ಪರ್ವತ ಹತ್ತುವ ಮೂಲಕ ನಟ ಸೋನು ಸೂದ್ ಗೆ ಗೌರವ ಸಲ್ಲಿಸಿದ ಉಮಾ ಸಿಂಗ್!

ಪರ್ವತಾರೋಹಿಯೊಬ್ಬರು ಆಫ್ರಿಕಾದ ಟಾಂಜಾನಿಯಾದ ಮೌಂಟ್ ಕಿಲಿಮಂಜಾರೋ ಪರ್ವತವನ್ನು ಹತ್ತುವ ಮೂಲಕ ತಮ್ಮ ಸಾಧನೆಯನ್ನು ನಟ ಸೋನು ಸೂದ್ ಗೆ ಅರ್ಪಿಸಿದ್ದಾರೆ.

ಹೌದು… ಸೈಕ್ಲಿಸ್ಟ್ ಮತ್ತು ಪರ್ವತಾರೋಹಿ ಉಮಾ ಸಿಂಗ್ ಅವರು ಆಫ್ರಿಕಾದ ಟಾಂಜಾನಿಯಾದ ಮೌಂಟ್ ಕಿಲಿಮಂಜಾರೋ ಪರ್ವತವನ್ನು ಹತ್ತುವ ಮೂಲಕ ತಮ್ಮ ಸಾಧನೆಯನ್ನು ಬಾಲಿವುಡ್ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಗೆ ಅರ್ಪಿಸಿದ್ದಾರೆ.

ಕೊರೊನಾ ಸಂಕಷ್ಟದಲ್ಲಿರು ಜನರಿಗೆ ಸಹಾಯ ಮಾಡಿದ ನಟ ಸೋನ್ ಸೂದ್ ಅವರನ್ನು ರಿಯಲ್ ಹೀರೋ ಅಂತಲೇ ಕರೆಯಲಾಗುತ್ತದೆ. ಸಂಕಷ್ಟದಲ್ಲಿದ್ದ ಜನರ ಕೈಹಿಡಿದ ನಟ ಸೋನು ಸೂದ್ ಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಇವರೊಂದಿಗೆ ಮೌಂಟೆನರ್ ಉಮಾ ಸಿಂಗ್ ಪರ್ವತ ಹತ್ತುವ ಮೂಲಕ ಗೌರವ ಸಲ್ಲಿಸಿದ್ದಾರೆ.

ಮೊದಲಿಗೆ ಉಮಾಸಿಂಗ್ ರವರು ಕಿಲಿಮಂಜಾರೋ ಬೇಸ್ ಪಾಯಿಂಟ್ ವರೆಗೂ ಸೈಕ್ಲಿಂಗ್ ಮಾಡಿ ನಂತರ ಮೇಲಕ್ಕೆ ನಡೆದುಕೊಂಡು ಹೋಗಿದ್ದಾರೆ. ಬಳಿಕ ಪರ್ವತವನ್ನು ತಲುಪಿದ ಅವರು ಭಾರತದ ನಿಜವಾದ ಹೀರೋ ಅವರ ಫೋಟೋ ಹಿಡಿದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ತಮ್ಮ ಸಾಧನೆಯನ್ನು ಸೋನು ಸೂದ್ ಗೆ ಅರ್ಪಿಸಿದ ಉಮಾಸಿಂಗ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವೀಡಿಯೋವನ್ನು ಹಂಚಿಕೊಂಡ ಉಮಾಸಿಂಗ್ ನಾನು ಮೊದಲ ಬಾರಿಗೆ ನಿಜವಾದ ನಾಯಕನನ್ನು ಭೇಟಿ ಮಾಡಿದ್ದೇನೆ. ಅವರಿಗಾಗಿ ನಾನು ಏನಾದರೂ ಮಾಡಲು ಬಯಸುತ್ತೇನೆ. ಅವರು ತಮ್ಮ ಜೀವಕ್ಕುಂಟಾಗುವ ಅಪಾಯವನ್ನು ಮರೆತು ದೇಶದ ಪರವಾಗಿ ನಿಂತರು. ನೀವು ನಮ್ಮ ದೇಶದ ನಿಜವಾದ ಹೀರೋ. ನೀವು ಭಾರತೀಯರಿಗೆಲ್ಲ ಹಿರಿಯ ಅಣ್ಣ ಎಂದು ಬರೆದಿದ್ದಾರೆ.

ಸೋನು ಸೂದ್ ಮುಂದೆ ಐತಿಹಾಸಿಕ ಸಾಹಸ ಚಿತ್ರ ಪೃಥ್ವಿರಾಜ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಪೃಥ್ವಿರಾಜ್ ರಾಸೋ, ಪೃಥ್ವಿರಾಜ್ ಚೌಹಾಣ್ ಅವರ ಜೀವನದ ಕುರಿತಾದ ಬ್ರಜ್ ಭಾಷಾ ಮಹಾಕಾವ್ಯವನ್ನು ಆಧರಿಸಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರುಷಿ ಚಿಲ್ಲರ್ ಅವರ ಚೊಚ್ಚಲ ಚಿತ್ರವಾಗಿದೆ. ಇದರಲ್ಲಿ ವಿಜಯ್ ಆಂಟನಿ, ಸುರೇಶ್ ಗೋಪಿ, ರಮ್ಯಾ ನಂಬೀಸನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights