ಕಾರ್ಪೋರೇಟ್‌ಗಳ ಒತ್ತಾಯದಿಂದ ಮೋದಿ ಸರ್ಕಾರ ಕೃಷಿ ನೀತಿಗಳನ್ನು ಜಾರಿಗೆ ತಂದಿದೆ: ಸೆಲ್ವ ಮುತ್ತು

ನಮ್ಮ ರೈತರು ದೆಹಲಿಯಲ್ಲಿ ಚಳಿಬಿಸಿಲೆನ್ನದೆ ಹೋರಾಟದಲ್ಲಿದ್ದಾರೆ. ಇಂತಹ ಹೋರಾಟಗಳು ದಕ್ಷಿಣ ಭಾರತದಲ್ಲಿ ಏಕೆ ಬಿಸಿಯೇರಲಿಲ್ಲ.. ಏಕೆ ಎಂಬ ಕಾರಣ ಇಂದು ನಮ್ಮ ಮುಂದಿದೆ. ನಿಜವಾಗಿಯೂ ಈ ಮೂರು ಕಾನೂನುಗಳು ರೈತರಿಗಾಗಿ ಮಾಡಿದ್ದ ಅಥವಾ ಕಾರ್ಪೋರೇಟ್‌ಗಳಿಗೆ ಮಾಡಿದ್ದ ಎಂಬ ಪ್ರಶ್ನೆ ಇದೆ ಎಂದು ತಮಿಳುನಾಡಿದ ತಮಿಳಗ ವಿವಸೈಗಳ್ ಸಂಘದ ಸೆಲ್ವ ಮುತ್ತು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಜಾಗೃತ ಕರ್ನಾಟಕ ಸಂಘಟನೆ ಆಯೋಜಿಸಿದ್ದ ‘ರೈತ ವಿರೋಧಿ ಕಾಯ್ದೆಗಳು: ಕರ್ನಾಟಕಕ್ಕಾಗದ ಅನ್ಯಾಯಕ್ಕೇನು ಪ್ರತಿಕ್ರಿಯೆ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಜವಾಗಿಯೂ ಇದು ರೈತರಿಗಾಗಿ ಬಂದ ಕಾನೂನಾಗಿದ್ದರೆ ಈ ಮಸೂದೆಗಳ ಅನುಕೂಲಗಳನ್ನು ಸಂಸತ್ನಲ್ಲಿ ಎಲ್ಲಾ ವಿಶ್ವವಿದ್ಯಾಲಯ ರೈತ ಸಂಘಟನೆಗಳು ಮತ್ತು ಎಲ್ಲಾಕೃಷಿ ತಜ್ಱರನ್ನು ಕರೆದು ಈ ಕಾನೂನಿನ ಕುರಿತು ತರ್ಕ ನಡೆಸಬೇಕು. ವಿರೋಧ ಪಕ್ಷದ ಎಲ್ಲಾ ನಾಯಕರ ಅಭಿಪ್ರಾಯವನ್ನು ಕೇಳಬೇಕಿತ್ತು. ನಂತರ ಈ ಮಸೂದೆಯನ್ನು ಜಾರಿ ಮಾಡಬಹುದಾಗಿತ್ತು. ಆದರೆ, ಇಷ್ಟು ಅವಸರವಾಗಿ ಕೊರೋನಾ ಕಾಲದಲ್ಲಿ ಇಷ್ಟು ಅವಸರವಾಗಿ ತಂದರು. ಇಂತಹ ಕಾನೂನನ್ನು ಯಾವ ರೈತರೂ ಕೇಳಿಲ್ಲ. ಸಂಸತ್ನ್ಲಲಿ ವಿರೋಧ ಪಕ್ಷದ ವಿರೋಧದ ನಡುವೆಯೂ ಜಾರಿಗೆ ತರಬೇಕಾದ ಅವಶ್ಯಕತೆ ಏನು? ಇದು ಯಾರು ಕಾರ್ಪೋರೇಟ್ ಕಂಪನಿ ಒತ್ತಾಯಕ್ಕೆ ತಂದ ಕಾನೂನು ಎಂದು ಕೇಂದ್ರ ಸರ್ಕಾರ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಧಾನಿ, ಹಣಕಾಸು ಸಚಿವರು, ಕೃಷಿ ಸಚಿವರು ಒಟ್ಟಾಗಿ ಈ ಕಾನೂನಿನ ಕುರಿತು ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಿಲ್ಲ. ಈ ಕಾನೂನು ಜಾರಿಗೆ ಬಂದರೆ ಎನೆಲ್ಲಾ ಅನುಕೂಲ ಎಂದು ರೈತರಿಗೆ ಆಗುವ ಅನುಕೂಲ ತಿಳಿಸಿಲ್ಲ. ಹೇಳಿದ್ದನ್ನಷ್ಟೇ ಮತ್ತೆ ಮತ್ತೆ ಹೇಳುತ್ತಾರೆಯೇ ವಿನಃ ಬೇರೆ ಕೆಲಸ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಎರಡನೇಯದಾಗಿ ಉತ್ತರ ಭಾರತಕ್ಕೂ ದಕ್ಷಿಣ ಭಾರತದ ಕೃಷಿ ಮಾರುಕಟ್ಟೆಗೂ ವ್ಯತ್ಯಾಸ ಇದೆ. ದಕ್ಷಿಣ ಭಾರತದಲ್ಲಿ ಗುತ್ತೆಗೆದಾರರು ತೋಟಗಳಿಗೆ ಬಂದು ಜಾಗವನ್ನು ಗುತ್ತೆಗೆ ಡೆದು ವ್ಯವಸಾಯ ಮಾಡುತ್ತಾರೆ. ಹರುಸಿನ, ನೆಲಗಡಲೆಯನ್ನು ಎಲಕ್ಕೆ ಬಿಟ್ಟು ವ್ಯಾಪಾರ ಮಾಡುತ್ತಾರೆ.

ಇದನ್ನೂ ಓದಿ: ಹೊಸ ಬೆಳೆ ಬೆಳೆಯಬಲ್ಲವ… ಹೊಸ ನಗರವನ್ನು ಸೃಷ್ಟಿಸಬಲ್ಲ! ದೆಹಲಿ ಗಡಿಯಲ್ಲಿ ನಗರ ನಿರ್ಮಿಸುತ್ತಿದ್ದಾರೆ ರೈತರು

ಉಳಿದ ಬೆಳಗಳನ್ನು ನೇರವಾಗಿ ಮಂಡಿಗಳಲ್ಲಿ ವ್ಯಾಪಾರ ಮಾಡುತ್ತಾರೆ. ಆದರೆ, ಪಂಜಾಬ್ ಹರಿಯಾನದಲ್ಲಿ ಎಲ್ಲವೂ ಮಂಡಿಯಲ್ಲೇ ವ್ಯಾಪಾರ ಮಾಡಬೇಕು. ಇಂ.ತಯಹ ಕಾನೂನಿನಿಂದ ಎಲ್ಲಾ ಮಂಡಿಗಳು ಅವಸಾನಕ್ಕೆ ಹೊರಡುತ್ತವೆ ಎಂಬ ಭಯ ಆ ಜನಗಳಲ್ಲಿವೆ. ಅಲ್ಲದೆ ಕಾರ್ಪೊರೇಟ್ ಕಂಪೆನಿಗಳಿಗಳ ಜೊತೆ ಒಪ್ಪಂದ ಮಾಡಿಕೊಂಡು ವ್ಯವಸಾಯ ಮಾಡಬೇಕಾದ ಸ್ಥಿತಿ ಬರುತ್ತದೆ ಎಂಬ ಭಯ ಅವರಲ್ಲಿದೆ ಎಂದು ಸೆಲ್ವ ಮುತ್ತು ಹೇಳಿದ್ದಾರೆ.

ಒಂದು ವೇಳೆ ತಮ್ಮ ಬೆಳೆ ಸರಿಯಿಲ್ಲ ಎಂದು ಕಾರ್ಪೋರೇಟ್ ಕಂಪೆನಿ ಹೇಳಿದರೆ ಆ ರೈತರ ಕೋರ್ಟ್ಗೆ ಸಹ ಹೋಗಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿ ದಕ್ಷಿಣ ಭಾರತದ ರೈತರಿಗೆ ಬರುವವರೆಗೆ ಈ ಕಾನೂನಿನ ಬಿಸಿ ಇಲ್ಲಿ ರೈತರಿಗೆ ನಾಟುವುದು ಕಷ್ಟವಿದೆ. ಸರ್ಕಾರ ಎಂಎಸ್ಪಿ ನೀಡುವ ಭರವಸೆ ನೀಡಿದೆ. ಇದು ಹೋರಾಟದ ಫಲ. ಈ ಹಿಂದೆ ಈ ಕುರಿತು ಸರ್ಕಾರ ಮಾತೇ ಆಡಿರಲಿಲ್ಲ. ಹೋರಾಟದ ನಂತರ ತಿದ್ದುಪಡಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.

2021ರಲ್ಲಾದರೂ ನಡೆಯುವ ಮಾತುಕತೆಯಲ್ಲಿ ಸರ್ಕಾರ ತಮ್ಮ ಗೌರವವನ್ನು ಕಾಪಾಡಿಕೊಳ್ಳುವ ಸಲುವಾಗಿ ರೈತರ ಕೂಗಿಗೆ ಕಿವಿಗೊಡಬೇಕಿದೆ. ರೈತರಿಗೆ ಒಳತನ್ನು ಮಾಡುವ ಸಲುವಾಗಿ ಈ ಹೋರಾಟಕ್ಕೆ ಒಂದು ಅಂತ್ಯ ನೀಡಬೇಕಿದೆ. ಪೊಂಗಲ್ ಹಬ್ಬ ರೈತರಿಗೆ ಒಳಿತಾಗಲಿ ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾಗೃತ ಕರ್ನಾಟಕದ ವಾಸು ಹೆಚ್‌ವಿ, ಸುನೀಲ್ ಸಿರಸಂಗಿ, ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ, ಲೇಖಕರಾದ ಎ ನಾರಾಯಣ, ನಾಗೇಗೌಡ ಕೀಲಾರ, ವಕೀಲರಾದ  ರಾಜಲಕ್ಷ್ಮಿ ಮತ್ತು ಇತರರು ಉಪಸ್ಥಿತರಿದ್ದರು.


ಇದನ್ನೂ ಓದಿ: ರೈತ ವಿರೋಧಿ ಕೃಷಿ ನೀತಿಗಳು: ಪ್ರಧಾನಿ ಮೋದಿ V/S ಮುಖ್ಯಮಂತ್ರಿ ಮೋದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights