Boxing Day Test: ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ ನಲ್ಲಿ ಉಮೇಶ್ ಯಾದವ್ ಗೆ ಗಾಯ…!

ಸೋಮವಾರ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಗಾಯಗೊಂಡಿದ್ದಾರೆ. 33 ವರ್ಷದ ಉಮೇಶ್ ಅವರ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಮೈದಾನದಿಂದ ಹೊರಗುಳಿದಿದ್ದಾರೆ. ತಕ್ಷಣ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

“ಉಮೇಶ್ ಯಾದವ್ ತನ್ನ 4 ನೇ ಓವರ್ ಬೌಲಿಂಗ್ ಮಾಡುವಾಗ ತನ್ನ ಕಾಲು ನೋವಿನ ಬಗ್ಗೆ ದೂರು ನೀಡಿದ್ದರು. ಇದನ್ನು ಬಿಸಿಸಿಐ ವೈದ್ಯಕೀಯ ತಂಡ ಸ್ಪಷ್ಟಪಡಿಸಿದೆ. ಅವರನ್ನು ಈಗ ಸ್ಕ್ಯಾನ್‌ಗಾಗಿ ಕರೆದೊಯ್ಯಲಾಗುತ್ತಿದೆ ”ಎಂದು ಬಿಸಿಸಿಐ ಮಾಧ್ಯಮ ತಂಡ ಹೇಳಿಕೆ ಬಿಡುಗಡೆ ಮಾಡಿದೆ.

ಸೋಮವಾರ ಮೂರನೇ ದಿನದಾಟ ಆಡುತ್ತಿದ್ದಾಗ 4ನೇ ಓವರ್‌ ಎಸೆಯುತ್ತಿದ್ದ ಯಾದವ್, ಕಾಲಿನ ಹಿಂಭಾಗದ ಸ್ನಾಯು ಸೆಳೆತಕ್ಕೀಡಾಗಿ ಮೈದಾನದಿಂದ ಹೊರ ನಡೆದರು. ಆ ಬಳಿಕ ವೇಗಿ ಮೊಹಮ್ಮದ್ ಸಿರಾಜ್ ಅವರು ಯಾದವ್ ಅವರ ಮೂರು ಎಸೆತಗಳನ್ನು ಪೂರ್ಣಗೊಳಿಸಿದರು.

ಬೌಲಿಂಗ್‌ ಮಾಡುತ್ತಿದ್ದಾಗ ಮಧ್ಯದಲ್ಲಿ ಉಮೇಶ್ ತನಗೆ ಕಾಲಿನ ಹಿಂಭಾಗದ ಸ್ನಾಯು (ಕಾಫ್) ನೋವಾಗುತ್ತಿರುವುದಾಗಿ ದೂರಿತ್ತರು. ಹೀಗಾಗಿ ಅವರನ್ನು ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಉಪಚರಿಸಿದರು. ನಂತರ ಯಾದವ್ ಅವರನ್ನು ಸ್ಕ್ಯಾನಿಂಗ್‌ಗಾಗಿ ಕರೆದೊಯ್ಯಲಾಗಿದೆ. ಮುಂದಿನ ಪಂದ್ಯದಲ್ಲಿ ಯಾದವ್ ಆಡುತ್ತಾರೋ ಇಲ್ಲವೋ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

3.3 ಓವರ್‌ ಎಸೆದಿದ್ದ ಯಾದವ್ 1 ವಿಕೆಟ್ ಪಡೆದಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 72.3 ಓವರ್‌ಗೆ 195 ರನ್ ಬಾರಿಸಿದ್ದರೆ, ನಾಯಕ ಅಜಿಂಕ್ಯ ರಹಾನೆ ಶತಕದೊಂದಿಗೆ ಭಾರತ 115.1 ಓವರ್‌ಗೆ 326 ರನ್ ಬಾರಿಸಿ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಈಗ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights