ತ್ರಿಪುರ ಬಿಜೆಪಿಯಲ್ಲಿ ಭಿನ್ನಮತ: ಮುಖ್ಯಮಂತ್ರಿ ಪದಚ್ಯುತಿಗೆ 12 ಶಾಸಕರ ಒತ್ತಾಯ!

ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇವ್ ಅವರನ್ನು ಉಚ್ಚಾಟಿಸುವಂತೆ ಒತ್ತಾಯಿಸಿ ರಾಜ್ಯದ ಬಿಜೆಪಿ ಬಂಡಾಯ ಶಾಸಕರ ಗುಂಪು ನವದೆಹಲಿಯಲ್ಲಿ ಬೀಡುಬಿಟ್ಟಿದೆ.

ದೇವ್‌ ಅವರ ಸರ್ವಾಧಿಕಾರಿ ಆಡಳಿತದಿಂದಾಗಿ  ರಾಜ್ಯದ ಆರೋಗ್ಯ ರಕ್ಷಣೆ, ಆಡಳಿತಾತ್ಮಕ ಅಸಮರ್ಥತೆ ಮತ್ತು ಹಲವಾರು ಸಮಸ್ಯೆಗಳ ವಿರುದ್ಧ ಅಸಮಾಧಾನ ಮತ್ತು ಕೋಪ ಹೆಚ್ಚುತ್ತಿದೆ ಎಂದು  ಭಿನ್ನಮತೀಯ ಶಿಬಿರದ ಮೂಲಗಳು ತಿಳಿಸಿವೆ.

ಮಾಜಿ ಆರೋಗ್ಯ ಸಚಿವ ಸುದೀಪ್‌ ರಾಯ್‌ ಬರ್ಮನ್‌ ನೇತೃತ್ವದ 12 ಭಿನ್ನಮತೀಯ ಶಾಸಕರ ತಂಡವು ಬಿಪ್ಲಬ್‌ ವಿರುದ್ಧ ಸಮರ ಸಾರಿದ್ದಾರೆ. ಹೀಗಾಗಿ 12 ಭಿನ್ನಮತೀಯ ಶಾಸಕರ ತಂಡವು ಹೊಸದಿಲ್ಲಿಯಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಪ್ರಯತ್ನ ಮುಂದುವರಿಸಿದೆ.

ಸಮರ್ಥ ಸರಕಾರ ನೀಡುವಲ್ಲಿ ಬಿಪ್ಲಬ್‌ ವಿಫಲಗೊಂಡಿದ್ದಾರೆ. ಸುದೀಪ್‌ ರಾಯ್‌ ಬರ್ಮನ್‌ ಜತೆಗೆ ಪ್ರಭಾವಿ ಶಾಸಕರು ಕೈಜೋಡಿಸಿದ್ದಾರೆ. ಬಿಜೆಪಿಯ 36 ಶಾಸಕರಲ್ಲಿ 25 ಮಂದಿ ಬಿಪ್ಲಬ್‌ ಆಡಳಿತದ ವಿಷಯದಲ್ಲಿಅಸಮಾಧಾನ ತಳೆದಿದ್ದಾರೆ. ಸಿಎಂ ಗಾದಿಯಿಂದ ಅವರನ್ನು ತಕ್ಷಣವೇ ಕೆಳಗಿಳಿಸಬೇಕು. ಇಲ್ಲದೇ ಹೋದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲು ಉಂಟಾಗಲಿದೆ ಎಂದು ಭಿನ್ನರ ಬಣ ಎಚ್ಚರಿಸಿದೆ.

ಜೆ.ಪಿ.ನಡ್ಡಾ ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕೂಡ ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ವಿವರ ನೀಡಲು ಶಾಸಕರ ಬಣ ತೀರ್ಮಾನಿಸಿದೆ. ನಡ್ಡಾ ಭೇಟಿಗೆ ಭಾನುವಾರದಿಂದಲೇ ಭಿನ್ನರು ದಿಲ್ಲಿಯಲ್ಲಿ ಠಿಕಾಣಿ ಹೂಡಿದ್ದಾರೆ.


ಇದನ್ನೂ ಓದಿ: ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ: ದಕ್ಷಿಣ ಏಷ್ಯಾದಲ್ಲಿ ಭಾರತವೇ ಮೂರನೇ ಬಡರಾಷ್ಟ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights