್ಟಿ(ಎಲ್‌ಜೆಪಿ) ಸಂಸ್ಥಾಪಕ, ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು 5 ದಶಕಗಳಿಂದ ರಾಜಕೀಯದಲ್ಲಿ ಸಕ್ರೀಯರಾಗಿದ್ದರು.

ಬಿಜೆಪಿ ಬೆಂಬಲಿಸಿ ಎನ್‌ಡಿಎ ವೈತ್ರಿಕೂಟದಲ್ಲಿ ಎಲ್‌ಜೆಪಿ ಪಕ್ಷದ ಪರವಾರಿ ಪಾಸ್ವಾನ್‌ ಅವರಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಸ್ಥಾನ ನೀಡಲಾಗಿತ್ತು.


ಇದನ್ನೂ ಓದಿ: ಅಂತರ್ಜಾತಿ ವಿವಾಹ: 29 ದಲಿತ ಕುಟುಂಬಗಳಿಗೆ ಊರಿನಿಂದ ಬಹಿಷ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights