ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್‌ ಖಾತೆ ನಿಷೇಧ; 45ನೇ ಅಧ್ಯಕ್ಷ ಎಂಬ ಹೊಸ ವೆಬ್‌ಸೈಟ್‌ ತೆರೆದ ಟ್ರಂಪ್‌!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ, ಮಾಜಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸೋಮವಾರ ‘ಅಮೆರಿಕದ 45 ನೇ ಅಧ್ಯಕ್ಷ’ ಎಂಬ ಹೊಸ ಅಧಿಕೃತ ವೆಬ್‌ಸೈಟ್ಅನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದ್ದಾರೆ.

ವೆಬ್‌ಸೈಟ್‌ನಲ್ಲಿ ತಮ್ಮ ಬೆಂಬಲಿಗರು ಈವೆಂಟ್‌ಗಳಲ್ಲಿ ಭಾಗವಹಿಸಲು ಕರೆಕೊಡಲುಉ, ಮನವಿ ಮಾಡಿಕೊಳ್ಳಲು, ಪತ್ರಗಳನ್ನು ಹಂಚಿಕೊಳ್ಳಲು ಮತ್ತು ವೈಯಕ್ತಿಕ ಶುಭಾಶಯಗಳನ್ನು ಕೋರಲು ಅವಕಾಶವಿದೆ ಎಂದು ಅವರು ಹೇಳಿರುವುದಾಗಿ ದಿ ಹಿಲ್ ವರದಿ ಮಾಡಿದೆ.

ಟ್ರಂಪ್ ಅವರ ಕಚೇರಿಯ ಸಂಕ್ಷಿಪ್ತ ಹೇಳಿಕೆಯ ಪ್ರಕಾರ, ಮಾಜಿ ಮೊದಲ ದಂಪತಿಗಳು “ಅಮೆರಿಕಾದ ಜನರ ನಿರಂತರ ಬೆಂಬಲದೊಂದಿಗೆ ಅವರು ಬಲಗೊಳ್ಳುತ್ತಾರೆ ಮತ್ತು ದಂಪತಿಗಳು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಬಯಸುತ್ತಾರೆ” ಎಂದು ಹೇಳಿದೆ.

45office.com ಎಂದು ಕರೆಯಲ್ಪಡುವ ವೆಬ್‌ಸೈಟ್, ಶ್ವೇತಭವನದಲ್ಲಿ ಟ್ರಂಪ್ಸ್ ಕಳದ ಸಮಯವನ್ನು ವಿವಸುವ ಪುಟವನ್ನು ಹೊಂದಿದೆ ಮತ್ತು ಬೆಂಬಲಿಗರು ಮಾಜಿ ಅಧ್ಯಕ್ಷರಿಗೆ ಕಾಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತೊಂದು ಪುಟವನ್ನು ಹೊಂದಿದೆ ಎಂದು ದಿ ಹಿಲ್ ವರದಿ ಮಾಡಿದೆ.

“ಈ ಮೂಲಕ, ಟ್ರಂಪ್ ಅವರು ದೇಶದ ದುಡಿಯುವ ಜನರೊಂದೊಂದಿಗೆ ಅವರ ಸುರಕ್ಷತೆ, ಘನತೆ, ಸಮೃದ್ಧಿ ಮತ್ತು ಶಾಂತಿಯಿಂದ ಬದುಕುವ ಹಕ್ಕಿಗಾಗಿ ದಣಿವರಿಯದೆ ದುಡಿಯುವ ಚಾಂಪಿಯನ್ ಆಗಿ ಉಳಿಯುತ್ತಾರೆ” ಎಂದು ವೆಬ್‌ಸೈಟ್‌ನ ಮುಖಪುಟದಲ್ಲಿ ಸಂದೇಶವನ್ನು ಹೊಂದಿದೆ.

ಈ ವರ್ಷದ ಜನವರಿ 6 ರಂದು ಯುಎಸ್ ಕ್ಯಾಪಿಟಲ್‌ನಲ್ಲಿ ನಡೆದ ಮಾರಣಾಂತಿಕ ದಂಗೆಯ ನಂತರ ಟ್ರಂಪ್ ಅವರ ಖಾತೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಟ್ವಿಟರ್ ಮತ್ತು ಫೇಸ್‌ಬುಕ್‌ಗಳು ನಿಷೇಧಿಸಿವೆ. ಇದಾದ ನಂತರ ಅವರು ವೆಬ್‌ಸೈಟ್‌ ಪ್ರಾರಂಭಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಫ್ಲೋರಿಡಾದಲ್ಲಿ ಟ್ರಂಪ್ ತಮ್ಮದೇ ಆದ ಅಧ್ಯಕ್ಷ ಕಚೇರಿಯನ್ನು ಸ್ಥಾಪಿಸಿಕೊಂಡಿದ್ದಾರೆ. ಆದರೆ 2024 ರಲ್ಲಿ ಅವರು ಮತ್ತೆ ಶ್ವೇತಭವನಕ್ಕಾಗಿ ಸ್ಪರ್ಧಿಸಬಹುದೆಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಬಗ್ಗೆ ಅವರು ಸದ್ಯ ಮೌನವಾಗಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಮೇಲೆ ಗ್ಯಾಂಗ್‌ರೇಪ್‌; ಸಂಬಂಧಿಕರನ್ನೇ ಅತ್ಯಾಚಾರ ಎಸಗಲು ಬೆದರಿಕೆ; ರಣರಂಗವಾಗಿದೆ ಇಥಿಯೋಪಿಯಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights