ಒಡಿಶಾದಲ್ಲಿ ಅಪರೂಪದ ಕಪ್ಪು ಹುಲಿ ದೃಶ್ಯ ಕಂಡು ಬೆರಗಾದ ನೆಟ್ಟಿಗರು : ಫೋಟೋಸ್ ವೈರಲ್!

ಒಡಿಶಾದಲ್ಲಿ ಅಪರೂಪದ ಕಪ್ಪು ಹುಲಿಯೊಂದು ಛಾಯಾಗ್ರಾಹಕನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೌಮೆನ್ ಬಾಜಪೇಯಿ ಕಳೆದ ವರ್ಷ ನಂದಂಕಣನ್ ಅಭಯಾರಣ್ಯದಲ್ಲಿದ್ದಾಗ ಅಳಿವಿನ ಅಂಚಿನಲ್ಲಿರುವ ಮೆಲನಿಸ್ಟಿಕ್ ಹುಲಿಯನ್ನು ಸೆರೆ ಹಿಡಿದಿದ್ದಾರೆ.

ಒಡಿಶಾದಲ್ಲಿ ಮಾತ್ರ ಕಂಡುಬಂದ ಈ ಮೆಲಾನಿಸ್ಟಿಕ್ ಹುಲಿ ಬಂಗಾಳ ಹುಲಿಗಳಿಗಿಂತ ಕಪ್ಪು ಪಟ್ಟೆಗಳು ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಅಪರೂಪದ ಜೀನ್ ಪೂಲ್ ಹೊಂದಿದೆ.  ಈ ‘ಕಪ್ಪು ಹುಲಿ’ಗಳು ಬೆರಳೆಣಿಕೆಯಷ್ಟು ಮಾತ್ರ ಇಂದಿಗೂ ಉಳಿದಿವೆ.

ಪಶ್ಚಿಮ ಬಂಗಾಳದ ಪನ್ಸ್ಕುರಾ ಮೂಲದ ಬಾಜಪೇಯಿ ಕಳೆದ ವರ್ಷ ಫೆಬ್ರವರಿಯಲ್ಲಿ ನಂದಂಕಣನ್ ನಲ್ಲಿ ಪಕ್ಷಿ ವೀಕ್ಷಣೆ ಮಾಡುತ್ತಿದ್ದಾಗ ಮೆಲನಿಸ್ಟಿಕ್ ಹುಲಿ ಕಾಣಿಸಿಕೊಂಡಿತು. ಅವನು ಹುಲಿಯನ್ನು ನೋಡುತ್ತಾನೆಂದು ಅವನಿಗೆ ಮೊದಲಿಗೆ ತಿಳಿದಿರಲಿಲ್ಲ.

“ನಾನು ಮರಗಳಲ್ಲಿ ವಿವಿಧ ಪಕ್ಷಿಗಳು ಮತ್ತು ಕೋತಿಗಳನ್ನು ನೋಡುತ್ತಿರುವಾಗ ಇದ್ದಕ್ಕಿದ್ದಂತೆ ಹುಲಿಯಂತೆ ಕಾಣುವ ಪ್ರಾಣಿಯನ್ನು ನೋಡಿದೆ. ನಂತರ ಅದು ನಿಜವಾಗಲೂ ಹುಲಿ ಎನ್ನುವುದು ತಿಳಿಯಿತು. ಆದರೆ ಅದು ಸಾಮಾನ್ಯ ಹುಲಿಯಂತೆ ಕಾಣಲಿಲ್ಲ” ಎಂದು ಶ್ರೀ ಬಾಜಪೇಯಿ ಮಾಧ್ಯಮಕ್ಕೆ ತಿಳಿಸಿದ್ದಾರೆ. “ಹಿಂದೆ ನನಗೆ ಮೆಲನಿಸ್ಟಿಕ್ ಹುಲಿಗಳ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ಅದು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿತು. ತಕ್ಷಣ ಡಿಜಿಟಲ್ ಕ್ಯಾಮೆರಾವನ್ನು ತೆಗೆದು ಕಪ್ಪು ಹುಲಿಯ ಕೆಲವು ಚಿತ್ರಗಳನ್ನು ತೆಗೆಯುವಲ್ಲಿ ಯಶಸ್ವಿಯಾದೆ. ಕೆಲವು ಸೆಕೆಂಡುಗಳ ಕಾಲ ಉಳಿದು ಮರ ಮಧ್ಯೆ ನಡೆದು ಹೋಯಿತು.” ಎಂದಿದ್ದಾರೆ.

“ನಾನು ಈ ಮೊದಲು ಕಾಡಿನಲ್ಲಿ ಮತ್ತು ಸೆರೆಯಲ್ಲಿ ಅನೇಕ ಹುಲಿಗಳನ್ನು ನೋಡಿದ್ದೇನೆ. ಆದರೆ ಇದು ಸಂಪೂರ್ಣವಾಗಿ ವಿಭಿನ್ನವಾಗಿತ್ತು” ಎಂದು ಅವರು ಹೇಳುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಕಪ್ಪು ಹುಲಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights