ಯೋಧರಿಗೆ ಬುಟೆಲ್‌ ಪ್ರೂಫ್‌ ಇಲ್ಲದ ಟ್ರಕ್‌; ಪ್ರಧಾನಿಗೆ ವಿಶೇಷ ವಿಮಾನ: ರಾಹುಲ್‌ಗಾಂಧಿ ವಾಗ್ದಾಳಿ

ನಮ್ಮ ಸೈನಿಕರನ್ನು ಬುಲೆಟ್ ಪ್ರೂಫ್ ರಹಿತ ಟ್ರಕ್‌ಗಳಲ್ಲಿ ಸಾವಿನ ಹಂಚಿಗೆ ಹುತಾತ್ಮರಾಗಲು ಕಳುಹಿಸಲಾಗುತ್ತಿದೆ. ಆದರೆ, ಪ್ರಧಾನ ಮಂತ್ರಿಗಳಿಗಾಗಿ 8,400 ಕೋಟಿ ರೂಗಳನ್ನು ಮೀಸಲಿಟ್ಟಿದೆ ಇದು ನ್ಯಾಯವೇ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಪ್ರಶ್ನಿಸಿದ್ದಾರೆ.

ವಿವಿಐಪಿಗಳಿಗಾಗಿ ಎರಡು ವಿಶೇಷ ವಿಮಾನ ಖರೀದಿಸಿರುವ ಕೇಂದ್ರ ಸರ್ಕಾರವನ್ನು ವಿರೋಧಿಸಿ ರಾಹುಲ್‌ಗಾಂಧಿ ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ವಿಡಿಯೋದಲ್ಲಿ, ಚಲಿಸುತ್ತಿರುವ ವಾಹನದೊಳಗೆ ಕುಳಿತು ಮಾತನಾಡುತ್ತಿರುವ ಹಲವಾರು ಸೈನಿಕರು, ಬುಲೆಟ್‌ ಫ್ರೂಫ್‌ ಇಲ್ಲದ ಟ್ರಕ್‌ಗಳಲ್ಲಿ ಜನರನ್ನು ಕಳುಹಿಸುವುದು ಎಷ್ಟು ಅಪಾಯಕಾರಿ. ನಮ್ಮ ಅಧಿಕಾರಿಗಳು ಇಂತಹ ವಾಹನದಲ್ಲಿ ಕಳುಹಿಸಿ ನಮ್ಮ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಆರೋಪಿಸುತ್ತಾ ಚರ್ಚಿಸುತ್ತಿರುವುದು ಕಂಡುಬಂದಿದೆ.

ಒಂದೆಡೆ, ಪ್ರಧಾನಿ ಮೋದಿ ₹ 8,000 ಕೋಟಿ ಗಳ ಎರಡು ವಿಮಾನಗಳನ್ನು ಖರೀದಿಸಿದ್ದಾರೆ. ಮತ್ತೊಂದೆಡೆ, ಚೀನಾ ನಮ್ಮ ಗಡಿಯಲ್ಲಿದೆ ಮತ್ತು ನಮ್ಮ ಗಡಿಗಳನ್ನು ರಕ್ಷಿಸಲು ನಮ್ಮ ಭದ್ರತಾ ಪಡೆಗಳು ಕಠಿಣ ಶೀತವನ್ನು ಎದುರಿಸುತ್ತಿವೆ ಎಂದು ಹೇಳಿದ್ದರು.


ಇದನ್ನೂ ಓದಿ: ಮೋದಿಯವರೇ ಸುರಂಗದಲ್ಲಿ ಕೈ ಬೀಸುವುದನ್ನು ನಿಲ್ಲಿಸಿ; ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಿ: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights