ಕ್ಷುಲ್ಲಕ ಜಗಳ: ಯುವಕನ ಮೇಲೆ ಅಮಾನಷ ಹಲ್ಲೆ; ಯುವಕ ಸಾವು!

ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ, ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದ ಸಣ್ಣ ಜಗಳದಲ್ಲಿ 18 ವರ್ಷದ ಯುವಕನನ್ನು ಗುಂಪೊಂದು ಅಮಾನಷವಾಗಿ ಥಳಿಸಿದ್ದಾರೆ. ತೀವ್ರ ಪೆಟ್ಟು ತಿಂದಿದ್ದ ಯುವಕ ಸಾವನ್ನಪ್ಪಿದ್ದಾನೆ.

ಸಾವನ್ನಪ್ಪಿದ ಯುವಕ ಜಬ್ಬರ್ ಎಂದು ಹೇಳಲಾಗಿದೆ. ಆತ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಜ್ಯೂಸ್ ಸ್ಟಾಲ್‌ನಲ್ಲಿ ಕೆಲವು ಜನರೊಂದಿಗೆಜಗಳ ಮಾಡಿಕೊಂಡಿದ್ದ. ಆ ಗುಂಪಿನಲ್ಲಿದ್ದ ಐವರು ಆತನನ್ನು ಅಮಾನುಷವಾಗಿ ಥಳಿಸಿದ್ದಾರೆ ಎಂದು ನಗರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಚಂದ್ರ ಮಿಶ್ರಾ ತಿಳಿಸಿದ್ದಾರೆ.

ತೀಕ್ಷ್ಣವಾದ ಆಯುಧ ಮತ್ತು ಕಡ್ಡಿಗಳಿಂದ ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಯುವಕನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆತ ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾನೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ. ಈವರೆಗೆ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಪೊಲೀಸ್‌ ಸೇರಿ ನಾಲ್ವರ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights