ಟಿಆರ್‌ಪಿ ಹಗರಣ: ಗೋಸ್ವಾಮಿಗೆ ಒಂದೆಡೆ ಪೊಲೀಸ್‌, ಮೊತ್ತೊಂದೆಡೆ ಇಂಡಿಯಾ ಟುಡೆ ಚಾರ್ಜ್‌!

ಪತ್ರಕರ್ತ ಮುಸ್ತಫಾ ಶೇಖ್ ಅವರೊಂದಿಗೆ ಸೆಕ್ಯುರಿಟಿ ಗಾರ್ಡ್‌ಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ರಿಪಬ್ಲಿಕ್ ಟಿವಿ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ತಮ್ಮ ಮನೆಯಿಂದ ಹೊರಗೆ ಹೊರಟಾಗ ಅವರನ್ನು ಪತ್ರಕರ್ತರು ಪ್ರಶ್ನಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ.

ವಿಡಿಯೋ ನೋಡಲು ಕ್ಲಿಕ್ಕಿಸಿ: https://twitter.com/AzyConTrolI/status/1314201077265309696?s=20

ಗುರುವಾರ, ರಿಪಬ್ಲಿಕ್ ಟಿವಿ ಮತ್ತು ಇತರ ಎರಡು ಮುಂಬೈನ ಸ್ಥಳೀಯ ಚಾನೆಲ್‌ಗಳು ಟೆಲಿವಿಷನ್ ರೇಟಿಂಗ್‌ಗಳನ್ನು ಮ್ಯಾನಿಪುಲೇಟ್‌ ಮಾಡಲು ಪ್ರಯತ್ನಿಸಿದೆ. ಟೆಲಿವಿಷನ್ ರೇಟಿಂಗ್ ಪಾಯಿಂಟ್ ಗೇಮಿಂಗ್‌ಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್‌ ಮುಖ್ಯಸ್ಥ ಪರಮ್‌ ಬಿರ್ ಸಿಂಗ್‌ ಹೇಳಿದ್ದಾರೆ.ಈ ಕುರಿತಂತೆ, ರಿಪಬ್ಲಿಕ್‌ ಟಿವಿ ಮತ್ತು ಇಂಡಿಯಾ ಟುಡೆ ನ್ಯೂಸ್‌ ಚಾನೆಲ್‌ಗಳು ಪರಸ್ಪರ ವಾಗ್ವಾದಕ್ಕಿಳಿದಿವೆ.

ಕಾರ್ಯಕ್ರಮಗಳು ಮತ್ತು ಚಾನೆಲ್‌ಗಳ ವೀಕ್ಷಕರ ಸಂಖ್ಯೆಯನ್ನು ಅಳೆಯುವುದಕ್ಕಾಗಿ ಟಿಆರ್‌ಪಿಯನ್ನು ಬಳಸಲಾಗುತ್ತದೆ. ಟಿಆರ್‌ಪಿಯಿಂದಾಗಿ ಜಾಹೀರಾತುದಾರರು ತಮ್ಮ ಜಾಹೀರಾತುಗಳನ್ನು ಯಾವ ಚಾನೆಲ್‌ಗೆ ನೀಡಬೇಕು ಎಂಬುದನ್ನೂ ನಿರ್ಧರಿಸಲು ಸಹಾಯವಾಗುತ್ತದೆ. ಹಾಗಾಗಿ ರಿಪಬ್ಲಿಕ್‌ ಟಿವಿ ಮತ್ತು ಎರಡು ಸ್ಥಳೀಯ ಚಾನೆಲ್‌ಗಳು ಟಿಆರ್‌ಪಿ ಗೇಮಿಂಗ್‌ನಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿ ಚಾನೆಲ್‌ಗಳ ವಿರುದ್ಧ ಹನ್ಸಾ ಎಂಬ ಸ್ವತಂತ್ರ ಸಂಸ್ಥೆ ದೂರು ನೀಡಿದೆ.

ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಗೋಸ್ವಾಮಿ, ಗೇಮಿಂಗ್‌ನಲ್ಲಿ ಭಾಗಿಯಾಗಿರುವುದು ಇಂಡಿಯಾ ಟುಡೆ ಸುದ್ದಿವಾಹಿನಿ, ರಿಪಬ್ಲಿಕ್‌ ಟಿವಿ ಅಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಇಂಡಿಯಾ ಟುಡೆ ಪತ್ರಕರ್ತರು ಹಿರಿಯ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದ್ದು, ಟಿಆರ್‌ಪಿ ಹಗರಣ ಮತ್ತು ಇಂಡಿಯಾ ಟುಡೆ ಟಿವಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಇಂಡಿಯಾ ಟುಡೆ ಸುದ್ದಿ ವಾಹಿನಿಯ ವಿರುದ್ಧ ಆರೋಪ ಮಾಡಿರುವ ಅನರ್ಬ್‌ ಗೋಸ್ವಾಮಿಯ ವಿರುದ್ಧ ಸಿಟ್ಟಾಗಿರುವ ಇಂಡಿಯಾ ಟುಡೆ ವರದಿಗಾರರು ಸಿಟ್ಟಾಗಿದ್ದಾರೆ. ಆರೋಪದ ಬಗ್ಗೆ ಗೋಸ್ವಾಮಿ ಅವರನ್ನು ಮಾತನಾಡಿಸಲು ಇಂಡಿಯಾ ಟುಡೆಯ ವರದಿರಾರರು ಅವರ ಮನೆಗೆ ತೆರಳಿದ್ದು, ಗೋಸ್ವಾಮಿಯವರು ವರದಿಗಾರರಿಗೆ ಸಿಗದೆ ಎಸ್ಕೇಪ್‌ ಆಗಿದ್ದಾರೆ.


ಇದನ್ನೂ ಓದಿ: ಭೀಮಾ ಕೋರೆಗಾಂವ್‌: ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧನ: ವಿಡಿಯೋದಲ್ಲಿ ಅವರು ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights