ರಾಜ್ಯದಲ್ಲಿ 2.5 ಲಕ್ಷ ಯುವಜನರಿಗೆ ನಿರುದ್ಯೋಗ ಭತ್ಯೆ ನೀಡಲಾಗಿದೆ: ರಾಜಸ್ಥಾನ ಸರ್ಕಾರ

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಯುವ ಸಂಬಲ್ ಯೋಜನೆ ಅಡಿಯಲ್ಲಿ 2019 ರಿಂದ ಇಲ್ಲಿಯವರೆಗೆ ಅರ್ಹ 2,49,433 ಯುವಜನರಿಗೆ  842.40 ಕೋಟಿ ರೂ. ನಿರುದ್ಯೋಗ ಭತ್ಯೆ ನೀಡಿದ್ದೇವೆ ಎಂದು ರಾಜಸ್ಥಾನ ಸರ್ಕಾರ ತಿಳಿಸಿದೆ.

ಅರ್ಹ ನಿರುದ್ಯೋಗಿ ಯುವಕರ ಸಂಖ್ಯೆಯಲ್ಲಿ 1,81,286 ಅಭ್ಯರ್ಥಿಗಳು ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ) ವಿಭಾಗಕ್ಕೆ ಸೇರಿದವರು, 37,234 ಜನರು ಎಸ್‌ಸಿ ಮತ್ತು 30,913 ಎಸ್‌ಟಿ ಸಮುದಾಯಕ್ಕೆ ಸೇರಿದವರು ಎಂದು ಸರ್ಕಾರ ಸದನದಲ್ಲಿ ತಿಳಿಸಿದೆ.

ಬಿಜೆಪಿ ಶಾಸಕ ಸತೀಶ್ ಪೂನಿಯಾ ಕೇಳಿದ್ದ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಿರುವ ಸರ್ಕಾರ, ಯೋಜನೆ ಪ್ರಾರಂಭವಾದ ನಂತರ 2019 ರ ಫೆಬ್ರವರಿಯಿಂದ 2020 ರ ಡಿಸೆಂಬರ್ ವರೆಗೆ 4,56,678 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ.

ಒಂದು ವರ್ಷದಲ್ಲಿ ಫಲಾನುಭವಿಗಳ ಗರಿಷ್ಠ ಮಿತಿ 1.60 ಲಕ್ಷ ಎಂದು ಸರ್ಕಾರ ತನ್ನ ಉತ್ತರದಲ್ಲಿ ತಿಳಿಸಿದೆ.

ಇದನ್ನೂ ಓದಿ: ದೆಹಲಿ ಉಪಚುನಾವಣೆ; ನಾಲ್ಕರಲ್ಲಿ AAP, ಒಂದರಲ್ಲಿ ಕಾಂಗ್ರೆಸ್‌ ಗೆಲುವು; BJPಗೆ ಸೊನ್ನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights